
ವರದಿ: ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ: ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜವನ್ನು ಸೇರ್ಪಡೆಗೊಳಿಸಲು ಹೊರಟಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಟಯ್ಯ ಆಗ್ರಹಿಸಿದರು.


ಮುಂದುವರೆದು ಮಾತನಾಡಿದ ಅವರು ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸೆ.16ರಂದು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಇದು ಖಂಡನೀಯ! ಯಾಕೆಂದರೆ ಉತ್ತರ ಕರ್ನಾಟಕದಲ್ಲಿ ಹಲವಾರು ಜನಾಂಗದವರನ್ನು ಹಾಗೂ ದಕ್ಷಿಣ ಕರ್ನಾಟಕದಲ್ಲಿಯೂ ಹಲವು ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈಗ ನಮಗೆ 7.5ರಷ್ಟು ಮೀಸಲಾತಿಯು ಸರಿಯಾಗಿ ದೊರೆಯುತ್ತಿಲ್ಲ, ನಾವುಗಳು ಹಿಂದುಳಿದ ಜನಾಂಗಕ್ಕೆ ಸೇರಿದವರಾಗಿ, ಬುಡಕಟ್ಟು ಸಮುದಾಯದವರಾಗಿ ನಮ್ಮಲ್ಲಿ ಪರಂಪರೆ ನಮ್ಮ ಹಿನ್ನೆಲೆ ಗೊತ್ತಿಲ್ಲದ ಜನಾಂಗದವರನ್ನು ತಂದು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಎಸ್ಟಿ ಜನಾಂಗಕ್ಕೆ ಬಹಳ ಅನ್ಯಾಯವಾಗುತ್ತದೆ. ಈಗಲೂ ಹಳ್ಳಿಗಳಲ್ಲಿ ನಮ್ಮ ಕುಲಕಸುಬು ದನ, ಮೇಕೆಗಳನ್ನು ಮೇಯಿಸುವುದೇ ನಮ್ಮ ಕಾಯಕವಾಗಿದೆ. ನಮಗಿನ್ನ ಉನ್ನತ ವ್ಯಾಸಂಗ ಮಾಡಿ ಒಳ್ಳೆಯ ಉದ್ಯೋಗಗಳನ್ನು ಪಡೆದಿರುವ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತಿರುವುದು ಬೇಸರದ ಸಂಗತಿ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಬಿಜೆಪಿ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಬೋರಸ್ವಾಮಿ ಮಾತನಾಡಿ ಬುಡಕಟ್ಟು ಸಮುದಾಯದ ಹಿನ್ನೆಲೆ ಹೊಂದಿರುವ ವಾಲ್ಮೀಕಿ ಜನಾಂಗಕ್ಕೆ ಅತ್ಯಂತ ಮುಂದುವರೆದಿರುವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುತ್ತಿರುವುದು ಖಂಡನೀಯ. ಎರಡರಿಂದ ಮೂರು ಬಾರಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಅವರು ಮುಖ್ಯಮಂತ್ರಿಯಾಗಿ ಒಂದಾಗಿನಿಂದಲೂ ನಮ್ಮ ಪರಿಶಿಷ್ಟ ಪಂಗಡ ಸಮಾಜಕ್ಕೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಕಳೆದ ಬಾರಿ 2014ರಲ್ಲಿ ಮುಖ್ಯಮಂತ್ರಿಯಾದಾಗ ಅನೇಕ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಿದ್ದರು ಸಹ ನಮ್ಮ ಸಮಾಜದಲ್ಲಿ ಅನೇಕ ಅವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟು ನಂತರ ಅವರನ್ನು ಸಚಿವ ಸಂಪುಟದಿಂದ ಉಚ್ಚಾಟನೆ ಕೂಡ ಮಾಡಿದರು. ಈ ಬಾರಿಯೂ ಸಹ ಬಳ್ಳಾರಿ ಗ್ರಾಮೀಣ ಶಾಸಕರಾದ ನಾಗೇಂದ್ರರನ್ನು ಸಹ ಮುಖ್ಯಮಂತ್ರಿಗಳ ಹಿತಾಸಕ್ತಿಗೆ ಬಲಿ ಕೊಡಲಾಗಿದೆ, ಹಾಗೂ ತುಮಕೂರು ಶಾಸಕ ಕೆ ಎನ್ ರಾಜಣ್ಣರನ್ನು ಸಹ ಬಲಿ ಪಡೆದರು. ಇಡೀ ಪರಿಶಿಷ್ಟ ಪಂಗಡ ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ನಾಯಕ ಜನಾಂಗಕ್ಕೆ ಮುಖ್ಯಮಂತ್ರಿಗಳು ಅನ್ಯಾಯ ಮಾಡಲು ಹೊರಟಿದ್ದಾರೆ. ಬೆಂಗಳೂರು ನಗರ ಐಜಿಪಿ ದಯಾನಂದರನ್ನು ಸಹ ಬಿಡಲಿಲ್ಲ ಈ ಸರ್ಕಾರ ಯಾವುದೇ ಆರೋಪಗಳು ಇಲ್ಲದಿದ್ದರೂ ಸಹ ಆರ್ ಸಿ ಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿದ ಪ್ರಕರಣದಲ್ಲಿ ಬಲಿಪಶು ಮಾಡಿದರು. ಇಡೀ ರಾಜ್ಯದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ಅಮಾನತ್ತು ಮಾಡುವ ಕೆಲಸವನ್ನು ಈ ರಾಜ್ಯ ಸರ್ಕಾರ ಮಾಡಿದೆ. ಎಲ್ಲಾ ವಿಧದಲ್ಲಿಯೂ ಮುಂದುವರೆದಿರುವ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತಿರುವ ಪಿತೂರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇದನ್ನು ಮಾಡಿದ್ದೇ ಆದರೆ ಅತ್ಯಂತ ಶೋಷಿತ ಸಮುದಾಯವಾದ ಪರಿಶಿಷ್ಟ ಪಂಗಡಕ್ಕೆ ದೊಡ್ಡ ಅನ್ಯಾಯವಾಗಲಿದೆ. ಮುಖ್ಯಮಂತ್ರಿಗಳು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯ ಉಗ್ರವಾದ ಹೋರಾಟ ಮಾಡುವಂತ ಸಂದರ್ಭ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಮುದಿಯಪ್ಪ, ಪಟ್ಟಣ ಪಂಚಾಯತಿ ಸದಸ್ಯ ಮಾಂತಣ್ಣ, ಕೆಪಿ ತಿಪ್ಪೇಸ್ವಾಮಿ ಇನ್ನು ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.