ಹಿರಿಯೂರು:
ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಭಾಗಕ್ಕೆ ನೀರು ಹರಿಸುವ ವಿಚಾರದಲ್ಲಿ ಅಧಿಕಾರಿಗಳು ಮತ್ತು ಸೌಡಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ 30 ದಿನದೊಳಗಾಗಿ ಎಲ್ಲಾ ಅಚ್ಚುಕಟ್ಟು ಭಾಗಕ್ಕೂ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಆರೋಪಿಸಿದ್ದಾರೆ.
ನಗರದ ರೈತ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ರೈತ ಸಂಘದ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆ.ಎಸ್.ಆರ್.ಟಿ.ಸಿ. ಗ್ರಾಮೀಣ ಸಾರಿಗೆ ಡಿಪೋವನ್ನು ಮಾರ್ಚ್ 10ರೊಳಗಾಗಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ಕೊನೆಯ ಗಡುವು ನೀಡಿದ್ದರು. ಆದರೆ ಇದುವರೆಗೂ ಪ್ರಾರಂಭ ಆಗದೇ ಇರುವುದರಿಂದ ಒಂದು ವಾರದೊಳಗಾಗಿ ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭವಾಗದೇ ಇದ್ದರೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿರಂತರ ಅಹೋರಾತ್ರಿ ಧರಣಿಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಎಚ್ಚರಿಸಿದ್ದಾರೆ.
ಈ ಬಾರಿ ನಾಲೆಯಲ್ಲಿ ಸುಮಾರು 40 ದಿನ ಕಳೆದರೂ ಸರಿಯಾಗಿ ನೀರು ಹರಿಯದೇ ಸಾಕಷ್ಟು ನೀರು ನದಿಗೆ ಪೋಲಾಗಿ, ಹರಿದು ಹೋಗಿದೆ, ಇದರ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದರಲ್ಲದೆ, ಯುಗಾದಿ ಹಬ್ಬ ಮುಗಿದ ನಂತರ ಎಲ್ಲಾ ಗ್ರಾಮಗಳಲ್ಲೂ ರೈತ ಸಂಘದ ಶಾಖೆಗಳನ್ನು ಪುನಃಶ್ಚೇತನಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ರೈತ ಮುಖಂಡರುಗಳಾದ ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ಶಿವಣ್ಣ, ರಾಮಣ್ಣ, ಗೋವಿಂದಪ್ಪ, ಜಯಣ್ಣ, ಜಗದೀಶ್, ಶಿವಣ್ಣ, ಮಂಜುನಾಥ್, ರಾಮಕೃಷ್ಣ, ಎಂ.ಆರ್.ಈರಣ್ಣ, ಚಂದ್ರಪ್ಪ, ಈರಣ್ಣ, ಹಳ್ಳಿಕೆರೆ ತಿಪ್ಪೇಸ್ವಾಮಿ, ರಂಗಜ್ಜ, ತಿಪ್ಪೇಸ್ವಾಮಿ, ಚಂದ್ರಣ್ಣ, ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.