March 18, 2026
IMG-20251115-WA0111.jpg

ನಾಯಕನಹಟ್ಟಿ: ಬಿರ್ಸಾಮುಂಡಾ ರವರು ಬುಡಕಟ್ಟು ಸಮುದಾಯದ ಸಮಾಜದ ಸ್ಥಿತಿ ಮತ್ತು ದಿಕ್ಕನ್ನೆ ಬದಲಾಯಿಸುವಲ್ಲಿ ಇವರ ಪ್ರಮುಖ ಪಾತ್ರವಾದದ್ದು ಎಂದು ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲ ಟಿ. ಮಂಜಣ್ಣ ಹೇಳಿದರು.

ಸಮೀಪದ ಓಬಯ್ಯನಹಟ್ಟಿ ಗ್ರಾಮದಲ್ಲಿ ಶನಿವಾರ ಬಿರ್ಸಾಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಸ್ವ್ವಾತಂತ್ರö್ಯ ಹೋರಾಟದಲ್ಲಿ ಆದಿವಾಸಿಗಳ ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು, ಅಂತವರ ಸಾಲಿಗೆ ಬಿರ್ಸಾಮುಂಡಾ ಕೂಡ ಸೇರಿದ್ದಾರೆ. ಬ್ರಿಟೀಷ್ ಆಡಳಿತದ ವಿರುದ್ಧ ಪ್ರಾಣ ತ್ಯಾಗ ಮಾಡಿದ ಎಲ್ಲಾರನ್ನು ಸ್ಮರಿಸುವ ದಿನವಾಗಿದೆ. ಬುಡಕಟ್ಟು ಸಮಾಜದ ಹೋರಾಟಗಾರ ಸ್ವಾಭಿಮಾನ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಮಹಾನ್ ಪುರಷ. ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಬಿರ್ಸಾಮುಂಡಾರವರ ಅಪಾರ ಕೊಡುಗೆ, ಹೋರಾಟ ಮತ್ತು ತ್ಯಾಗವನ್ನು ಗೌರವಿಸುವುದು ಈ ಜಯಂತಿಯ ಉದ್ದೇಶವಾಗಿದೆ ಎಂದರು.ಬಿರ್ಸಾ ಮುಂಡಾ ಪ್ರಮುಖ ಬುಡಕಟ್ಟು ನಾಯಕ ಸ್ವಾತಂತ್ರö್ಯದ ಹೋರಾಟಗಾರರಾಗಿದ್ದರು. ಬ್ರಿಟಿಷ್ ವಸಾಹತು ಶಾಯಿ ಎದರುಸುತ್ತಿರುವ ಅನ್ಯಾಯಗಳ ಬಗ್ಗೆ ಜಾಗೃತಿ ಮೂಡಿಸಿ ಅವರ ಹಕ್ಕುಗಳ ಸಂರಕ್ಷಣೆಗೆ ಸಾಂಸ್ಕೃತಿಕ ಸಂರಕ್ಷಣೆ ಘನತೆಗೆ ಹೋರಾಡಿದಂತಹ ಧೀಮಂತ ನಾಯಕ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಪ್ರತಿಪಾಧಿಸಿದರು ಎಂದು ಅವರು ಮಾತನಾಡಿದರು.ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿಕಾಂತ್ ಮಾತನಾಡಿ ಬ್ರಿಟಿಷರ್ ಅನ್ಯಾಯ ಮತ್ತು ಬುಡಕಟ್ಟು ಜನರ ಶೋಷಣೆ ವಿರುದ್ಧ ಬಿರ್ಸಾಮುಂಡಾ ಧ್ವನಿ ಎತ್ತುವ ಮೂಲಕ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದರು. ೧೮೭೫ರಲ್ಲಿ ಜನಿಸಿ ೨೫ ವರ್ಷಗಳ ಕಾಲ ಬದುಕಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದರು. ಪ್ರಸ್ತುತ ಬುಡಕಟ್ಟು ಸಮುದಾಯದವರು ಬಿರ್ಸಾಮುಂಡಾ ರವರನ್ನು ಪೂಜಿಸುತ್ತಿದ್ದರು. ಬ್ರಿಟಿಷರ ವಿರುದ್ಧ ದಂಗೆ ಏಳುವ ಮೂಲಕ ಆದಿವಾಸಿ ಸಮುದಾಯದ ನಾಯಕರಾಗಿ ಹೊರಹೊಮ್ಮಿದರು. ಸಮುದಾಯದ ಜನರನ್ನು ಸಂಘಟಿಸಿದರು. ಬಿರ್ಸಾಮುಂಡಾ ಹುಟ್ಟಿದ ದಿನವಾಗಿದೆ ಸರ್ಕಾರದ ಆದೇಶದ ಮೇರೆಗೆ ಪರಿಶಿಷ್ಟ ಪಂಗಡದ ವರ್ಗದವರು ಎಲ್ಲಿ ವಾಸವಾಗಿದ್ದಾರೆ ಎಂದು ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯ ಎರಡು ಗ್ರಾಮಗಳಾಗಿ ಗಜ್ಜುಗಾನಹಳ್ಳಿ, ಓಬಯ್ಯನಹಟ್ಟಿ ಗ್ರಾಮ ಆರಿಸಿಕೊಂಡಿದ್ದೇವೆ ಎಂದರು.ಓಬಯ್ಯನಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಓಬಯ್ಯನಹಟ್ಟಿ ಗ್ರಾಮಕ್ಕೆ ಅಭಿವೃದ್ಧಿಗೆ ಸಹಕರಿಸಿ ಸುಸಜ್ಜಿತವಾದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿಯ ಪ್ರಾಥಮಿಕ ಶಾಲೆಯಲ್ಲಿ ೧೦ ಕಂಪ್ಯೂಟರ್, ಶುದ್ಧಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಮತ್ತು ಕ್ರೀಡಾಂಗಣ, ಗ್ರಂಥಾಲಯ ಇನ್ನೂ ಹಲವಾರು ಯೋಜನೆಗಳನ್ನು ತಂದು ನಿರ್ಮಿಸಬೇಕೆಂದು ಸೂಚಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಾದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲ ಟಿ. ಮಂಜಣ್ಣ, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ಲಕ್ಷ್ಮಿ ಮಹದೇವಣ್ಣ, ಗೀತಮ್ಮ ಕುಮಾರ್, ಹಾಲಿ ಸದಸ್ಯ ಮಾಜಿ ಅಧ್ಯಕ್ಷರು ಓಬಣ್ಣ, ಗ್ರಾಮಸ್ಥರಾದ ತಿಪ್ಪೇಸ್ವಾಮಿ.ಟಿ, ಸಣ್ಣತಿಪ್ಪಯ್ಯ, ಹನುಮಂತರಾಯ, ಎಸ್‌ಡಿಎಂಸಿ ಅಧ್ಯಕ್ಷ ಪರ್ವತಯ್ಯ, ಕೆ.ಬಿ.ಕಾಮರಾಜ, ನಾಗರಾಜಣ್ಣ ಎನ್., ಅಂಗನವಾಡಿ ಕಾರ್ಯಕರ್ತರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading