ವರದಿ : ಶಿವಮೂರ್ತಿ, ನಾಯಕನಹಟ್ಟಿ
ಜಾತ್ರೆ ಬಂತಣ್ಣ ಹಟ್ಟಿ ಜಾತ್ರೆ ಬಂತಣ್ಣ
ಕಲ್ಯಾಣ ಕ್ರಾಂತಿ ಮತ್ತು ನಂತರ
೧೨ನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಅವರ ಜೊತೆಯಲ್ಲಿನ ಶಿವಶರಣರು ಜಾತಿ ಮತ್ತು ಲಿಂಗ ಬೇದವನ್ನು ತಿರಸ್ಕರಿಸಿ ಕಾಯಕ ತತ್ವಕ್ಕೆ ಮಣೆ ಹಾಕಿ ಕೆಲಸದಲ್ಲಿ ಮೇಲು ಅಥವಾ ಕೀಳಿಲ್ಲ , ಪುರುಷ ಮತ್ತು ಮಹಿಳೆಯರಲ್ಲಿ ವ್ಯತ್ಯಾಸವಿಲ್ಲ , ಸಮಾನತೆ, ಕಾಯಕ , ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಸಾರಿದರು.




ಕಾಯಕವೇ ಕೈಲಾಸ , ದಯವೇ ರ‍್ಮದ ಮೂಲ, ಅಯ್ಯಾ ಎಂದರೆ ಸ್ರ‍್ಗ ಎಲವೋ ಎಂದರೆ ನರಕ ಎಂದು ಸಾರುವ ಜೊತೆಗೆ ಇವನಾರವ ಇವನಾರವನೆಂದೆಣಿಸದೆ ಇವ ನಮ್ಮವ ಇವ ನಮ್ಮವ ನೆಂದೆಣಿಸುವ ಮೂಲಕ ಮೂಲಕ ಕೂಡಲಸಂಗಮದೇವನ ಮಹಾಮನೆಯ ಮಗನನ್ನಾಗಿ ಕಾಣುವ ಪರಿ . ಕಲ್ಯಾಣ ಕ್ರಾಂತಿಯ ನಂತರ ಶಿವಶರಣರೆಲ್ಲ ದಕ್ಷಿಣ ದೇಶದ ಉದ್ದಗಲಕ್ಕೂ ಸಂಚರಿಸಿ ಶರಣ ತತ್ವವನ್ನು ಹಂಚುತ್ತಾ ಸಾಗಿದರು. ಈ ನಡುವೆ ೧೬ನೇ ಶತಮಾನದ ಆದಿ ಭಾಗದಲ್ಲಿ ಜಾತಿಗಳ ಮೇಲಾಟ, ರ‍್ಮದ ತಾಕಲಾಟಗಳ ನಡುವೆ ಜನರು ಶಿವ ಕಾರುಣ್ಯವಿಲ್ಲದೆ ಆಪತ್ತಿಗೆ ಸಿಲುಕಿದಾಗ ಜಗತ್ ಕಲ್ಯಾಣರ‍್ಥವಾಗಿ ಶ್ರೀಶೈಲ ದಿಂದ ಬಸವದಿ ಶಿವಶರಣರ ತತ್ವಗಳಾದ ರ‍್ಣವೇ ಲಿಂಗವಾಗಿ , ಪಂಚಾಚಾರವೇ ಪ್ರಾಣವಾಗಿ, ಷಟ್ ಸ್ಥಲ ಮರ‍್ಗದಲ್ಲಿ ಸಾಗಿ, ಲಿಂಗಾಂಗ ಸಾಮರಸ್ಯ ಪಡೆಯಬೇಕು. ಸ್ತ್ರೀ ಪುರುಷರನ್ನ ಸಮನಾಗಿ ಕಾಣಬೇಕು, ಜಾತಿಯ ವಿಷವೃಕ್ಷವನ್ನು ನಾಶ ಮಾಡಿ ರ‍್ವರನ್ನು ಸಮಾನವಾಗಿ ಕಾಣಬೇಕು. ಕಾಯಕದಲ್ಲಿ ಮೇಲು ಕೀಳು ಎಣಿಸದೆ ಅಂಗದ ಮೇಲೆ ಲಿಂಗವುಳ್ಳವರನ್ನು ಸಂಗಮದೇವನೆಂದು ಭಾವಿಸಬೇಕು ಎಂಬ ಆರ‍್ಶ ತತ್ವವನ್ನು ಪ್ರಚಾರ ಮಾಡುತ್ತಾ ಆಂಧ್ರದ ಗಡಿಭಾಗ ಮತ್ತು ಮಧ್ಯ ರ‍್ನಾಟಕದ ಭಾಗಗಳಲ್ಲಿ ಸಂಚರಿಸಿ ಕೊನೆಗೆ ತಾವು ನೆಲೆಗೊಂಡು ಕಾಯಕಗೈತ ತತ್ವ ಭೂಮಿಯಲ್ಲಿ ಲಿಂಗೈಕ್ಯರಾದ ಐದು ಜನ ಪಂಚ ಪ್ರಣಾಧೀಶ್ವರರಲ್ಲಿ ಪ್ರಮುಖರು ತಿಪ್ಪೇರುದ್ರ ಸ್ವಾಮಿಗಳು ಎಂದೇ ಪ್ರಖ್ಯಾತರಾದ ರುದ್ರಮುನಿ ಶರಣರು .
ಯಾರು ಈ ಪಂಚಗಣಾಧೀಶ್ವರರು
ಜನಪದದ ತಿಳಿವಿನ ಪ್ರಕಾರ ಜಗನ್ಮಾತಾಪೀತರ ಆದೇಶದಂತೆ ಭೂಲೋಕದಲ್ಲಿ ಶಿವರ‍್ಮ ಪ್ರಚಾರಕ್ಕಾಗಿ ರ‍್ವರ‍್ಮವನ್ನು ಸಮಾನವಾಗಿ ಕಾಣುತ್ತಾ ರ‍್ವರಲ್ಲಿಯೂ ಶಿವನಿರುವುದು ಜ್ಞಾನ ದೃಷ್ಟಿಯಿಂದ ತಿಳಿದು ಜ್ಞಾನ ಅಂಧಕಾರವನ್ನು ತೊಡೆದು ಸುಜ್ಞಾನವನ್ನು ಬೋಧಿಸಿ ರ‍್ವರನ್ನು ಸಲಹುವ ಕಾಯಕ ತತ್ವವನ್ನು ಬೋಧಿಸಿದಕೊಟ್ಟೂರಿನ ಕೊಟ್ಟೂರೇಶ , ಅರಸೀಕೆರೆಯ ಕೋಲ ಶಾಂತೇಶ , ನಾಯಕನಹಟ್ಟಿಯ ರುದ್ರೇಶ, ಹರಪನಹಳ್ಳಿಯ ಕೆಂಪಯ್ಯ ಹಾಗೂ ಕೋಲಹಳ್ಳಿ ಮದ್ದಾನೇಶ . ಈ ೫ ಮಹಾಮಹಿಮರು ಜೀವಿತ ಅವಧಿಯಲ್ಲಿ ಮಾತ್ರವಲ್ಲದೆ ಜೀವೈಕ್ಯ ಸಮಾಧಿಯಾದ ಮೇಲು ಭಕ್ತ ಜನ ಉದ್ಧಾರಕ್ಕಾಗಿ ಜೀವಂತ ಸಾಕ್ಷಿಯಾಗಿ ಭಕ್ತರ ಹೃದಯದಲ್ಲಿ ನಿತ್ಯ ನೂತನವಾಗಿ ಇಂದಿಗೂ ರಾರಾಜಿಸುತ್ತಿದ್ದಾರೆ. ಕಲ್ಯಾಣದಿಂದ ಹೊರಟ ಪಂಚಗಳಾದೀಶ್ವರರು ಕಲ್ಬರ‍್ಗಿ ಸಿಂದನೂರು ಬಳ್ಳಾರಿ ಮರ‍್ಗವಾಗಿ ಕೂಡ್ಲಿಗಿ ಬಳಿಯ ಕುಪ್ಪಿನ ಕೆರೆಗೆ ಬಂದು ಆಂಜನೇಯನಿಗೆ ಲಿಂಗ ದೀಕ್ಷೆ ಮಾಡಿ , ಕೆಲ ಕಾಲ ಹರಪನಹಳ್ಳಿಯ ಹತ್ತಿರದ ಬಾಗಳಿಯ ಮಲ್ಲೇಶ್ವರ ದೇವಸ್ಥಾನದಲ್ಲಿ ತಂಗಿದ್ದು ಅಲ್ಲಿಂದ ಒಬ್ಬೊಬ್ಬರು ಒಂದೊಂದು ಕಡೆ ಪಯಣ ಬೆಳೆಸುತ್ತಾರೆ . ಹೀಗೆ ಪ್ರಯಾಣ ಬೆಳೆಸಿದವರಲ್ಲಿ ರುದ್ರಮುನಿ ದೇವರು ನಿಡಗಲ್ಲು ಸಂಸ್ಥಾನದ ರಂಗಸಮುದ್ರದಲ್ಲಿ ಗುಂಡು ಒಡೆದ ಪವಾಡ ಮಾಡಿ ನಾಗತಿಗೆ ಸುಖ ಸಂತಾನ ಭಾಗ್ಯ ನೀಡಿ , ರಾಯದರ‍್ಗದ ಕಡೆ ಪ್ರಯಾಣ ಬೆಳೆಸುತ್ತಾರೆ . ಅಲ್ಲಿ ತಿಪ್ಪೆ ಮೇಲೆ ನಿಂತು ಕೆಂಪಯ್ಯನ ಕಣ್ಣು ತೆರೆಸಿ ತಿಪ್ಪೇರುದ್ರ ಎಂದು ಮರು ನಾಮಾಂಕಿತರಾಗಿ ಭಕ್ತಪಡಣಿಯಪ್ಪನ ಜೊತೆ ನಾಯಕನಹಟ್ಟಿಯ ಕಡೆ ಪ್ರಯಾಣ ಬೆಳೆಸುತ್ತಾರೆ. ಮರ‍್ಗ ಮಧ್ಯ ಕೊಂಡ್ಲಹಳ್ಳಿಯಲ್ಲಿ ಬಿಳಿ ನೀರು ಚಿಲುಮೆ ಸೃಷ್ಟಿಸಿ ದಡಿದವರ ಬಾಯಾರಿಸಿ ರಾತ್ರಿ ಕೊಬ್ಬರಿಯ ಪಂಜಿನ ಬೆಳಕಿನಲ್ಲಿ ಪ್ರಯಾಣ ಬೆಳೆಸಿ, ನಾಯಕನಹಟ್ಟಿ ತಲುಪುತ್ತಾರೆ. ಅಲ್ಲಿ ಮಾರಿಗುಡಿಯಿಂದ ಮಾರಿಯನ್ನು ಜೋಳಿಗೆ ಬೆತ್ತ ಅಕ್ಷಯ ಗೊಳಿಸುವ ಮೂಲಕ ಬೇರೆಡೆ ಸಾಗಿಸಿ ಹಲವು ಕಾಲ ಅಲ್ಲಿಯೇ ತಂಗಿದ್ದು ಕೊನೆಗೆ ಜೀವೈಕ್ಯ ಸಮಾಧಿ ಆಗುತ್ತಾರೆ .
ಹಟ್ಟಿ ಜಾತ್ರೆ ಮತ್ತು ಅದರ ವಿಶೇಷ
ಶ್ರೀಗಳು ಜೀವೈಕ್ಯ ಸಮಾಧಿಯಾದ ಪಾಲ್ಗುಣ ಮಾಸದ ಚಿತ್ತ ನಕ್ಷತ್ರ ದಿನದಂದು ಪ್ರತಿ ರ‍್ಷ ದೊಡ್ಡ ರಥೋತ್ಸವ ನಡೆಯುತ್ತದೆ .ಪಂಚಗಣಾಧೀಶ್ವರರಲ್ಲೊಬ್ಬರಾದ ಶ್ರೀ ತಿಪ್ಪೇರುದ್ರಸ್ವಾಮಿ ರ‍್ನಾಟಕದ ಹಲವು ಭಾಗಗಳಲ್ಲಿ ಸಂಚರಿಸಿ ಪಣಿಯಪ್ಪನೆಂಬ ಶಿವಭಕ್ತನ ಇಚ್ಛೆಯಂತೆ ನಾಯಕನಹಟ್ಟಿಯಲ್ಲಿ ನೆಲೆಸಿ, ಈ ಸ್ಥಳವನ್ನು ತನ್ನ ರ‍್ಮಭೂಮಿಯಾಗಿ ಆರಿಸಿಕೊಂಡರು. ಇವರು ಇಲ್ಲಿಗೆ ಸಮೀಪದಲ್ಲಿರುವ ಏಕಾಂತ ಮಠದಲ್ಲಿ ತಪೋನಿರತರಾಗಿದ್ದು, ಪವಾಡಗಳನ್ನು ಮೆರೆದು ಭಕ್ತ ಜನರನ್ನು ಸನ್ಮರ‍್ಗ ಪ್ರವೃತ್ತರನ್ನಾಗಿ ಮಾಡಿದರು. ಇವರು ಹಿರೇಕೆರೆ, ಚಿಕ್ಕಕೆರೆ, ಮೊದಲಾದ ಐದು ಕೆರೆಗಳನ್ನೂ, ಐದು ಪುರಗಳನ್ನು ಕಟ್ಟಿಸಿದರು.ಊರಿನ ಸಂತ ತಿಪ್ಪೇಶ ಕಟ್ಟಿಸಿದ ಕೆರೆಯ ನೀರುಂಡು ದಟ್ಟವಾಗಿ ಬೆಳೆದ ಹಸಿರು ತೋಟಗಳ ನಡುವೆ ಪರ‍್ವದಲ್ಲಿ ಮಾರಿಗುಡಿಯಾಗಿದ್ದ ಮಠವಿಂದು ಒಳಮಠ ಎಂದೂ ಕರೆಯುತ್ತಾರೆ. ಇದರ ೨೨-೨೪ಮೀ. ಎತ್ತರದ ಗೋಪುರವನ್ನು ಬಸೆಟ್ಟಪ್ಪನೆಂಬ ಭಕ್ತ ಕಟ್ಟಿಸಿದನೆಂದು ತಿಳಿದುಬರುತ್ತದೆ. ಇದರಲ್ಲಿ ಹಲವು ಪೌರಾಣಿಕ ಚಿತ್ರಗಳಿವೆ. ಊರಿನ ಹೊರಭಾಗದಲ್ಲಿ ಕೆರೆಯ ಹಿಂದೆ ಸಂತ ತಿಪ್ಪೇಶನ ಜೀವೈಕ್ಯ ಸಮಾಧಿಯಿದೆ. ಇದನ್ನು ಹೊರಮಠವೆಂದು ಕರೆಯುತ್ತಾರೆ. ಮೊಗಲ್ ಶೈಲಿಯಲ್ಲಿ ಕಟ್ಟಲಾಗಿರುವ ದುಂಡು ಗೋಪುರವನ್ನು ದಾಟಿ ಒಳಹೊಕ್ಕರೆ ಸಮಾಧಿಯ ಸುತ್ತ ವಿಶಾಲವಾದ ಅಂಗಳವಿದೆ, ಎತ್ತರವಾದ ಪ್ರಾಕಾರವಿದೆ. ಈ ಸಂತನನ್ನು ಕುರಿತ ಜನಪದ ಸಾಹಿತ್ಯ ಈ ಊರಿನಲ್ಲಿ ವಿಪುಲವಾಗಿ ದೊರೆಯುತ್ತದೆ. ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದಲ್ಲಿ ಹಟ್ಟಿ ತಿಪ್ಪೇಶನ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ, ಇದೇ ೧೬.೩.೨೦೨೫ ರಂದು ನಡೆವ ಸ್ವಾಮಿಯ ರಥೋತ್ಸವಕ್ಕೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ.ಸಾಂಪ್ರದಾಯಕವಾಗಿ ಅಲಂಕಾರಗೊಂಡ ೮೦ ಟನ್ ತೂಕದ ೮೦ ಅಡಿ ಎತ್ತರದ ೯ ಮಜಲಿನ ದೊಡ್ಡ ರಥದಲ್ಲಿ ಉತ್ಸವ ಮರ‍್ತಿ ಯನ್ನು ಪ್ರತಿಷ್ಠಾಪಿಸಿ ರಾಜ ಬೀದಿಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಉತ್ಸವ ಜರುಗುತ್ತದೆ.ಇದೊಂದು ಬುಡಕಟ್ಟು ಸಾಂಪ್ರದಾಯದ ಜಾತ್ರೆ ಪ್ರತೀಕ. ಸುಮಾರು ೪೦೦ ರ‍್ಷಗಳ ಹಿಂದೆ ತಿಪ್ಪೇಸ್ವಾಮಿಯವರು ನಾಯಕನಹಟ್ಟಿಗೆ ಬಂದು ತಮ್ಮ ಅನೇಕ ಪವಾಡಗಳ ಮೂಲಕ ಜನರ ಮನಸ್ಸನ್ನು ಗೆದ್ದು ದೈವ ಪುರುಷರಾಗಿ ಬೆಳಗಿದ್ದಾರೆ.ಜಾನಪದಗಳಲ್ಲಿ ಹೇಳುವಂತೆ ತಿಪ್ಪೇಸ್ವಾಮಿ ಏಳು ಪುರ, ಏಳು ಕೆರೆಗಳನ್ನು ಕಟ್ಟಿಸಿದ್ದಾರೆ. ‘ಮಾಡಿದಷ್ಟು ನೀಡು ಭಿಕ್ಷೆ ‘ಎಂದು ನುಡಿವ ಮೂಲಕ ಮಾಡಿದ ಕೆಲಸಕ್ಕೆ ತಕ್ಕ ಕೂಲಿ ಎಂಬ ತತ್ವ ಸಾರಿದ ತಿಪ್ಪೇಸ್ವಾಮಿಯವರ ಈ ನಿಯಮ ಅತ್ಯಂತ ಜನಪ್ರಿಯವಾದ ಮಾತಾಗಿದೆ..ರೈತ ಸಮುದಾಯಕ್ಕೂ ಬೇಕಾದವರುಕೆರೆ ಕಟ್ಟಡಗಳ ನರ‍್ಮಾಣ ಮಾಡುವ ಮೂಲಕವೇ ಜಲಕ್ರಾಂತಿಗೆ ನಾಂದಿಹಾಡಿದ , ಜಲ ಸಂಸ್ಕೃತಿಯ ಹರಿಕಾರ , ರೈತ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತ ಕ್ರಾಂತಿ ಪುರುಷ ಈ ತಿಪ್ಪೇಸ್ವಾಮಿಯವರು. ದಲಿತರ ಉದ್ದಾರಕ್ಕೆ ಶ್ರಮಿಸಿದ ಮಹಾನ್ ಚೇತನ.ಹಟ್ಟಿ ತಿಪ್ಪೇಶ , ತಿಪ್ಪೇಸ್ವಾಮಿ ಎಂದೇ ಜನಮಾನಸದಲ್ಲಿ ನೆಲೆಯೂರಿರುವ ಇವರು ತಿಪ್ಪೇರುದ್ರಸ್ವಾಮಿ ಎಂಬ ಶಿಷ್ಟ ಹೆಸರನ್ನೂ ಪಡೆದಿದ್ದಾರೆ. ಈ ಪ್ರದೇಶದ ದೀನ ದಲಿತರ ಬಾಳಿನ ಆಶಾಕಿರಣವಾಗಿದ್ದಾರೆಂದು ಭಕ್ತ ಜನರು ನಂಬಿದ್ದಾರೆ.ಪಾಳೆಗಾರರ ಬಳುವಳಿವಿಜಯನಗರ ಸಾಮ್ರಾಜ್ಯ ಪಥನವಾದ ನಂತರ ನಾಯಕನಹಟ್ಟಿಯಪಾಳೆಗಾರ ಬೋಡಿ ಮಲ್ಲಪ್ಪನಾಯಕ ತನ್ನ ಸಂಸ್ಥಾನದಲ್ಲಿ ತಿಪ್ಪೇಸ್ವಾಮಿಯವರಿಗೆ ಆಶ್ರಯ ನೀಡಿದ. ನಂತರ ತನ್ನ ಸಂಸ್ಥಾನದಲ್ಲಿ ತಿಪ್ಪೇಶನ ಮರ‍್ಗರ‍್ಶನದಲ್ಲಿ ಜನೋಪಯೋಗಿ ಕೆಲಸ ಮಾಡಿರುವ ಕೆಲವು ಐತಿಹ್ಯಗಳಿವೆ ಎಂದು ಹೇಳಲಾಗಿದೆ.ತಿಪ್ಪೇಸ್ವಾಮಿಗಳು ಜೀವಿತಾವಧಿಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು, ಅದನ್ನು ಒಳಮಠವೆಂದು ಕರೆಯುತ್ತಾರೆ.ಶೈವರು ಪೂಜಾರಿಗಳಾಗಿದ್ದಾರೆ.ತಿಪ್ಪೇಸ್ವಾಮಿಗಳು ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊರಗಡೆ ಚಿಕ್ಕಕೆರೆ ಹತ್ತಿರ ಇದ್ದು, ಇದಕ್ಕೆ ಹೊರಮಠ ಎನ್ನುವರು. ಈ ಸಮಾಧಿ ಪೂಜೆಯನ್ನು ಅವರ ವಂಶೀಯರಾದ ಬೇಡರು ಪೂಜಿಸುವರು.ದುಂಡು ಮೆಣಸು ಎರಚುವ ಪದ್ಧತಿಒಳಮಠದ ಗೋಪುರವು ೫೦ ಅಡಿ ಎತ್ತರವಿದ್ದು, ಅತ್ಯಾರ‍್ಷಕವಾಗಿದೆ. ಒಳಮಠದ ಮುಂದೆ ಜಾತ್ರೆ ಸಂರ‍್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಕೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ.ಈ ಆಚರಣೆಯ ಹಿಂದೆ ವಿಶಿಷ್ಟ ಕತೆಯೇ ಇದೆ. ತಿಪ್ಪೇಸ್ವಾಮಿಯವರು ಮೊದಲಿಗೆ ರಾಯದರ‍್ಗದಿಂದ ನಾಯಕನಹಟ್ಟಿಗೆ ಬರುವಾಗ ರಾತ್ರಿ ಕತ್ತಲೆ ಆವರಿಸಿದ್ದು, ಫಣಿಯಪ್ಪನು ಒಣಕೊಬ್ಬರಿಗಳನ್ನು ಕೋಲುಗಳಿಗೆ ಸಿಕ್ಕಿಸಿ ಬೆಂಕಿಯಿಂದ ಹೊತ್ತಿಸಿ, ಆ ಬೆಳಕಿನಲ್ಲಿ ತಿಪ್ಪೇಸ್ವಾಮಿಯವರನ್ನು ಹಟ್ಟಿಗೆ ಕರೆತಂದರಂತೆ. ಆ ಕಾರಣಕ್ಕೆ ಇಂದಿಗೂ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣಕೊಬ್ಬರಿ ಸುಡುವ ಸಂಪ್ರದಾಯ ರೂಢಿಯಲ್ಲಿದೆ. ಅದೇ ರೀತಿ ದುಂಡು ಮೆಣಸು ಎರಚುವ ಸಂಪ್ರದಾಯವೂ ಇಲ್ಲಿ ಇರುತ್ತದೆ. ಹೊರಮಠವನ್ನು ಶ್ರೀ ತಿಪ್ಪೇಸ್ವಾಮಿ ‘ಗದ್ದುಗೆ’ ಎಂದು, ಒಳಮಠವನ್ನು ಶ್ರೀ ತಿಪ್ಪೇಸ್ವಾಮಿಯ ‘ಮಠ’ವೆಂದು ಕರೆಯುವುದು ರೂಢಿಯಲ್ಲಿದೆ.
ತಿಪ್ಪೇರುದ್ರÀ ಸ್ವಾಮಿಗಳ ಪವಾಡಗಳು
ಜನಕಲ್ಯಾಣದ ಗುರಿಯನ್ನು ಹೊಂದಿ ತಿಪ್ಪೇರುದ್ರ ಸ್ವಾಮಿಗಳು ತಮ್ಮ ಭಕ್ತರಿಗೆ ಹಲವಾರು ಪವಾಡಗಳನ್ನು ಗೈದು ಭಕ್ತರ ಮನದಲ್ಲಿ ಶಿವರೂಪಿ ಜಂಗಮರಾಗಿದ್ದಾರೆ ಅವುಗಳಲ್ಲಿ ಪ್ರಮುಖವಾದವು
@ ಸತ್ತ ಎಮ್ಮೆ ಹಾಲು ಕರೆದು ಎಂಟು ಮಠದ ಜಂಗಮರ‍್ತಿಗಳಿಗೆ ಮುಟ್ಟಿಸಿದ್ದು
@ ಭಕ್ತಪಣಿಯಪ್ಪನ ಮನೆಯ ವಾಡವಿಗೆ ಅಕ್ಷಯ ಶಕ್ತಿ ನೀಡಿದ್ದು
@ ರಾಯದರ‍್ಗದಿಂದ ಬರುವಾಗ ಪಣಿಯಪ್ಪನ ಬುತ್ತಿ ಅಕ್ಷಯವಾಗಿಸಿದ್ದು
@ ಏಕಕಾಲದಲ್ಲಿ ಪಣಿಯಪ್ಪನ ಮನೆ ಹಾಗೂ ಹರಿಜನರ ಮನೆಯಲ್ಲಿ ಶಿವಪೂಜೆ ಮಾಡಿದ್ದು
@ ಜೋಳಿಗೆ ಅಕ್ಷಯಗೈದು ಮಾರಮ್ಮನನ್ನು ವಡ್ಡನ ಹಳ್ಳಿಗೆ ಕಳುಹಿಸಿದ್ದು
@ ಕೊಂಡ್ಲಹಳ್ಳಿ ಬರಡು ನೆಲದಲ್ಲಿ ಬಿಳಿ ನೀರು ಚಿಲುಮೆ ಉಕ್ಕಿಸಿದ್ದು
@ ತಮ್ಮ ತಪಶಕ್ತಿಯಿಂದ ಐದು ಕೆರೆ ಐದು ಪುರಗಳನ್ನು ನರ‍್ಮಿಸಿದ್ದು
@ ಹೈದರಾಲಿಗೆ ಪುತ್ರ ಸಂತಾನ ಕರುಣಿಸಿದ್ದು
ತಿಪ್ಪೇರುದ್ರಸ್ವಾಮಿಗಳು ತಮ್ಮ ಭಕ್ತರಿಗೆ ಬೇಡಿದ ವರ ನೀಡಿದಷ್ಟೇ ತಪ್ಪು ಮಾಡಿದಾಗ ಕೋಪಗೊಂಡು ಶಪಿಸಿದ್ದು ಉಂಟು ಅದಕ್ಕೆ ಹಲವು ನಿರ‍್ಶನಗಳು ಜನಪದದಲ್ಲಿ ದಾಖಲಾಗಿವೆ. ಅವುಗಳಲ್ಲಿ ಪ್ರಮುಖವಾಗಿ
@ ರಂಗಸಮುದ್ರದ ಜನರಿಗೆ ನಿಮ್ಮ ಹೆಂಡರು ರಂಡೆಯರಾಗಲಿ ಎಂದು ಶಪಿಸಿದ್ದು
@ಭಕ್ತಪಣಿಯಪ್ಪನಿಗೆ ನಿನ್ನ ವಂಶ ನರ‍್ವಂಶವಾಗಲಿ ಎಂದು ಶಪಿಸಿದ್ದು
@ ಗಂಗಮಾಳಮ್ಮನ ಸುಳ್ಳಿನಿಂದ ಹಾಲು ಕರೆಯುವ ಎಮ್ಮೆ ಸಾಯುವಂತೆ ಮಾಡಿದ್ದು
ಹೀಗೆ ಹತ್ತು ಹಲವು ನಿರ‍್ಶನಗಳಿವೆ ತಿಪ್ಪೇರುದ್ರಸ್ವಾಮಿಗಳು ಹೇಗೆ ಶಾಂತ ಮರ‍್ತಿಗಳೋ ಹಾಗೆ ತಪ್ಪು ಮಾಡಿದಾಗ ರುದ್ರಮುನಿಯಾಗಿ ಭಕ್ತರ ಕಣ್ಣು ತೆರೆಸುತ್ತಿದ್ದು ಉಂಟು.
ಇಂತಹ ತಪೋಮರ‍್ತಿಯ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗುತ್ತಿದ್ದು ಬಯಲು ಸೀಮೆಯ ಜನಕ್ಕೆ ಕಾಲಕಾಲಕ್ಕೆ ಮಳೆಯಾಗಲಿ, ಭಕ್ತ ಜನರ ಎಲ್ಲಾ ಕಷ್ಟ ನಿವಾರಿಸಲಿ ಎಂದು ಹಾರೈಸುತ್ತಾ ಉದಯ ಕಾಲ ಪತ್ರಿಕೆಯ ಪರವಾಗಿ ಶುಭ ಹಾರೈಕೆಗಳು . ರ‍್ವೇ ಜನೋ ಸುಖಿನೋ ಭವಂತು.


About The Author
Discover more from JANADHWANI NEWS
Subscribe to get the latest posts sent to your email.