September 15, 2025
IMG-20241114-WA0169.jpg

ಹೊಸದುರ್ಗ: ಭಾರತ ದೇಶದಲ್ಲಿ ಸರ್ವ ಜನಾಂಗದವರಿಗೂ ಬದುಕಲು ಸಮಾನ ಅವಕಾಶವಿದ್ದು ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ ಬದುಕಬೇಕು ಅದನ್ನು ಬಿಟ್ಟು ಯಾರಾದರೂ ಜಾತಿ ನಿಂದನೆ ಅಸ್ಪೃಶ್ಯತೆ ಮಾಡಿದರೆ ಭಾರತ ಸಂವಿಧಾನದಲ್ಲಿ ಕಾನೂನಿನ ಮೂಲಕ ಶಿಕ್ಷೆ ಆಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಪ್ಪ ಹೇಳಿದರು.

ತಾಲೂಕಿನ ಶ್ರೀರಾಂಪುರ ಮತ್ತು ಕೇಲ್ಲೋಡು ಗ್ರಾಮಗಳಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಡಿಲು ಸಂಸ್ಥೆ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ನಾವು ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದ ಮೂಲಕ ಗೆಲ್ಲಬೇಕು. ಹೆಚ್ಚಿನದಾಗಿ ಅಂತರ್ಜಾತಿ ವಿವಾಹವಾಗಬೇಕು ಆಗ ಮಾತ್ರ ಅಸ್ಪೃಶ್ಯತೆ ನಿವಾರಣೆ ಆಗಲು ಅನೂಕುಲವಾಗುತ್ತದೆ. ಜಾತಿ ನಿಂದನೆ ಮಾಡಿದರೆ ಸಂವಿಧಾನದಲ್ಲಿನ ಕನೂನಿನ ಮೂಲಕ ಕಠಿಣ ಕಾನೂನು ಇದೆ ಎಂದರು.

ಸಂವಿಧಾನ ಬರುವ ಮೊದಲು ದಲಿತರು ದೇವಸ್ಥಾನ, ಹೋಟೆಲ್ ಗಳಿಗೆ ಹೋದಾಗ ಸವರ್ಣಿಯರು ದೂರ ನಿಲ್ಲಿಸುವುದರ ಮೂಲಕ ಕ್ರೂರವಾಗಿ ನೋಡುತ್ತಿದ್ದರು.
ದಲಿತರ ಸ್ಥಾನಮಾನಗಳ ಹಿಂದಿನ ಕಾಲದಲ್ಲಿ ಯಾವ ರೀತಿ ಇತ್ತು ಎಂಬುವುದನ್ನ ಮಡಿಲು ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಕಿರು ನಾಟಕವೇ ಸಾಕ್ಷಿ ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹವಾದರೆ ಸಹಾಯಧನ ಇದೆ ಹಾಗೂ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಡಿಎಸ್ಎಸ್ ಮುಖಂಡ ಕೈನೋಡು ಚಂದ್ರಪ್ಪ ಮಾತನಾಡಿ ದೇಶದಲ್ಲಿ ಸ್ವಾತಂತ್ರ್ಯ ಬಂದು ಹಲವು ವರ್ಷಗಳ ಕಳೆದರೂ ಅಸ್ಪೃಶ್ಯತೆ ಎಂಬುದು ಇನ್ನೂ ನಿವಾರಣೆ ಆಗಿಲ್ಲ. ಇದರಿಂದ ಸಂವಿಧಾನ ಬರುವುದಕ್ಕೂ ಮೊದಲು ದಲಿತರು ಎಲ್ಲಿಯೂ ಸಹ ಓಡಾಡಬಾರದು ಅಂತ ಪರಿಸ್ಥಿತಿ ಇದ್ದು ಅವರು ಓಡಾಡಬೇಕೆಂದರೆ ಸೂರ್ಯ ನೆತ್ತಿಯ ಮೇಲೆ ಬಿದ್ದಾಗ ಅವರ ನೆರಳು ಅವರಲ್ಲಿ ಇದ್ದಾಗ ಮಾತ್ರ ಅವರು ಬೇರೆ ಕಡೆ ನಡೆದಾಡುವ ಪರಿಸ್ಥಿತಿ ಇತ್ತು. ಆದರೆ ದೇಶಕ್ಕೆ ಸ್ವಾತಂತ್ರ ಬಂದ ನಂತರ ಡಾ. ಬಿಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಕಾನೂನು ಹಾಗೂ ಹಕ್ಕುಗಳನ್ನು ತಂದರು. ಇದರಿಂದ ವಿವಿಧ ಜಾತಿಯಿಂದ ಕೂಡಿದ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇರುವುದು ಖಂಡನೀಯ ಎಂದು ತಿಳಿಸಿದರು.

ಶ್ರೀರಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ನಾಯಕ್ ಮಾತನಾಡಿ ಕಾನೂನಿನ ಮೂಲಕ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ ಇದರಿಂದ ಪ್ರತಿಯೊಬ್ಬರು ಯಾವುದೇ ರೀತಿಯ ಜಾತಿ ಭೇದ ಭಾವ ಮಾಡದೆ ಸರ್ವರು ಸಮಾನರು ಎಂದು ಪ್ರೀತಿ ವಿಶ್ವಾಸದಿಂದ ಅರಿತು ಬಾಳಿದರೆ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯ ಎಂದರು.

ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಅಸಮಾನತೆಯಿಂದ ಕೂಡಿದ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಬುದ್ಧ, ಬಸವ, ಅಂಬೇಡ್ಕರ್ ಅನರೆಕ ಮಹಾನೀಯರು ಹೋರಾಟ ನಡೆಸಿದ್ದಾರೆ. ಆದರೂ ಸಹ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಎಂಬುದು ಇನ್ನೂ ತಾಂಡವಾಡುತ್ತಿದೆ ಕೆಲವು ಗ್ರಾಮೀಣ ಭಾಗದಲ್ಲಿ ಈಗಲೂ ಸಹ ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇವೆ ಇದರಿಂದ ಪ್ರತಿಯೊಬ್ಬರು ಜಾತಿ ಭೇದ ಮರೆತು ಎಲ್ಲರೂ ಸಹ ಮನುಷ್ಯರೇ ಎಂದು ತಿಳಿದು ಬಾಳಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕರಾದ ರಾಘವೇಂದ್ರ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಇದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆದು ವಿದ್ಯಾವಂತರಾದಾಗ ಮಾತ್ರ ಅಸ್ಪೃಶ್ಯತೆ ನಿವಾರಣೆ ಮಾಡಲು ಸಾಧ್ಯ ಅದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಕೊಡಿಸಬೇಕು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ವಸತಿ ನಿಲಯ ವ್ಯವಸ್ಥೆ ಇರುವುದರಿಂದ ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ಯುವ ವಕೀಲರಾದ ಪ್ರತಾಪ್ ಮಾತನಾಡಿ ಕಾನೂನಿನ ಅಡಿಯಲ್ಲಿ ಸರ್ವರು ಸಮಾನರು ಯಾರಾದರೂ ಜಾತಿ ನಿಂದನೆ ಮಾಡಿದರೆ ಅಂತವರ ವಿರುದ್ಧ ವಿವಿಧ ರೀತಿಯ ಪ್ರಕರಣಗಳು ದಾಖಲಾಗುತ್ತದೆ. ಅದರಲ್ಲಿ ಅಟ್ರಾ ಸಿಟಿ ಕೇಸ್ ದಾಖಲಾದರೆ ಕಾನೂನಿನ ಅಡಿಯಲ್ಲಿ ಅವರು ಹೊರಬರದೆ ಜೈಲಿನೊಳಗೆ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕಾನೂನನ್ನು ಅರಿತು ಬದುಕಬೇಕು ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ತಿಳಿಸಿದರು.

ಕೇಲ್ಲೋಡು ಗ್ರಾಮದಲ್ಲಿ ನಡೆದ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮದಲ್ಲಿ 85 ವರ್ಷದ ಪಾರ್ವತಮ್ಮ ಎಂಬ ವೃದ್ಧ ಮಹಿಳೆ ಭಾಗವಹಿಸಿ ಕಾರ್ಯಕ್ರಮ ಮುಗಿಯುವವರೆಗೂ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು,

ಈ ಒಂದು ಸಂದರ್ಭದಲ್ಲಿ ಶ್ರೀರಾಪುರ ಹಾಗೂ ಕೆಲ್ಲೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ಮೂಡಗಿರಿಯಪ್ಪ,
ರಾಘವೇಂದ್ರ ಡಿಎಸ್ಎಸ್ ಸಂಘಟನೆಯ ಮುಖಂಡ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕರಾದ ಬಾಬು ಬಿ.ಸಿ, ಮೂಡಲ ಗಿರಿಯಪ್ಪ, ಕೇಲ್ಲೋಡು ಗ್ರಾ.ಪಂ.ಅಧ್ಯಕ್ಷೆ ಶಿಲ್ಪ ಮಧುಸೂದನ್, ಶಿಕ್ಷಕಿ ಕಲಾವತಿ, ಮಡಿಲು ಸಂಸ್ಥೆಯ ಖಜಾಂಚಿ ಪ್ರದೀಪ್, ಸಂಘಟನಾ ಕಾರ್ಯದರ್ಶಿ ದರ್ಶನ್, ನಿರ್ದೇಶಕರಾದ ದ್ಯಾಮ ಕುಮಾರ್ ,ಪ್ರವೀಣ್ ಕುಮಾರ್ ಹಾಗೂ ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading