ಚಿತ್ರದುರ್ಗಡಿ.15:
ಯುವ ಪೀಳಿಗೆ ದೇಶದ ಸಂಪತ್ತು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹೇಳಿದರು.
ನಗರದ ರೋಟರಿ ಕ್ಲಬ್‍ನಲ್ಲಿ ಈಚೆಗೆ ಆರೋಗ್ಯ ಇಲಾಖೆ, ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ರೋಟರಿ ಕ್ಲಬ್ ಸಂಸ್ಥೆಯವರು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದ ಅವರು, ಮೊಬೈಲ್ ಬಳಕೆ ಹೆಚ್ಚಾಗಿ ಯುವಕರಲ್ಲಿ ಚಂಚಲತೆ ಉಂಟಾಗಿ ಮಾನಸಿಕ ನೆಮ್ಮದಿಗೆ ಧಕ್ಕೆ ಆಗುತ್ತಿದೆ. ಯುವಕರು ಮೊಬೈಲ್ ಬಿಡಿರಿ ಪುಸ್ತಕ ಹಿಡಿಯಿರಿ ಅವಶ್ಯಕತೆ ಇದ್ದಾಗ ಬಳಸಿ ಗುರು ಹಿರಿಯರ, ಪೆÇೀಷಕರ ಮಾರ್ಗದರ್ಶನ ಪಡೆದು ಮುಂದಿನ ಭವಿಷ್ಯಕ್ಕೆ ಭದ್ರಬುನಾದಿ ಹಾಕಿಕೊಳ್ಳಬೇಕು ಎಂದರು.
ಎಚ್‍ಐವಿ ಒಂದು ವೈರಸ್ ನಿಂದ ಹರಡುವ ಸಾಂಕ್ರಾಮಿಕ ರೋಗ. ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸಂಸ್ಕರಿಸದ ಸೂಜಿ ಸಿರೇಂಜ್‍ಗಳಿಂದ, ಪರೀಕ್ಷಿಸದ ರಕ್ತ ಪಡೆಯುವುದರಿಂದ ಮತ್ತು ಸೋಂಕಿತ ಗರ್ಭಿಣಿ ತಾಯಿಯಿಂದ ಜನಿಸುವ ಮಗುವಿಗೆ ಎಚ್‍ಐವಿ ಸೋಂಕು ಹರಡುವ ಸಾಧ್ಯತೆಯಿದ್ದು, ರೋಗ ಹರಡದಂತೆ ಸರ್ಕಾರಿ ಆಸ್ಪತ್ರೆ ವೈದ್ಯರಲ್ಲಿ ಪರೀಕ್ಷೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಸಮುದಾಯಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳ ಮುಖಾಂತರ, ರಕ್ತದಾನ ಶಿಬಿರ ಸೇರಿದಂತೆ ಸಮುದಾಯ ಜಾಗೃತಿಗೊಳಿಸುತ್ತಿರುವುದು ಯುವ ಪೀಳಿಗೆಗೆ ಸಾಂಕ್ರಾಮಿಕ ರೋಗಗಳ ಕುರಿತು ಹೆಚ್ಚಾಗಿ ಜಾಗೃತಿ ಮೂಡಿಸುವ ಮುಖಾಂತರ ರೋಗಗಳಿಂದ ಆಗುವ ಆಘಾತಗಳ ಬಗ್ಗೆ ಮಾಹಿತಿ ನೀಡಿ, ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲಾಗುತ್ತಿದೆ ಸರ್ಕಾರದ ಮಾರ್ಗ ಸೂಚಿಯಂತೆ ಸೋಂಕಿತರ ಪತ್ತೆ ತ್ವರಿತ ಎಆರ್‍ಟಿ ಚಿಕಿತ್ಸ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.
1988 ಡಿಸೆಂಬರ್ ಒಂದರಿಂದ ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತಿದ್ದು ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ ಎಂಬಂತೆ ಎಚ್‍ಐವಿ ಸೋಂಕು ಮುಕ್ತ, ಸೋಂಕಿನಿಂದ ಆಗುವ ಸಾವು ಮುಕ್ತ, ಕಳಂಕ /ತಾರತಮ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲಾ ಕಾಲೇಜುಗಳಲ್ಲಿ, ಜಾತ್ರೆಗಳಲ್ಲಿ, ಸಮುದಾಯದಲ್ಲಿ ಜಾನಪದ ಕಲಾತಂಡದ ಮುಖಾಂತರ ಅರಿವು ಮೂಡಿಸುತ್ತಿರುವುದರಿಂದ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಎಚ್‍ಐವಿ ಸೋಂಕಿತರ ಸಂಖ್ಯೆ ಇಳಿಕೆ ಕಂಡು ಬಂದಿದೆ. ವೈದ್ಯಕೀಯ ಪ್ರಗತಿಯಿಂದಾಗಿ ಎಚ್‍ಐವಿ ಪೀಡಿತರು ದೀರ್ಘ ಮತ್ತು ಆರೋಗ್ಯಕರ ಜೀವನ ನಿರೀಕ್ಷಿಸಬಹುದಾಗಿದೆ. ಎಚ್‍ಐವಿ ಪೀಡಿತ ಜನರ ನೈಜ ಅನುಭವಗಳ ಮೇಲೆ ಬೆಳಕು ಚೆಲ್ಲಲು ಅವರ ಜೀವನಕ್ಕೆ ಅಡ್ಡಿಯಾಗದಂತೆ ಬೆಂಬಲ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಅನುರಾಧ ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.