March 15, 2026
IMG-20260315-WA0261.jpg

ಚಿತ್ರದುರ್ಗ ಜಿಲ್ಲೆಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿಯ ವತಿಯಿಂದ ಅಪ್ರತಿಮ ರಾಜಕಾರಣಿ ಹಾಗೂ ಈ ದೇಶದ ಬಹುಜನರ ನಾಯಕರು ಮಾನ್ಯಾವರ್ ದಾದಾಸಾಹೇಬ್ ಕಾನ್ಷೀರಾಂ ಜೀ ಅವರ 92ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ (15/03/2026) ಆಚರಿಸಲಾಯಿತು.
ಕಾರ್ಯಕ್ರಮವು ಜಿಲ್ಲಾ ಅಧ್ಯಕ್ಷರಾದ ಎನ್. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕರು, ಬಾಬಾಸಾಹೇಬ್ ಕಂಡ ಕನಸಾದ ಈ ದೇಶದ ಬಹುಜನರು ದೇಶವನ್ನು ಆಳಬೇಕೆಂಬ ಆಶಯವನ್ನು ಕಾನ್ಷೀರಾಂ ಅವರು ಸಾಕಾರಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿದರು ಎಂದು ಹೇಳಿದರು.

ಕಾನ್ಷೀರಾಂ ಅವರು ಹೇಳಿದ ಪ್ರಸಿದ್ಧ ಮಾತು “ನಾನು 2 ರೂ. ಅಕ್ಕಿ ಹಾಗೂ 200 ರೂ. ಸೀರೆಯನ್ನು ಉಚಿತವಾಗಿ ನೀಡಲು ರಾಜಕಾರಣಕ್ಕೆ ಬಂದಿಲ್ಲ. ನನ್ನ ಬಹುಜನ ಸಮಾಜದಲ್ಲಿ ಕೆಜಿ ಅಕ್ಕಿಗೆ 100 ರೂ., ಸೀರೆಗೆ 2000 ರೂ. ನೀಡಿ ಖರೀದಿಸುವ ಶಕ್ತಿ ನಿರ್ಮಾಣ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ” ಎಂಬ ಮಾತುಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಕೆ.ಎನ್. ದೊಡ್ಡೆಟ್ಟೆಪ್ಪ, ನವೀದ್ ಸರ್, ಲಕ್ಷ್ಮಮ್ಮ ಅವರು ಉಪಸ್ಥಿತರಿದ್ದರು. ಜೊತೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ (ಬ್ಯಾಡರಹಳ್ಳಿ), ಹಿರಿಯೂರು ತಾಲ್ಲೂಕು ಉಸ್ತುವಾರಿ ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ಎಂ. ಜಗದೀಶ್, ಕಾರ್ಯದರ್ಶಿಗಳಾದ ಕಾಂತರಾಜ್ (ಕೋಡಿಹಳ್ಳಿ), ರವಿ (ಹೊಸಕೆರೆ), ಚಳ್ಳಕೆರೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಾತಲಿಂಗಪ್ಪ ಸೇರಿದಂತೆ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading