
ಚಿತ್ರದುರ್ಗ ಆ.15
ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜರೋಹಣವನ್ನು ಶ್ರೀ ಅಹೋಬಲ ಟಿವಿಎಸ್ ಕಂಪನಿಯ ಸಿಇಒ ಪಿ.ವಿ.ಅರುಣ್ ಕುಮಾರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ವಿ.ಅರುಣ್ ಕುಮಾರ್ ನಮ್ಮ ದೇಶದಲ್ಲಿ ಭಾವೈಕ್ಯತೆ ಕೊರತೆ ಕಾಣುತ್ತಿದೆ. ಸ್ವಾತಂತ್ರ್ಯ ಪಡೆದು 79 ವರ್ಷ ಕಳೆದರು ಸಹ ಜಾತಿ ವ್ಯವಸ್ಥೆ , ವರ್ಣ ವ್ಯವಸ್ಥೆ ಹೆಚ್ಚುತ್ತಿರುವುದು ಮುಂದಿನ ದಿನದಲ್ಲಿ ದೇಶದಲ್ಲಿ ಎಲ್ಲಾ ರಂಗದಲ್ಲಿ ಸುಧಾರಣೆ ಆಗಬೇಕಿದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಬ್ರಿಟಿಷ್ ವಿರುದ್ಧ ಹೋರಟ ಮಾಡಿ ನಮಗೆಲ್ಲ ಸ್ವಾತಂತ್ರ್ಯ ತಂದು ಕೊಟ್ಟಿದ್ದರು. ಆದರೆ ಸ್ವಾತಂತ್ರ್ಯ ಪಡೆಯುವಾಗ ಇದ್ದಂತಹ ಒಗ್ಗಟ್ಟು ಪ್ರಸ್ತುತ ದಿನಗಳಲ್ಲಿ ಕಾಣುತ್ತಿಲ್ಲ, ದೇಶ ಎತ್ತ ಸಾಗುತ್ತಿದೆ ಎಂಬುದನ್ನು ಮತ್ತೊಮ್ಮೆ ನಾವು ಪರಾಮರ್ಶೆ ಮಾಡಿಕೊಳ್ಳವ ಅವಶ್ಯತೆ ತುರ್ತಾಗಿ ಇದೆ.
ಮನುಷ್ಯ ಸಂಬಂಧಗಳು ನಶಿಸುತ್ತಿದೆ. ಜಾತಿ ವ್ಯವಸ್ಥೆ ಹೆಚ್ಚಳವಾಗುತ್ತಿದ್ದು ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಹಾಕಿದ್ದು ಭವಿಷ್ಯದಲ್ಲಿ ಆತಂಕದ ದಿನಗಳು ಎದುರು ನೋಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಹೋಬಲ ಟಿವಿಎಸ್ ನಿರ್ದೇಶಕರಾದ ಎಸ್.ಪಿ.ಮಂಜುಳ, ಗ್ರಾಹಕರಾದ ಉಮೆಶ್, ಶ್ರೀನಿವಾಸ್, ಸಾಧಿಕ್, ಅಹೋಬಲ ಟಿವಿಎಸ್ ಸಿಬ್ಬಂದಿಗಳಾದ ರವಿ, ರಘು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.