ಚಳ್ಳಕೆರೆ ಅ.15ಪಂಚ ಗ್ಯಾರಂಟಿಗಳು ಕರ್ನಾಟಕ ಸರಕಾರದ ಅತ್ಯಂತ ಮಹತ್ವದ ಯೋಜನೆಗಳಾಗಿದ್ದು, ಅರ್ಹತೆ ಹೊಂದಿರುವ ಯಾವುದೇ ಫಲಾನುಭವಿಗಳು ತಂತ್ರಾಂಶದ ನೋಂದಣಿ ಸೇರಿದಂತೆ ಯಾವುದೇ ಕಾರಣದಿಂದ ವಂಚಿತರಾಗದಂತೆ ಅನುಷ್ಠಾನ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.



ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಜರುಗಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ನಾಗರಿಕರ ಜೀವನದ ಗುಣಮಟ್ಟ ಸುಧಾರಣೆಗೆ ಪೂರಕವಾಗಿದ್ದು ಬೇರೆ ದೇಶಗಳಲ್ಲೂಪ್ರಶಂಸೆಗೆ ಪಾತ್ರವಾಗಿದ್ದು, ಬರಪೀಡಿತ ತಾಲೂಕಿನಲ್ಲಿ ಶೇ ನೂರರಷ್ಟು ಅನುಷ್ಠಾನಕ್ಕೆ ಮುಂದಾಗುವಂತೆ ಸೂಚಿಸಿದರು.
ತಾಪಂ ಇಒಶಶಿಧರ್ ಮಾತನಾಡಿ ಅನರ್ಹ ಬಿಪಿಎಲ್ ಪಡಿತರರಾರ ಪಟ್ಟಿ ತಯಾರಿಸಿ ಗ್ಯಾರೆಂಟಿ ಸಮಿತಿ ಸದಸ್ಯರಿಗೆ ನೀಡಿ ಪರಿಶೀಲನೆ ನಡೆಸಿ ರದ್ದು ಪಡಿಸಲಾಗುವುದು ಎಂದರು..ಸದಸ್ಯ ಜನಾರ್ದನ ಮಾತನಾಡಿ ತಾಲೂಕಿನಲ್ಲಿ ಮೃತಪಟ್ಟವರ ಖಾತೆಯ ದಾಖಲೆ ನೀಡಿದರೂ ಇನ್ನು ಅವರ ಖಾತೆಗೆ ಹಣ ಬೀಳುತ್ತಿದ್ದು ಅರ್ಹ ಫಲಾನುಭವಿಗಳ ಖಾತೆಗೆ ಹಣ ಬರುತ್ತಿಲ್ಲ ನಾನೇ ಸುಮಾರು ಐದು ಜನರ ಮೃತಪಟ್ಟವರ ದಾಖಲೆ ನೀಡಿದರೂ ರದ್ದಾಗಿಲ್ಲ ಎಂದು ಸಭೆ ಗಮನ ಸೆಳೆದರು.
ಶಿಶು ಅಭಿವೃದ್ಧಿ ಅಧಿಕಾರಿ ರಾಜನಾಯ್ಕ ಮಾತನಾಡಿ ತಾಲೂಕಿನಲ್ಲಿ ಸುಮಾರು800 ರೂ ಜನರು ಮೃತ ಪಟ್ಟಿದ್ದು 12.97 ಲಕ್ಷ ರೂ ಸರಕಾರಕ್ಕೆ ಮರಳಿ ಹೋಗಿದೆ ಇದು ತಂತ್ರಾಂಶದ ಸಮಸ್ಯೆ ಇತ್ತು ಈಗ ಸರಿಯೋಗಿದೆ ಎಂದರು.
ಮಲ್ಲೂರಹಳ್ಳಿಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗೃಹಲಕ್ಷ್ಮಿ ಹಣ ದಿಂದ ಹಸು ಖರೀದಿಸಿ ಆರ್ಥಿಕವಾಗಿ ಮುಂದೆ ಬಂದರೆ ಎಷ್ಟೋಜನ ಶಾಲಾ ಮಕ್ಕಳಿಗೆ ಶುಲ್ಕ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸಿದ್ದಾರೆ ಎಂದು ಸದಸ್ಯರು ಸಭೆ ಗಮನ ಸೆಳೆದರು.
ಇಂತಹ ಯಶೋಗಾದೆಗಳ ವೀಡಿಯೋ ಚಿತ್ರೀಕರಣ ಮಾಡಿ ಸಂಗ್ರಹಿಸುವಂತೆ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹಾಗೂ ತಾಪಂ ಇಒ ಶಶಿಧರ್ ಸೂಚನೆ ನೀಡಿದರು.
ಸಭೆಯಲ್ಲಿ ಗ್ಯಾರೆಂಟಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.