January 29, 2026
IMG-20250116-WA0097.jpg

ಚಳ್ಳಕೆರೆ ಜ.16

ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಸುರಕ್ಷಿತವಾಗಿ ಹಾಗೂ ರೈತರಿಗೆ ಶೀಘ್ರವಾಗಿ ಒದಗಿಸುವ ಉದ್ದೇಶದಿಂದ ಗಣಕೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಭೂ ಸುರಕ್ಷಾ ಯೋಜನೆಯಡಿಯಲ್ಲಿ ಕಂದಾಯ ಇಲಾಖೆಯ ಭೂ ದಾಖಲೆಗಳ ಗಣಕೀಕರಣ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಸೇವೆಗಳು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಮತ್ತು ಭೂ ದಾಖಲೆಗಳು ಶೀಘ್ರ ಒದಗಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಆಪರೇಟರ್‌ಗಳು ಕೆಲಸ ಮಾಡಬೇಕು .ರೈತರನ್ನು ಅಲೆದಾಡಿಸದೆ ಅಗತ್ಯ ದಾಖಲೆಗಳನ್ನು ನೀಡ ಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ರೇಹನ್ ಪಾಷ ಮಾತನಾಡಿ
ಶಿಥಿಲಗೊಂಡ ದಾಖಲೆಗಳು ಶಿಥಿಲವಾಗಿದ್ದು ಅವುಗಳ ಸುರಕ್ಷತೆ ಹಾಗೂ ರೈತರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಶಾಶ್ವತವಾಗಿ ಡಿಜಿಟಲ್‌ ರೂಪದಲ್ಲಿ ಉಳಿಸಿಕೊಳ್ಳಲು, ಹಾಗೂ ನಕಲಿ ದಾಖಲೆಗಳ ಹಾವಳಿ ತಡೆಯಲು, ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿಸಲು ಮತ್ತು ಅಂತಹ ಮೂಲ ದಾಖಲೆಗಳು ಸಾರ್ವಜನಿಕರಿಗೆ ಆನ್‌ಲೈನ್‌ ಮೂಲಕ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ ಸಕಾರದ ಆದೇಶದಂತೆ ಈಗಾಗಲೆ ದಾಖಲೆಗಳ ಡಿಜಿಟಲ್‌ ಭರದಿಂದ ಸಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವೀರಭದ್ರಯ್ಯ, ರಮೇಶ್ ಗೌಡ, ಬಡಗಿ ಪಾಪಣ್ಣ, ವೀರಭದ್ರ, ಶಿರಸ್ತೆದಾರ್ ಸದಾಶಿವಪ್ಪ .ಗ್ರಾಮಲೆಕ್ಕಾಧಿಕಾರಿಗಳು ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading