
ಚಳ್ಳಕೆರೆ ನ.15
ಚಳ್ಳಕೆರ
ಬೀಜ ಗೊಬ್ಬರ ಹಾಕಿದ ಭೂಮಿ ಎಂದೂ
ರೈತರನ್ನು ಕೈ ಬಿಡುವುದಿಲ್ಲ ಎಂಬ ನಾಣ್ಣುಡಿ,
ಪ್ರಸ್ತುತ ರೈತರಿಗೆ ಅನ್ವಯವಾಗದಂತಹ ಸ್ಥಿತಿ
ನಿರ್ಮಾಣವಾಗಿದೆ. ಬಿತ್ತಿದ ಬೆಳೆ ಮಳೆ
ಭೂಮಿಯಲ್ಲಿಯೇ ಅಕಾಲಿಕ ಮಳೆಯ
ಆವಾಂತರದಿಂದ ಹೊಲದಲ್ಲೇ
ಕೊಳೆಯುವಂತಾಗಿದೆ
ಹೌದು, ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಸುರಿದ ಅಕಾಲಿಕ ಮಳೆಗೆ ಹೊಲದಲ್ಲಿ ಕಟಾವು ಮಾಡಿದ ಶೇಂಗಾ ಬೆಳೆ ಸಿಲುಕಿ ಹಾಳಾಗಿದೆ ಇದು ಕೇವಲ ರೈತ ಮಂಜಣ್ಣನ ಒಬ್ಬರ ಕಥೆಯಲ್ಲ ಬಯಲು ಸೀಮೆಯ
ಬರ ಪೀಡಿತ ಪ್ರದೇಶ
ಜಿಲ್ಲೆಯ
ಹಣೆಪಟ್ಟಿಕೊಟ್ಟಿಕೊಂಡಿರುವ ಬಹುತೇಕ ರೈತರ ಪರಿಸ್ಥಿತಿ. ಬಡವರ
ಬಾದಾಮಿ ಎಂದು ಖ್ಯಾತಿ ಪಡೆದಿರುವ
ಶೇಂಗಾ ಬೆಳೆ, ಈ ಬಾರಿಯೂ ಕೈಕೊಟ್ಟಿದೆ.
ಕೈಯಲ್ಲಿದ್ದ ಹಣವೂ ಹೋಯಿತು, ಭೂ
ತಾಯಿ ಒಡಲು ಸೇರಿದ ಬಿತ್ತನೆ ಬೀಜ-
ಗೊಬ್ಬರ ಬೇಸಾಯ, ಕೂಲಿ, ರೈತರ ಶ್ರಮ
ಎಲ್ಲವೂ ವ್ಯರ್ಥವಾಗಿದೆ.
ರೈತನ ಬಾಳಿಗೆ ಆಸರೆಯಾಗಬೇಕಿದ್ದ
ಶೇಂಗಾ ಬೆಳೆ, ಮಳೆಗೆ ಸಿಲುಕಿ ಹೊಲದಲ್ಲೇ
ಕೊಳೆಯುತ್ತಿದೆ.
ಜಾನುವಾರುಗಳಿಗೂ
ವೇವಿನ ಕೊರತೆ ಎದುರಾಗುವ ಭೀತಿರೈತರನ್ನು ಕಾಡುತ್ತಿದೆ.

ತಾಲೂಕಿನಾದ್ಯಂತ ಮುಂಗಾರು
ಹಂಗಾಮಿನಲ್ಲಿ ಬಿತ್ತನೆ ಮಾಡಿದ ಪ್ರಮುಖ
ವಾಣಿಜ್ಯ ಬೆಳೆ, ಶೇಂಗಾ, ಬಿತ್ತನೆ ನಂತರ
ಮುಂಗಾರು
ಮಳೆಯಕಣ್ಣಾಮುಚ್ಚಾಲೆಯಿಂದ ಹೂ ಕಟ್ಟುವ
ಸಮಯದಲ್ಲಿ ಕೀಟ ಬಾಧೆಗೆ ತುತ್ತಾಯಿತು.
ಬಿಸಿಲಿನ ತಾಪದ ನಡುವೆ ಬೆಂಕಿ ರೋಗಕ್ಕೆ
ತುತ್ತಾಗಿ ಶೇಂಗಾ ಬೆಳೆ ಬಾಡಲು ಪ್ರಾರಂಭಿಸಿ,
ಇಳುವ ಕುಂಠಿತಗೊಂಡು ಅಕಾಲಿಕ ಮಳೆಯಿಂದ ಶೇಂಗಾ ಬೆಳೆ ಚೇತರಿಸಿಕೊಂಡು ಇಳುವರಿ ಕನದು ಕಂಡ ರೈತನಿಗೆ ಅಕಾಲಿಕ ಮಳೆಯಿಂದ ಬೆಳೆ ಕೈಕೊಟ್ಟಿದೆ.
ಬೂದಿರೋಗದಿಂದ ಗಿಡದಲ್ಲಿದ್ದ ಶೇಂಗಾವೂ ಭೂಮಿ ತಾಯಿ ಒಡಲು ಸೇರಿ ಮೊಳಕೆ ಒಡೆಯಲು ಪ್ರಾರಂಭಿಸಿವೆ
ಹೆಚ್ಚಾಗಿಬೂದಿರೋಗದಿಂದ ಬೆಳೆ ಇಳುವರಿ ಕುಂಠಿತಗೊಂಡ ಬೆನ್ನಲ್ಲೇ ಅಕಾಲಿಕ ಮಳೆಯಿಂದ
ಹೊಲದಲ್ಲಿಯೇ ಬೆಳೆ ಕೊಳೆಯುತ್ತಿದೆ. ದನ-
ಕರುಗಳಿಗೂ ಮೇವಿನ ಕೊರತೆಯೂ ಎದುರಾಗುವ ಭೀತಿಯಿದೆ.







ಗೋಪನಹಳ್ಳಿ ಗ್ರಾಮದ ರೈತ ಮಂಜುನಾಥ ಮಾತನಾಡಿ
ಅವೈಜ್ಞಾನಿಕ ಬೆಳೆ ವಿಮೆ: ಬೆಳೆ ಹಾನಿ
ಕುರಿತು ಕಂದಾಯ, ಕೃಷಿ ಮತ್ತು ವಿಮಾ
ಕಂಪನಿ ಅಧಿಕಾರಿಗಳು ಸಮೀಕ್ಷೆ
ನಡೆಸುತ್ತಿರುವ ಪದ್ಧತಿ ಅವೈಜ್ಞಾನಿಕವಾಗಿದ್ದು ಅತಿವೃಷ್ಠಿ ಅನಾವೃಷ್ಠಿಗೆ ಸಿಲುಕಿ ರೈತರ ಬೆಳೆ ನಷ್ಟವಾಗಿರುವುದನ್ನು ಪರಿಶೀಲನೆ ಮಾಡಿ ಬೆಳೆ ವಿಮೆ ಪರಿಹಾರ ಕೊಡುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.