ದೇವರಹಟ್ಟಿಯಲ್ಲಿ ಗೋಶಾಲೆ ಉದ್ಘಾಟನೆ – ಗೋವುಗಳು ಹಿಂದೂ ಧರ್ಮದ ನಾಲ್ಕು ಆಧಾರಗಳ ಪ್ರತೀಕ: ಎನ್. ರಘುಮೂರ್ತಿ
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಕಳುಕು ಹೋಬಳಿಯ ದೇವರಹಟ್ಟಿ ಗ್ರಾಮದಲ್ಲಿ ಮಂದ ಬೊಮ್ಮದೇವರ ಗೋಶಾಲೆಯ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್. ರಘುಮೂರ್ತಿ ಭಾಗವಹಿಸಿ ಮಾತನಾಡಿದರು.




ಹಿಂದೂ ಧರ್ಮದ ನಾಲ್ಕು ಆಧಾರಗಳನ್ನು ಗೋವುಗಳು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕಿನ ಮ್ಯಾಸ ಮಂಡಲದ ಗುಡಿಕಟ್ಟಿನ ಭಕ್ತಾದಿಗಳು ಆರಾಧಿಸುವ ಧಾರ್ಮಿಕ ಸಂಪ್ರದಾಯಗಳು ಹಾಗೂ ದ್ವಾಪರ ಯುಗದ ಶ್ರೀ ಕೃಷ್ಣನ ಅನುಯಾಯಿಗಳ ಸಂಪ್ರದಾಯಗಳಿಗೂ ಸಾಮ್ಯತೆ ಇದೆ ಎಂದು ಹೇಳಿದರು.
ನಮ್ಮ ಹಿಂದೂ ಸನಾತನ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನವಿದೆ. ಸತ್ಯ, ದಯೆ, ಪವಿತ್ರತೆ ಮತ್ತು ತಪಸ್ಸು ಎಂಬ ನಾಲ್ಕು ಧರ್ಮದ ಆಧಾರಸ್ತಂಭಗಳನ್ನು ಗೋವುಗಳು ಪ್ರತಿಬಿಂಬಿಸುತ್ತವೆ. ಇಂತಹ ಗೋವುಗಳ ವಿಶಿಷ್ಟ ಪೂಜೆಯಿಂದಲೇ ಧಾರ್ಮಿಕ ಪರಂಪರೆ ಮತ್ತು ಇತಿಹಾಸಕ್ಕೆ ಚಿತ್ರದುರ್ಗದ ನೆಲ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಇಲ್ಲಿನ ಸಮುದಾಯದ ಜನರು ಅತ್ಯಂತ ಬಡವರಾಗಿದ್ದರೂ ಸಹ ಪ್ರತಿಯೊಬ್ಬ ಭಕ್ತರೂ ಚಂದ ಹಾಕಿ ಗೋಶಾಲೆ ನಿರ್ಮಿಸಿರುವುದು ನಿಸ್ವಾರ್ಥ ಬದುಕಿನ ಉದಾಹರಣೆಯಾಗಿದೆ. ಎಲ್ಲೆಡೆ ಸ್ವಾರ್ಥದ ಬದುಕು ತುಂಬಿರುವ ಈ ಸಮಾಜದಲ್ಲಿ ಇಂತಹ ನಿಸ್ವಾರ್ಥ ಮನೋಭಾವದ ಜನರನ್ನು ಇಲ್ಲಿ ಕಾಣಲು ಸಾಧ್ಯವೆಂದು ಹೇಳಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಜೊತೆಗೆ ಈ ಭಾಗದಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದರಿಂದ ಮಕ್ಕಳನ್ನು ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣದ ಕಡೆಗೆ ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಲಗೆತನಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡ ಬೋರಣ್ಣ, ಮಾಜಿ ಅಧ್ಯಕ್ಷ ಮುತ್ತಯ್ಯ ಗೌಡ್ರು, ಬೋರಯ್ಯ, ಎ.ಎಂ. ಬೋರಯ್ಯ, ಕಂಪಲಯ ಪೂಜಾರಿ ನಿಂಗಯ್ಯ, ದೊಡ್ದುಳರ್ತಿ ಎರಗುಂಟಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.