January 30, 2026
15CLK3P.jpg

ಚಳ್ಳಕೆರೆ ಜ.15 ನಗರಸಭೆ ವಾಣಿಜ್ಯ ಮಳಿಗೆ ವರ್ಕರಿಗೆ ವಿದ್ಯುತ್ ಶಾಕ್ ನೀಡಿದ ಅಧಿಕಾರಿಗಳು.
ಹೌದು ಇದು ನಗರಸಭೆಗೆ ಸೇರಿದ ಬೆಂಗಳೂರು ರಸ್ತೆ.ಚಿತ್ರದುರ್ಗ ರಸ್ತೆಯ ನೆಹರು ವೃತ್ತದಲ್ಲಿರುವ ನಗರಸಭೆಯ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಯ ಬಾಡಿಗೆದಾರರಿಗೆ ಮಳಿಗೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದರೂ ಖಾಲಿ ಮಾಡದ ಹಿನ್ನೆಯಲ್ಲಿ‌ಬುಧವಾರ ಸಂಜೆ ನಗರಸಭೆ ಹಾಗೂ ಬೆಸ್ಕಾಂ ಇಲಾಖೆ ಜಂಟಿ ಕಾರ್ಯಚರಣೆಯಲ್ಲಿ ನಗರಸಭೆಯ 20 ವಾಣಿಜ್ಯ ಮಳಿಗೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಕೆಲವರು ಕತ್ತಲಲ್ಲಿ ವ್ಯಾವಾರ ನಡೆಸಿದರು ಇನ್ನು ಕೆಲವರು ಯುಪಿಎಸ್ ಸಂಪರ್ಕ ಪಡೆದು ವ್ಯಾಪಾರ ವಹಿವಾಟು ನಡೆಸಿದ ಪ್ರಸಂಗ ಜರುಗಿದೆ.
ವಿದ್ಯುತ್ ಕಡಿತ ಶಾಸಕರ ಬಳಿ ವರ್ತಕರು ದೌಡ್
ನಗರಸಭೆ ಹಾಗೂ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಬಾಡಿಗೆದಾರರು ಶಾಸಕ ಭವನಕ್ಕೆ ದೌಡಾಯಿಸಿ ಶಾಸಕ ಟಿ.ರಘುಮೂರ್ತಿಯವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿಕೊಂಡು ಇದೊಂದು ಬಾರಿ ಕಾಲಾವಕಾಶ ನೀಡಲು ವಿನಂತಿಸಿದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ ಈಗಾಗಲೆ ಹಲವಾರು ಬಾರಿ ಕಾಲವಕಾಶ‌ ನೀಡಲಾಗಿದೆ. ಈಗ ಇಲಾಖೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಎಲ್ಲಾ ಮಾಹಿತಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ಇದು ಸರ್ಕಾರದ ಮಹತ್ವದ ಕೆಲಸವಾದ್ದರಿಂದ ನೀವೆ ಮಳಿಗೆಗಳನ್ನು ಖಾಲಿಮಾಡಿ ನಗರಸಭೆ ಆಡಳಿತಕ್ಕೆ ಸಹಕಾರ ನೀಡಿ. ಮುಂದಿನ ದಿನಗಳಲ್ಲಿ ಮತ್ತೆ ನಿಮಗೆ ಅವಕಾಶ ಮಾಡಿಕೊಡುವ ಬಗ್ಗೆ ಪೌರಾಯುಕ್ತರೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ಬಾಡಿಗೆದಾರರ ಕೆಲವರು ಈಗಾಗಲೇ ಹೈಕೋರ್ಟ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಇದೆ. ಶಾಸಕರ ಉತ್ತರದಿಂದ ಕಸಿವಿಸಿಗೊಂಡ ಬಾಡಿಗೆದಾರರು ಬಂದದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading