February 16, 2026
IMG-20260214-WA0184.jpg

ಚಳ್ಳಕೆರೆ: ರಾಜ್ಯ ಸರ್ಕಾರದ ಆದೇಶದಂತೆ ಚಳ್ಳಕೆರೆ ನಗರ ಆಶ್ರಯ ಸಮಿತಿಗೆ ಅಧಿಸೂಚಿತ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತು ಸಂಬಂಧಿತ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಗರದ ಬಡವರಿಗಾಗಿ ಮನೆ ನಿರ್ಮಾಣ ಹಾಗೂ ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿಯ ಕಾರ್ಯಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಈ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದೇಶದ ಪ್ರಕಾರ ನಾಮನಿರ್ದೇಶನಗೊಂಡ ಸದಸ್ಯರು ಇಂತಿದ್ದಾರೆ:
ಬಿ.ಹೆಚ್.ಹನುಮಂತಪ್ಪ ರೈಲ್ವೇಗೇಟ್ ಹತ್ತಿರ ಚಳ್ಳಕೆರೆ
ಮುಜಿಬುಲ್ಲಾ ಎಸ್ ಬಿನ್ ಅಸರ್ ಮುಲ್ಲ ಜಾಮಿಯಾ ತಾಹೀದ್ ಮಸ್ಜಿದ್, ಚಳ್ಳಕೆರೆ. ಎಂ.ಬಿ. ಭಾಗ್ಯಮ್ಮ ಅಂಬೇಡ್ಕರ್ ನಗರ, ಚಳ್ಳಕೆರೆ
ಜಿ.ಟಿ. ಗೋವಿಂದರಾಜು ಮಾಜಿ ನಗರಸಭಾ ಸದಸ್ಯರಚಳ್ಳಕೆರೆ
ಈ ಜನರನ್ನು ಶಾಸಕ ಟಿ.ರಘುಮೂರ್ತಿ ನಿರ್ದೇಶನದ ಮೇರೆಗೆ ನಗರ ಆಶ್ರಯ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು ಸಕ್ರಿಯವಾಗಿ ಪಾಲ್ಗೊಂಡು ಬಡವರ ಮನೆ ಯೋಜನೆಗಳು ಹಾಗೂ ಸಂಬಂಧಿತ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಸೂಚಿಸಲಾಗಿದೆ.
ಸಮಿತಿಯ ಕಾರ್ಯಚಟುವಟಿಕೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಲಿದ್ದು, ಬಡವರಿಗೆ ಗೃಹಸೌಲಭ್ಯ ಕಲ್ಪಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading