ಹಿರಿಯೂರು :
ಪಂಚಾಯತ್ ರಾಜ್ಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ಕೋಟ್ಯಾನುಗಟ್ಟಲೆ ಅನುದಾನ ಬರುತ್ತದೆ, ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಬೋಗಸ್ ದಾಖಲೆ ಸೃಷ್ಟಿಸಿ ಹಣ ಡ್ರಾ ಮಾಡಲಾಗುತ್ತಿದೆ, ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಂತೆಯೇ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಹಗರಣ ನಡೆದಿದೆ ಎಂಬುದಾಗಿ ರೈತ ಸಂಘದ ಅಧ್ಯಕ್ಷರಾದ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿ, ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರನೇ ದಿನದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಎಲ್ಲಾ ಗ್ರಾಮ ಪಂಚಾಯಿತಿಗಳ ತನಿಖೆ ನಡೆಸಿದರೆ ಎಲ್ಲಾ ಅಧಿಕಾರಿಗಳು ತಪ್ಪಿತಸ್ಥರಾಗುತ್ತಾರೆ ಪಂಚಾಯತಿ ವ್ಯಾಪ್ತಿಯಲ್ಲಿ ವಾಣಿಜ್ಯ ಕಂಪನಿಗಳು ಕೈಗಾರಿಕೆಗಳು ಪಂಚಾಯಿತಿಯ ನಿಯಮಗಳ ಪ್ರಕಾರ ಕಂದಾಯ ಕಟ್ಟದೆ ಖಾತೆ ತೆರೆಯದೆ ಅಕ್ರಮವಾಗಿ ನಡೆಯುತ್ತಿರುವ ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಟ್ಯಾನು ಗಟ್ಟಲೆ ಕಾಮಗಾರಿ ನಡೆಸದೆ ಹಣ ಪಡೆದಿರುತ್ತಾರೆ,
ಅಲ್ಲದೆ ಈ ಸ್ವತ್ತು ಮತ್ತು ಖಾತೆ ಮಾಡುವುದಕ್ಕೆ ಇಂತಿಷ್ಟು ಲಂಚ ಕೊಡಬೇಕಲ್ಲದೆ, ಅನೇಕ ಗ್ರಾಮಗಳಲ್ಲಿ ಮರ್ಕ್ಯೂರಿ ದೀಪಗಳು ಉರಿಯುತ್ತಿಲ್ಲ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದಾವೆ ಇವುಗಳನ್ನು ಸಹ ಸರಿಪಡಿಸುತ್ತಿಲ್ಲ ಗ್ರಾಮಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಅನೇಕ ತರದ ರೋಗಗಳು ಪೀಡಿಸುತ್ತಿವೆ,
ಈ ಸಂಬಂಧ ಅನೇಕ ಬಾರಿ ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ರಾಜ್ಯಮಟ್ಟದ ಎಲ್ಲಾ ಅಧಿಕಾರಿಗಳಿಗೆ ಪತ್ರ ಬರೆದರು ಯಾವುದೇ ಕ್ರಮ ವಹಿಸಿರುವುದಿಲ್ಲ ಆದ್ದರಿಂದ ಸಂಬಂಧಪಟ್ಟ ಗ್ರಾಮೀಣ ಅಭಿವೃದ್ಧಿ ಸಚಿವರು ಧರಣಿ ಸಳಕ್ಕೆ ಬಂದು ನಿಯಮಾನುಸಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಈ ಸಭೆಯಲ್ಲಿ ರೈತಮುಖಂಡರುಗಳಾದ ಆಲೂರು ಸಿದ್ದರಾಮಣ್ಣ, ಶಿವಣ್ಣ, ಬಿ.ಆರ್. ರಂಗಸ್ವಾಮಿ, ತಿಮ್ಮಾರೆಡ್ಡಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ನಾಗರಾಜ್ ಕರಿಯಪ್ಪ, ಈರಣ್ಣ, ಎಸ್.ಆರ್.ರಂಗಸ್ವಾಮಿ, ಗೋವಿಂದ, ಈರಣ್ಣ, ಕರಿಯಪ್ಪ, ಚಿತ್ತಪ್ಪ , ರಾಮಣ್ಣ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.