September 15, 2025
IMG-20250414-WA0325.jpg

ಚಳ್ಳಕೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗಿದ್ದು ಸರ್ಕಾರಿ ಶಾಲೆ ಉಳಿವಿಗಾಗಿ ನಗರ ಹಾಗೂ ಗ್ರಾಮೀಣ ಉತ್ತಮವಾದ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದ ಸೌಹಾರ್ದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸೌಹಾರ್ದ ಮಿತ್ರ ಮಂಡಳಿ ಇವರ ವತಿಯಿಂದ ಸುದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬೆಳಗೆರೆಯ ಯೋಧರಿಗೆ ಮತ್ತು ನೌಕರರಿಗೆ ಗೌರವ ಸಮರ್ಪಣ ಕಾರ್ಯಕ್ರಮ ಹಾಗೂ ಸರ್ಪಸಾಮ್ರಾಜ್ಯ ಎನ್ನುವ ಸಾಮಾಜಿಕ ನಾಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿ.

ಬೆಳಗೆರೆ ಇತಿಹಾಸ ಪ್ರಸಿದ್ದ ಗ್ರಾಮವಾಗಿದ್ದು ಒಂದು ಹ್ಯಾಪಿ ಬಂದಿರುವಂತಹ ಗ್ರಾಮ ವಾಗಿದ್ದು ಬೆಳಗೆರೆ ಕೃಷ್ಣ ಶಾಸ್ತ್ರಿ ಅವರು ಹಾಗೂ ರವಿ ಬೆಳಗೆರೆಯವರು.
ಬೆಳಗೆರೆ ಗ್ರಾಮವನ್ನು ಕರ್ನಾಟಕದಲ್ಲಿ ಮನೆ ಮಾತಾಗುವಂತೆ ಮಾಡಿದ್ದಾರೆ ..
ಉತ್ತಮವಾದ ಹೆಸರನ್ನ ಮಾಡಿದೆ. ವಿದ್ಯಾವಂತರಿದ್ದು ಅದರಲ್ಲೂ ಸರ್ಕಾರಿ ನೌಕರರಾಗಿ ಸೈನಿಕರಾಗಿ ಸೇವೆ ಸಲ್ಲಿಸಿದವರನ್ನು ಅದರಲ್ಲೂ ಸೈನಿಕ ಸೇವೆ ತುಂಬಾ ಗೌರವ ತರುವಂತಹ ಹುದ್ದೆಯಾಗಿದೆ ಇಲ್ಲಿ ಗೌರವ ಸಮರ್ಪಣೆ ಮಾಡಿರುವುದು ತುಂಬಾ ಸಂತೋಷದ ವಿಚಾರ. ಚುನಾವಣೆ ಸಂದರ್ಭದಲ್ಲಿ ನೀವು ಯಾವ ಪಕ್ಷ ಬೇಕಾದರೂ ದುಡಿಯಿರಿ ಆದರೆ ಐದು ವರ್ಷಗಳ ಸಮಯ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಿ ಗ್ರಾಮದಲ್ಲಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಪೊಲೀಸು ಠಾಣೆ ಮೆಟ್ಟಿಲೇರಿದಂತೆ ಕೆಲಸ ಮಾಡಿ,ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಉಳಿವಿಗಾಗಿ ಗ್ರಾಮದ ಗ್ರಾಮಸ್ಥರು ಹಾಗೂ ಜಯಣ್ಣ. ಬೆಳೆಗೆರೆ ಇವರ ಮನವಿಯಂತೆ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಸುಮಾರು 50 ಲಕ್ಷ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಇನ್ನು ಒಂದು ವಾರದಲ್ಲಿ ಗುದ್ದಲಿ ಪೂಜೆಯು ಸಹ ನಡಿಯುತ್ತದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗಿದ್ದು ಈಗಾಗಲೇ ಗ್ರಾಮೀಣ ಹಾಗೂ ನಗರದಲ್ಲಿ ಸಾಲ ಕಟ್ಟಡಗಳು ಕಾಮಗಾರಿ ಪೂರ್ಣಗೊಂಡಿದ್ದು ಸರ್ಕಾರಿ ಶಾಲೆ ಉದ್ಘಾಟನೆಗೆ ಸಿದ್ಧವಾಗಿವೆ. ಗ್ರಾಮದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಸಹಕಾರ ಮಾಡಿ ನೀಡಿ ಇಲ್ಲಿ ಒಂದು ಉತ್ತಮವಾದ ಶಾಲೆ ನಿರ್ಮಾಣವಾಗಲಿದ್ದು ಇದರ ಸದುಪಯೋಗ ಬರೋ ಮಕ್ಕಳಿಗೆ ಆಗಲಿ ಎಂದರು…
. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ಸುರೇಶ ಗೌಡ್ರು ಮಾತನಾಡಿ,, ಒಂದೇ ಗ್ರಾಮದಲ್ಲಿ 7 ಜನರು ಸೈನ್ಯದಲ್ಲಿ ಕಾರ್ಯ ನಿರ್ವಹಿಸಿ ಬಂದಿರುವಂತಹ ಗ್ರಾಮ ಇದಾಗಿದೆ. ಇಂತಹ ಸೈನಿಕರನ್ನು ಸನ್ಮಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ..
ಗಡಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಮೈ ಕೊರೆಯುವ ಚಳಿಯಲ್ಲೂ ತಮ್ಮ ಕಾಯಕವನ್ನು ನಿಷ್ಠೆ ಯಿಂದ ಮಾಡುತ್ತಿರುವುದರಿಂದ ನಾವು ದೇಶದಲ್ಲಿ ಸುಭಿಕ್ಷವಾಗಿದ್ದೇವೆ. ಹಲವಾರು ಯುದ್ಧದ ಸಮಯದಲ್ಲಿ ಸೈನಿಕರು ತಮ್ಮ ಪ್ರಾಣಗಳನ್ನೇ ಕಳೆದುಕೊಂಡಿದ್ದಾರೆ..
ಮೂರು ತಿಂಗಳ ಹಿಂದೆ ಅಷ್ಟೇ, ನಾನು ಲೇ ಹಾಗೂ ಲಡಕ್ ಬಾರ್ಡ್ ಗೆ ಹೋಗಿದ್ದೆ. ಅಲ್ಲಿನ ಯೋಧರ ಶಮವನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ನಿಜಕ್ಕೂ ಸಹ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣ ಕಲಿಕೆಯ ಜೊತೆಗೆ ದೇಶಪ್ರೇಮವನ್ನು ಕಲಿಸಬೇಕು.. ಸೈನಿಕರು ಹೇಳುವುದು ಇಷ್ಟೇ ಯುದ್ಧಭೂಮಿಯಲ್ಲಿ ನಾವು ಮಾತನಾಡುವುದಿಲ್ಲ ನಮ್ಮ ಶಸ್ತ್ರಗಳು ಮಾತನಾಡುತ್ತವೆ ಎಂದು ಅಲ್ಲಿ ಹೋಗಿ ನೋಡಿದಾಗಲೇ ಅಲ್ಲಿನ ಪರಿಸ್ಥಿತಿ ಎನ್ನುವುದು ತಿಳಿಯುತ್ತದೆ. ಇಲ್ಲಿ ನಿರ್ಮಾಣವಾಗುವ ಶಾಲೆಗೆ ಚಿತ್ರದುರ್ಗ ಸಂಸದರಾದ ಗೋವಿಂದ ಎಂ ಕಾರಜೋಳ ಇವರ ಮುಖಾಂತರ 10 ಲಕ್ಷ ಹಣವನ್ನು ನೀಡುವ ನೀಡುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ವಿಶಾಲಮ್ಮ ಪುಟ್ಟಸ್ವಾಮಿ ಮಾತನಾಡಿ.
ಗ್ರಾಮದಲ್ಲಿ 35ಕ್ಕೂ ಹೆಚ್ಚು ಸರ್ಕಾರಿ ಸೇವೆ ಮಾಡಿ ನಿವೃತ್ತರಾಗಿರುವುದು ಈ ಕಾರ್ಯಕ್ರಮ ನೋಡಿದ ಮೇಲೆ ನಮಗೆ ತಿಳಿದು ಬಂದಿದ್ದು. ಇಬ್ಬರು ಶಾಸಕರು ಈ ಕಾರ್ಯಕ್ರಮಕ್ಕೆ ಬಂದು ಕನ್ನಡ ಶಾಲೆಗೆ ಅನುದಾನವನ್ನ ನೀಡುತ್ತಿರುವುದು ಶ್ಲಾಘನೆಯ ಅವರ ಈ ಶಿಕ್ಷಣ ಪ್ರೇಮಕ್ಕೆ ನಮ್ಮ ಗ್ರಾಮ ಶ್ಲಾಗಿಸುತ್ತದೆ ಎಂದರು..

ಬೆಳಗೆರೆ ನ್ಯೂಸ್ ಸಂಪಾದಕರಾದ ಜಯ ಣ್ಣ ಬೆಳೆಗೆರೆ, ಚಳ್ಳಕೆರೆ ಡಿ ವೈ ಎಸ್ ಪಿ ಟಿ ಬಿ.ರಾಜಣ್ಣ, ಮಾಜಿ ಸೈನಿಕರಾದ ಅನಂತರಾಮ್.ಹಾಗೂ ನಿವೃತ್ತಿ ನೌಕರರಾದ ಶಶಿಧರ್ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನಿವೃತ್ತ ನೌಕರರು ಹಾಗೂ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು.. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಸ್ಥರು ಹಾಗೂ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸೌಹಾರ್ದ ಮಿತ್ರ ಮಂಡಳಿಯ ಪದಾಧಿಕಾರಿಗಳು ಇದ್ದರು…

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading