ಹಿರಿಯೂರು:
ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ಗಸ್ತು ನಿರ್ವಹಿಸುವ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಸುಚಿತ್ರಮ್ಮ ಕೋಂ.ರಾಜಶೇಖರ್ ಎನ್ನುವವರು ಅಕ್ರಮವಾಗಿ ಸಂಗ್ರಹಿಸಿದ್ದ ರಾಜವಿಸ್ಕಿ ಎಂಬ ಬ್ರಾಂಡಿನ 90ಎಂ.ಎಲ್.ಸಾಮಾರ್ಥ್ಯದ 69 ಮದ್ಯದ ಟೆಟ್ರಾಪ್ಯಾಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ದೊರೆತ ಒಟ್ಟು 6.210 ಲೀಟರ್ ಮದ್ಯವನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಣೆ ಮಾಡಿರುವುದು ಕಂಡು ಬಂದಿದ್ದು, ಅಬಕಾರಿ ಕಾಯ್ದೆ 1965ರನ್ವಯ ಕಲಂ 14,15ರ ಉಲ್ಲಂಘನೆ ಆಗಿದ್ದು, ಇದೇ ಕಾಯಿದೆಯ ಕಲಂ 32(1), 38(ಎ) ಪ್ರಕಾರ ಶಿಕ್ಷಾರ್ಹಅಪರಾಧವಾಗಿರುತ್ತದೆ.ಎನ್ನಲಾಗಿದ್ದು, ಎ1 ಆರೋಪಿತಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಈ ದಾಳಿಯ ಸಮಯದಲ್ಲಿ ಅಬಕಾರಿ ನಿರೀಕ್ಷಕಿ ಭಾರತಮ್ಮ, ಅಬಕಾರಿ ಉಪನಿರೀಕ್ಷಕ ಡಿ.ಎನ್.ಸಂಜಯಮೂರ್ತಿ, ಅಬಕಾರಿ ಮುಖ್ಯಪೇದೆಗಳಾದ ಸತೀಶ್, ಶ್ರೀನಿವಾಸ್, ಲೋಹಿತ್ ಹಾಗೂ ವಾಹನ ಚಾಲಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.