ಹಿರಿಯೂರು:
ತಾಲ್ಲೂಕಿನ ಹೊಸಯಳನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಶ್ರುತಿ ಅವರನ್ನು ಜಿಲ್ಲಾ ವೈದ್ಯಾಧಿಕಾರಿಗಳು ಧರ್ಮಪುರಕ್ಕೆ ಡೆಪ್ಯುಟೇಷನ್ ಮಾಡಿದ್ದಾರೆ, ಇದರಿಂದಾಗಿ ಈ ಆರೋಗ್ಯ ಕೇಂದ್ರದ ಸುತ್ತಮುಲ ಗ್ರಾಮಗಳಿಗೆ ತೀವ್ರ ತೊಂದರೆಯಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿರಮೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಗ್ರಾಮ ಪಂಚಾಯತಿ ವ್ಯಾಪ್ತಿ ತುಂಬಾ ದೊಡ್ಡದಿದ್ದು, ಸುಮಾರು ಹತ್ತಾರು ಹಳ್ಳಿಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಅಲ್ಲದೆ ಈಗ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಶ್ರುತಿ ಅವರು ಈ ಭಾಗದ ಜನರಿಗೆ ಬಹಳ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಜಿಲ್ಲಾ ವೈದ್ಯಾಧಿಕಾರಿಗಳು ಯಾರಿಗೂ ಮಾಹಿತಿ ಕೊಡದೆ ಅವರನ್ನು ಧರ್ಮಪುರಕ್ಕೆ ವರ್ಗಾವಣೆ ಮಾಡಿರೋದು ಈ ಭಾಗದ ಜನರಿಗೆ ತುಂಬಾ ನೋವುಂಟು ಮಾಡಿದೆ. ಅವರಿಗೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡುತ್ತಿಲ್ಲ. ಶೀಘ್ರದಲ್ಲಿ ಹೊಸಯಳನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂಬುದಾಗಿ ಅವರು ಎಚ್ಚರಿಸಿದ್ದಾರೆ.
ವೈದ್ಯರಿಲ್ಲದ ಮೇಲೆ ಆಸ್ಪತ್ರೆ ಇದ್ದೇನು ಪ್ರಯೋಜನ. ಆಸ್ಪತ್ರೆ ಪರಿಕರಗಳು ಹಾಗೂ ಹಲವು ಸಿಬ್ಬಂದಿಗಳು ಇದ್ದರೂ ಸಹ ವೈದ್ಯರೇ ಇಲ್ಲ ಎಂದ ಮೇಲೆ ರೋಗಿಗಳು ಎಲ್ಲಿ ಹೋಗಬೇಕು. ಆದ್ದರಿಂದ ಜಿಲ್ಲಾ ವೈದ್ಯಾಧಿಕಾರಿಗಳು ತುರ್ತಾಗಿ ಡಾ.ಶ್ರುತಿ ಅವರ ಡೆಪ್ಯುಟೇಷನ್ ಅನ್ನು ಕ್ಯಾನ್ಸಲ್ ಮಾಡಿ ಹೊಸಯಳನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಬೇಕು ಧರ್ಮಪುರಕ್ಕೆ ಬೇಕಾದರೆ ಅಗತ್ಯವಿರುವ ಬೇರೆ ವೈದ್ಯರನ್ನು ನೇಮಕ ಮಾಡಲಿ ಎಂಬುದಾಗಿ ಅವರು ಈ ಮೂಲಕ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.