
ವರದಿ ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಬ್ರಿಟಿಷರ ದಾಸತ್ಯದಲ್ಲಿದ್ದ ಭಾರತವನ್ನು ಸ್ವಾತಂತ್ರಗೊಳಿಸಲು ಅನೇಕ ಮಹಾನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಎಂದು ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಹೇಳಿದರು.

ಶುಕ್ರವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು ಸ್ವಾತಂತ್ರಕ್ಕಾಗಿ ಅನೇಕ ಮಹಾನೀಯರಾದ ಮಹಾತ್ಮ ಗಾಂಧೀಜಿ ,ಸುಭಾಷ್ ಚಂದ್ರ ಬೋಸ್, ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಬಾಯಿ ಪಟೇಲ್, ಹೀಗೆ ಅನೇಕ ಮಹನೀಯ ಸ್ವಾತಂತ್ರ ಹೋರಾಟಗಾರರು ತ್ಯಾಗ ಬಲಿದಾನವನ್ನು ಮಾಡುವ ಮೂಲಕ ನಮಗೆ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ.
ಅವರನ್ನು ಸ್ಮಾರಿಸುವಂತಹ ದಿನವಾಗಿದೆ ಇಡೀ ದೇಶದಾದ್ಯಂತ ಸ್ವಾತಂತ್ರೋತ್ಸವ ಆಚರಿಸುತ್ತಿದ್ದೇವೆ ಮಹಾನೀಯರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಗ್ರಾಮದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ದೇಶದಲ್ಲಿ ಭ್ರಷ್ಟಾಚಾರ ಕೋಮುವಾದ ತಾಂಡವಾಡುತ್ತಿದೆ ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಬೇಕು ಶಿಕ್ಷಣವೇ ಶಕ್ತಿ ಎಂಬುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಇನ್ನೂ ಇದೆ ವೇಳೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಂ.ಪಿ. ರಾಧಿಕಾ, ಶ್ಯಾಮಲಾ ಕೆ.ಬಿ. ಶ್ರೇಯಸ್, ದಿನೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಪಿ.ಬಿ. ಮುತ್ತಯ್ಯ, ಸಣ್ಣ ಬೋರಮ್ಮ ಎಸ್ ಜಿ ಸಣ್ಣ ಬೋರಯ್ಯ, ಬೋರಮ್ಮ ನಿಂಗರಾಜ್, ಬೋರಮ್ಮ ಮೇಕೆ ಬೋರಯ್ಯ, ಪಿಡಿಒ ರಾಜಣ್ಣ, ಗ್ರಾಮಸ್ಥರಾದ ಎಂ.ಬಿ. ಸಣ್ಣ ಬೋರಯ್ಯ, ಶಾಲೆಯ ಮುಖ್ಯ ಶಿಕ್ಷಕ ಬಿ ವಿಶ್ವನಾಥ್, ಸಹ ಶಿಕ್ಷಕರಾದ ಸತೀಶ್ ಬಾಬು, ಅಬ್ದುಲ್ ಮುಜೀಬ್, ದೈಹಿಕ ಶಿಕ್ಷಕ ತಿಪ್ಪೇಸ್ವಾಮಿ ಬೋಧಕರಾದ ಹರೀಶ್, ಶಿಕ್ಷಕಿಯರಾದ ಜ್ಯೋತಿ ,ಸಂಜೀವಿನಿ, ಜಯ ಚಿತ್ರ, ಸುಧಾ ಬಿ ಎನ್, ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಮಸ್ತ ನಲಗೇತನಹಟ್ಟಿ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.