September 16, 2025
Screenshot_20241115_094125.png

ಚಳ್ಳಕೆರೆ ನ. 15

ವರ್ಷಗಳ ನಂತರ ಕೆರೆಗೆ ನೀರು ಬಂದಿದ್ದು‌ತುಂಬಿದ ಕೆರೆ ಏರಿ ದುರಸ್ತಿ ನೆಪದಲ್ಲಿ ಕೆರೆ ಏರಿ ಮಣ್ಣ ತೆಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ‌ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಕೆರೆಗೆ ಅಪರೂಪಕ್ಕೆ ಅಕಾಲಿಕ‌ ಮಳೆಗೆ ಅರ್ದಕೆರೆಗೆ ನೀರು ಬಂದಿದ್ದು ಈಗ ಚನ್ನಾಗಿರುವ ಕೆರೆ ಕೇರಿ ಮಣ್ಣ ಹಾಗೂ ಕಲ್ಲಿನ‌ಕಟ್ಟಡವನ್ನು ಜೆಸಿಬಿ ಯಂತ್ರದಿಂದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೀಳಲು ಮುಂದಾಗಿದ್ದಾರೆ.
ಪೂರ್ವಜನರು ಜನ ಜಾನುವಾರುಗಳಿಗೆ ಕುಡಿಯಲು ಅಂತರ್ಜಲ ವೃದ್ಧಿಗಾಗಿ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ.
ಚನ್ನಾಗಿರುವ ಕೆರೆ ಏರಿ ಹಾಗು ಕಲ್ಲಿನ ಕಟ್ಟಡ ಕೀಳುವುದರಿಂದ ಕೆರೆ ಏರಿಗೆ ಅಪಾಯವಾಗಿ ನೀರು ಪೋಲಾಗುವ ಸಾಧ್ಯತೆವಿದೆ ಕೂಡಲೆ ಚನ್ನಾಗಿರುವ ಕಾಮಗಾರಿಯನ್ನು ಕೀಳುವುದನ್ನು ನಿಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ದೂರವಾಣಿ ಕರೆ ಮಾಡಿದರೆ ಶಾಸಕರು ಹೇಳಿದ್ದಾರೆ ಆದ್ದರಿಂದ ಕಿತ್ತು ದುರಸ್ಥಿ ಮಾಡಿಸುತ್ತೇವೆ ಎಂದು ಉತ್ತರ ಹೇಳಿ ಕರೆ ಕಟ್ ಮಾಡುತ್ತಾರೆ ಎಂದು ಗ್ರಾಮದ ಶ್ರೀನಿವಾಸ್ ರೆಡ್ಡಿ ಜನಧ್ವನಿಗೆ ಮಾಹಿತಿ ನೀಡಿದ್ದಾರೆ.

ದೊಡ್ಡ ಉಳ್ಳಾರ್ತಿ ಕೆರೆ ಏರಿ ಮಣ್ಣಿ ತೆಗೆಯಲು ಗ್ರಾಮಸ್ಥರ ವಿರೋಧ

ದುರಸ್ಥಿ ಕಾಣದ ಕೆರೆಗಳು.
ತಾಲೂಕಿನ ಬಹುತೇಕ ಕೆರೆಗಳು ಒತ್ತುವರಿ, ಏರಿ ಕುಸಿತ–ಬಿರುಕು, ಹೂಳು, ಸಂಗ್ರಹ ಸಾಮರ್ಥ್ಯ ಕ್ಷೀಣ, ಜಲಮೂಲಗಳ ನಾಶ, ಗಿಡಗಂಟಿ ತ್ಯಾಜ್ಯ ಸಮಸ್ಯೆಗಳಿಂದ ಸೊರಗಿವೆ. ನಿರ್ವಹಣೆ ಇಲ್ಲದೆ ಕೋಡಿ, ತೂಬುಗಳು ಹಾಳಾಗಿವೆ.

ಕೆಲವೆಡೆ ಚರಂಡಿ ಕೊಳಕು ಕೆರೆಯ ಒಡಲಿಗೆ ಸೇರುತ್ತಿದೆ. ಜಲ ಮಲಿನವಾಗಿ ಬಳಕೆಗೆ ಯೋಗ್ಯವಾಗಿಲ್ಲ. ಇಂತಹ ಕೆರೆಗಳ ನಿರ್ವಹಣೆ ಮಾಡುವ ಬದಲು ಚೆನ್ನಾಗಿರುವ ಕೆರೆ ಏರಿ ಮಣ್ಣ ತೆಗೆಸುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading