January 29, 2026


ಹಿರಿಯೂರು :
ಇತ್ತೀಚಿಗೆ ನಡೆದ ಗಾಜಿಯಾಬಾದ್ ಲೋಹಿಯಾ ನಗರದ ಹಿಂದಿ ಭವನದಲ್ಲಿ ಸೆಪ್ಟಂಬರ್ 29 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ ಯತಿ ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ರವರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯ ಎಂಬುದಾಗಿ ಮುಸ್ಲಿಂ ಮುಖಂಡರಾದ ಮುನೀರ್ ಮುಲಾನ್ ಹೇಳಿದರು.
ನಗರದ ಗಾಂಧಿವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ವಿಶ್ವ ಪ್ರವಾದಿ ಮೊಹಮ್ಮದ್ ರವರನ್ನು ನಿಂದಿಸಿದ ಕೋಮುದ್ವೇಷಯತಿ ನರಸಿಂಹಾನಂದಸರಸ್ವತಿ ವಿರುದ್ಧ ಪ್ರತಿಭಟನೆ ನಡೆಸಿ, ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ವಿಜಯದಶಮಿಯಂದು ರಾವಣನ ಪುತ್ಥಳಿ ಬದಲಿಗೆ ಮಹಮ್ಮದ್ ಪೈಗಂಬರ್ ರವರ ಪುತ್ಥಳಿಯನ್ನು ಭಸ್ಮ ಮಾಡಬೇಕೆಂದು ಕರೆ ನೀಡಿದ್ದು, ಈ ಹಿಂದೆ 2021 ರಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ನಡೆದ ಸಭೆಯಲ್ಲಿ ಕೂಡ ಇದೇ ರೀತಿ ದ್ವೇಷ ಭಾಷಣ ಮಾಡಿದ್ದು, 2022 ರಲ್ಲಿ ದ್ವೇಷ ಭಾಷಣ ಮಾಡಿದ್ದಾಗಿನ ಸಂದರ್ಭದಲ್ಲಿ ನರಸಿಂಹಾನಂದಸರಸ್ವತಿ ಇವರನ್ನು ಬಂಧಿಸಲಾಗಿತ್ತು.
ಈ ಬಾರಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಇಸ್ಲಾಂ ಧರ್ಮ, ಭಾವನೆಗೆ ಧಕ್ಕೆ ತಂದಿರುತ್ತಾರೆ, ಇಂತಹ ವ್ಯಕ್ತಿಯನ್ನು ಕಾನೂನು ವ್ಯಾಪ್ತಿಯಲ್ಲಿ ಬಂಧಿಸಿದರೂ ಜಾಮೀನು ಮುಖಾಂತರ ಹೊರಬರುತ್ತಾರೆ, ಆದ್ದರಿಂದ ಇಂತಹ ವ್ಯಕ್ತಿಯನ್ನು ಯು.ಎ.ಪಿ.ಎ ಅಡಿಯಲ್ಲಿ ಬಂಧಿಸಿ, ಅವರ ಮೇಲೆ ದೇಶದ್ರೋಹಿ ಪ್ರಕರಣವನ್ನು ದಾಖಲಿಸಬೇಕೆಂದು ಈ ಮೂಲಕ ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ ಮುನೀರ್ ಮುಲ್ಲಾ, ಜಾಫರ್ ಹಜಾರ್ತಾ, ಮುಲ್ನಾ ಮೊಹಸಿನ್ ಸಾಬ್, ಎಸ್.ಡಿ.ಪಿ.ಐ ಮುಖಂಡರಾದ ಮೊಹಮ್ಮದ್ ಶೋಯಬ್, ಡಿ.ನಜೀರ್, ಮಹಮ್ಮದ್ ಉಮರ್, ಕೆಕೆ ಖಾಲಿದ್, ಮೊಹಮ್ಮದ್ ಮುಸೈಬ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading