September 14, 2025
IMG-20250815-WA0501.jpg

ವರದಿ: ಶಿವಮೂರ್ತಿ ಓಬಯ್ಯನಹಟ್ಟಿ
ನಾಯಕನಹಟ್ಟಿ:
ನಾಯಕನಹಟ್ಟಿ ಸಮೀಪ ಇರುವ ಓಬಯ್ಯನಹಟ್ಟಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಪರ್ವತಯ್ಯ ನೆರೆವರಿಸಿದರು, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಲೆ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಜಯಗಳಿಸಿದವರಿಗೆ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ವತಿಯಿಂದ ನೋಟ್ ಬುಕ್ ಮತ್ತು ಪೆನ್ನು ವಿತರಣೆ ಮಾಡಲಾಯಿತು, ಹಳೆಯ ವಿದ್ಯಾರ್ಥಿ ಸದಾಶಿವಯ್ಯ ಬ್ಲೂಟತ್ ಮೈಕ್ ಸೆಟ್ ಶಾಲೆಗೆ ಹಸ್ತರಿಸಲಾಯಿತ್ತು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕ್ರೀಡೆ ಸಾಮ್ರಾಗಿಗಳನ್ನು ಶಾಲೆಗೆ ಈ ದಿನ ನೀಡುವುದರ ಮೂಲಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು.

ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಡೆ ಕಪ್ಪಿಲೆ ಓಬಣ್ಣ ಮಾತಾನಾಡಿ ಈ ಗ್ರಾಮಕ್ಕೆ ಪ್ರೌಢ ಶಾಲೆ ಅವಶ್ಯಕತೆ ಇದೆ ತುಂಬಾ ದಿನದ ಕನಸು ಆದರೆ ಪ್ರೌಢ ಶಾಲೆ ಮಂಜೂರು ಆಗಬೇಕಾದರೆ ಶಾಲೆಯಲ್ಲಿ 250 ಕ್ಕೂ ಜಾಸ್ತಿ ದಾಖಲಾತಿ ಹೊಂದಿರಬೇಕು ಮಕ್ಕಳಿಗೆ ಉನ್ನತ ಗುಣಮಟ್ಟ ಶಿಕ್ಷಣಕ್ಕೆ ಪ್ರೇರಣೆ ನೀಡಬೇಕು ಎಂದು ಶಿಕ್ಷಕರಲ್ಲಿ ಫೋಷಕರಲ್ಲಿ ಮನವಿ ಮಾಡಿಕೊಂಡರು.

ಕೆಲವು ವರ್ಷಗಳ ಹಿಂದೆ ನಾಯಕನಹಟ್ಟಿ ಹೋಬಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ನಮ್ಮೂರಿನ ಶಾಲೆ ಹಾಗೇ ಉದ್ಯೋಗದಲ್ಲಿ ಮುಂದೆ ಇದ್ದರು ಇತ್ತೀಚಿನ ದಿನಗಳಲ್ಲಿ ಎಲ್ಲಾವು ಕಣ್ಣಮರೆ ಆಗುತ್ತ ಇದೆ ಎಂದು ಕಾಕಸೂರಯ್ಯ ಹೇಳಿದರು.

ಪೋಷಕರು ಎಷ್ಟೇ ಬಡತನ ಇದ್ದರು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ತಂದೆ ತಾಯಿ ಶ್ರಮವಹಿಸಿ ಉನ್ನತ ವ್ಯಾಸಂಗ ಮಾಡಲು ಶಾಲೆಗೆ ಕಳಿಸಲು ಮುಂದಾಗಿದ್ದಾಗಿದ್ದು, ಮನಸ್ಸಿಗಿಂತ ದೊಡ್ಡದು ಏನು ಇಲ್ಲ ಅದೇ ರೀತಿ ಉನ್ನತ ಹುದ್ದೆ ಸಿಗುವರಿಗೂ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ ಎಂದು ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಅಧ್ಯಕ್ಷ ನಾಗರಾಜ್ ಹೇಳಿದರು.

ಮಕ್ಕಳನ್ನು ಶಾಲೆಗೆ ಕಳಿಸುವಾಗ ವಿದ್ಯಾಭ್ಯಾಸ ಬಗ್ಗೆ ಗಮನಹರಿಸಬೇಕು ಮಕ್ಕಳನ್ನು ಶಾಲೆಗೆ ಸ್ವಚ್ಛತೆಯಿಂದ ಕಳಿಸಿ ಹಾಗೇ ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಶಿಕ್ಷಕರನ್ನು ವಿಚಾರಿಸಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಓ ಸೋಮಶೇಖರಪ್ಪ ತಿಳಿಸಿದರು.

ರಾಷ್ಟ್ರ ಪ್ರೇಮವನ್ನು ಬಿತ್ತರಿಸಿ ಒಳ್ಳೆಯ ವಿಜ್ರಮಣಿಯ ಮಾಡಿದ ಈ ದಿನ ಹಿಂದಿನ ಕಾಲದಲ್ಲಿ ರಾಷ್ಟ್ರಕ್ಕಾಗಿ ಪ್ರಾಣ ಕೊಡಲು ಸಿದ್ಧರಿದ್ದರು ಈಗ ನಾವು ನಾವು ಕಚ್ಟಾಡಿದರೂ ನೋಡಿ ಸುಮ್ಮನೆ ಇರುವ ಸ್ವಾರ್ಥದ ಪ್ರಪಂಚ ಆದ್ದರಿಂದ ಮಕ್ಕಳು ಪ್ರೀ ಸಮಯದಲ್ಲಿ ರಾಮಾಯಣ ಮಹಾಭಾರತ ಓದುಬೇಕು ಎಂದು ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು ಪಾಟೀಲ್ ಪಿ ಎಂ ಮಹದೇವಣ್ಣ ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ ಟಿ ಕಾಮರಾಜ್, ಅಜ್ಜಣ್ಣ, ಸರ್ವೆ ಮಲ್ಲಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಪರ್ವತಯ್ಯ, ಸಾರಥಿ ಪಾಲಯ್ಯ, ಬೋಸಯ್ಯ, ಶಾಲಾ ಮುಖ್ಯೋಪಾಧ್ಯಾಯ ಗಂಗಣ್ಣ, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading