ಹಿರಿಯೂರು :
ನಮ್ಮ ಸಮುದಾಯದಲ್ಲಿ ದೇವರ ಮೇಲಿನ ಭಕ್ತಿಗೆ ಹೆಚ್ಚಿನ ಮಹತ್ವಕೊಟ್ಟು ಅನೇಕ ಸಂಪ್ರದಾಯಗಳನ್ನು ಆಚರಿಸುವುದು ವಿಶೇಷವಾಗಿದೆ ಎಂಬುದಾಗಿ ವಿಧಾನಪರಿಷತ್ ಸದಸ್ಯರು, ಹಾಗೂ ಕರ್ನಾಟಕರಾಜ್ಯ ಗೊಲ್ಲ(ಯಾದವ)ಸಂಘದ ಅಧ್ಯಕ್ಷರಾದ ಡಿ.ಟಿ. ಶ್ರೀನಿವಾಸ್ ಅವರು ಹೇಳಿದರು.
ತಾಲ್ಲೂಕಿನ ಜೆ.ಜೆ. ಹಳ್ಳಿ ಮಜರೆ ಮೂರು ಮನೆಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ(ಬಸವನಗುಡ್ಡೆ) ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದೇವಸ್ಥಾನಕ್ಕೆ ಎಂಟರಿಂದ ಹತ್ತು ಹಳ್ಳಿಗಳ ಭಕ್ತರು ಸೇರಿ ದೇವಸ್ಥಾನ ನಿರ್ಮಿಸಿ ತಮ್ಮ ಭಕ್ತಿ ಮೆರೆದಿದ್ದಾರೆ, ಇದು ನಿಜಕ್ಕೂ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಜೊತೆಗೆ ಧಾರ್ಮಿಕ ಭಾವನೆ ಮೂಡಿಸುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರಲಿಂಗೇಶ್ವರಸ್ವಾಮಿ, ದಿಂಡಾವರ ಬಾಲಕೃಷ್ಣಸ್ವಾಮಿ, ಬಿದರೆ ಶ್ರೀವೀರಭದ್ರಸ್ವಾಮಿ, ಸರಸ್ವತಿದೇವಿ, ಗೊಲ್ಲತ್ತು ಮಾರಮ್ಮ ದೇವಿ ದೇವರುಗಳು ಭಾಗವಹಿಸಿದ್ದವು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಾಪಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ಜಯರಾಮಯ್ಯ, ಸಿ.ಮಹಾಲಿಂಗಪ್ಪ, ಫೂಜಾರಿ ಜಯರಾಮಯ್ಯ, ನಿರಂಜನ್, ಚಿಕ್ಕಣ್ಣ, ಕರಿಯಪ್ಪ, ಸುರೇಶ್, ಚಿತ್ತಪ್ಪ ಸೇರಿದಂತೆ ಊರಿನ ಗ್ರಾಮಸ್ಥರು, ಉಪಸ್ಥಿತರಿದ್ದರು.
