March 17, 2026
IMG-20251015-WA0173.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಂಘಟನೆಗಳು ಕೇವಲ ಹೆಸರಿಗೆ ಮಾತ್ರ ಇರದೆ ಸದಾ ಸಕ್ರಿಯವಾಗಿದ್ದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಾಲಿಗ್ರಾಮ ತಾಲೂಕು ಶ್ರೀ ಯೋಗಾನರಸಿಂಹಸ್ವಾಮಿ ಧ್ವನಿವರ್ಧಕ, ಶಾಮಿಯಾನ ಮತ್ತು ಲೈಟಿಂಗ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಕರ್ಪೂರವಳ್ಳಿ ರಾಜೇಶ್ ಅವರು ಹೇಳಿದರು.

ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ಸಾಲಿಗ್ರಾಮ ತಾಲೂಕು ಶ್ರೀ ಯೋಗಾನರಸಿಂಹಸ್ವಾಮಿ ಧ್ವನಿವರ್ಧಕ, ಶಾಮಿಯಾನ ಮತ್ತು ಲೈಟಿಂಗ್ಸ್ ಮಾಲೀಕರ ಸಂಘದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಒಂದು ಸಂಘಟನೆಯೂ ಆರಂಭಗೊಂಡ ದಿನದಿಂದ ತಮ್ಮ ಸಂಘದ ಕಾರ್ಯ ಚಟುವಟಿಕೆಗಳೊಂದಿಗೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಬೇಕು ಆ ಮೂಲಕ ಸಂಘದ ವತಿಯಿಂದ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದರು.

ಸಾಲಿಗ್ರಾಮ ಪಟ್ಟಣದಲ್ಲಿ ತಾಲೂಕು ಶ್ರೀ ಯೋಗಾನರಸಿಂಹಸ್ವಾಮಿ ಧ್ವನಿವರ್ಧಕ, ಶಾಮಿಯಾನ ಮತ್ತು ಲೈಟಿಂಗ್ಸ್ ಮಾಲೀಕರ ಸಂಘವು 2022ರಲ್ಲಿ ಸ್ಥಾಪನೆಯಾಗಿದ್ದು 35ಮಂದಿ ಸದಸ್ಯರನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಸಂಘದ ಸದಸ್ಯರಿಗೆ ಸಂಘದ ವತಿಯಿಂದ ವಿಮೆ ಮಾಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು. ಸಂಘದಿಂದ ಹಮ್ಮಿಕೊಳ್ಳುವ ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಸಂಘದ ಬೆಳವಣಿಗೆಗೆ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳಿಗೆ ಸಂಘದ ಸರ್ವ ಸದಸ್ಯರುಗಳು ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರುಗಳಾದ ಮಿರ್ಲೆಪ್ರಕಾಶ್, ತಂದ್ರೆ ಸೋಮಶೇಖರ್, ಸಾಲಿಗ್ರಾಮ ಧರ್ಮ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಹರ್ಷವರ್ಧನ, ಉಪಾಧ್ಯಕ್ಷ ಪ್ರಕಾಶ, ಕಾರ್ಯದರ್ಶಿ ಗಿರೀಶ, ಖಜಾಂಚಿ ನವರತ್ನ ಕುಮಾರ, ಕೃಷ್ಣರಾಜನಗರ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ಮಾಜಿ ಅಧ್ಯಕ್ಷ ಕರ್ತಾಳು ಹರೀಶ್, ಸಂಘದ ಸದಸ್ಯರುಗಳಾದ ಶ್ರೀನಿವಾಸ್, ರವಿ, ಭೈರನಾಯಕ, ವಿಷ್ಣು, ಧರ್ಮ, ಪ್ರಸನ್ನ, ದೀಕ್ಷಿತ್, ಕಾಳಮ್ಮನಕೊಪ್ಪಲು ಚಂದ್ರಚಾರಿ, ಕಿಶೋರ್, ರುದ್ರೇಗೌಡ, ಪ್ರದೀಪ್, ರಾಮಲಿಂಗು ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading