
ಚಳ್ಳಕೆರೆ ನ.15 ಕಂಪ್ಯೂಟರ್ ಹಾಗೂ ಗ್ರಂಥಾಲಯ ವಿದ್ಯಾರ್ಥುಗಳಿಗೆ ಸಹಕಾರಿಯಾಗ ಬೇಕೆಂದು ತಾಪಂ ಇಒ ಶಶಿಧರ್ ಹೇಳಿದರು.
ನಗರದ ಜನತಾ ಕಾಲೋನಿಯಲ್ಲಿರುವ ಅವರು ಮಂಗಳವಾರ ಇಲ್ಲಿನ ಅಂಬಿಕಾ ನಗರದಲ್ಲಿರುವ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿನಿಯರ ಕುಂದುಕೊರತೆ ಆಲಿಸಿ ಮಕ್ಕಳೊಂದಿಗೆ ಊಟ ಸವಿದು ಮಾತನಾಡಿದರು.













ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿರುವ ಊಟ, ಹಾಸಿಗೆ ಮತ್ತು ಶೌಚಾಲಯ ವ್ಯವಸ್ಥೆ, ಸ್ವಚ್ಛ ಕುಡಿಯುವ ನೀರು ಹಾಗೂ ಕಲ್ಪಿಸಲಾಗುತ್ತಿರುವ ಇನ್ನಿತರ ಮೂಲಸೌಕರ್ಯಗಳ ಕುರಿತು ವಿದ್ಯರ್ಥಿನಿಯರಿಂದ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳ ಜ್ಞಾನಾರ್ಜನೆಗೆಂದು ಕಂಪ್ಯೂಟರ್ ಹಾಗೂ ಗ್ರಂಥಾಲಯದ ಕೊಠಡಿಗಳನ್ನು ಮುಚ್ಚಿರುವುದನ್ನು ಕಂಡು ಕೊಠಡಿ ಬಾಗಿಲು ತೆಗೆಸಿ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಕಲಿಸ ಬೇಕು ಹಾಗೂ ಗ್ರಂಥಾಲಯದಲ್ಲಿನಪುಸ್ತಕಗಳನ್ನು ವಿದ್ಯಾರ್ಥಿನಿಯರಿಗೆ ಓದಲು ವ್ಯವದ್ಥೆ ಕಲ್ಪಿಸ ಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಸತಿ ನಿಲಯದಲ್ಲಿ ಉಟೋಪಚಾರ ಚೆನ್ನಾಗಿದೆ. ಸ್ವಚ್ಛ ಕುಡಿಯುವ ನೀರು ಪೂರೈಸಲಾಗುತ್ತಿದೆ. ಶೌಚಾಲಯದ ಸಮಸ್ಯೆ ಯಾಗದಂತೆ ನೋಡಿಕೊಳ್ಳ ಬೇಕು ಓದುವಿಕೆಗೆ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಒದಗಿಸ ಬೇಕು ಯಾವುದೇ ಕುಂದುಕೊರತೆಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೇ ಸಮೀಪಿಸುತ್ತಿರುವುದರಿಂದ ಓದಿನಬಗ್ಗೆ ಹೆಚ್ಚು ಅಶಕ್ತಿ ತೋರಿಸಿ ಶ್ರದ್ದೆ ಪರಿಶ್ರಮದಿಂದ ಓದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಸತಿ ನಿಲಯ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳೊಂದಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶ ದೇವ್ಲಾನಾಯಕ್ ಹಾಗೂ ಸಿಬ್ಬಂದಿಗಳಿದ್ದರು
About The Author
Discover more from JANADHWANI NEWS
Subscribe to get the latest posts sent to your email.