ಚಳ್ಳಕೆರೆ ಮಾ.15
ಮನೆ ದರೋಡೆ.ಸರಕಳ್ಳತ. ಬೈಕ್ ನಲ್ಲಿದ್ದ ಹಣ ಕಳವು. ಬೈಕ್ ಕಳವು. ಕಿರಾಣಿ ಅಂಗಡಿ ಕಳವು ಹೀಗೆ ನಗರದಲ್ಲಿ ಕಳವು ಪ್ರಕಣಗಳು ಹೆಚ್ಚಾಗುತ್ತಿದ್ದು ನಗರದ ಜನರನ್ನು ನಿದ್ದೆಗೆಡುವಂತೆ ಮಾಡಿದೆ.
ಹೌದು ಇದು ಚಳ್ಳಕೆರೆ ನಗರದಲ್ಲಿ ಇತ್ತೀಚೆಗೆ ಹಾಡು ಹಗಲ್ಲೇ ಕಳವು ಪ್ರಕರಣಗಳ ಬೆನ್ನಲ್ಲೇ ಶುಕ್ರವಾರ ತಡ ರಾತ್ರಿ ಪಾವಗಡ ರಸ್ತೆಯ ಮುಕಡಿ ಹಿಟ್ಟಿನಗಿರಣಿ ಬಳಿ ಪ್ರಿಯಾಂಕ ಪ್ರಾವಿಜನ್ ಸ್ಟೋರ್ ಶನಿವಾರ ಬೆಳಗಿನ ಜಾವ ಒಂದು ಗಂಟೆ ಸುಮಾರಿನಲ್ಲಿ ಬಾಗಿಲು ಮುರಿದು ಅಂಗಡಿ ಕಳವು ಮಾಡಲಾಗಿದ್ದು ಅಂಗಡಿಯಲ್ಲಿನ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗಿದ್ದು ಡ್ರಾನಲ್ಲಿದ್ದ ಸುಮಾರು ಐದು ಸಾವಿರ ನಗದು ಕಳುವಾಗಿದೆ ಎನ್ನಲಾಗಿದೆ.
ರಾತ್ರಿ ಪೋಲ್ ಗಸ್ತು ವೇ ಅನುಮಾನಸ್ಪದವಾಗಿ ಅಂಗಡಿ ಸಮೀಪ ಇದ್ದ ಇಬ್ಬರನ್ನು ವಶಪಡೆದು ಅಂಗಡಿ ಬಾಗಿಲು ಮುರಿದ ಘಟನೆಯನ್ನು ಪೋಲಿಸು ಅಂಗಡಿ ಮಾಲಿಕನಿಗೆ ಸುದ್ದಿ ಮುಟ್ಟಿಸಿದಾಗ ರಾತ್ರಿಯೇ ಮಾಲಿಕ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ ರಾತ್ರಿ ಪಾಳಿಯಲ್ಲಿದ್ದ ಪೋಲಿಸ್ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಠಾಣೆಗೆ ಒಪ್ಪಿಸಿದ್ದು ಪೋಲಿಸ್ ತನಿಖೆಯ ನಂತರ ಕಳವು ಪ್ರಕರಣ ಬಯಲಾಗಲಿದೆ.
ನೇತಾಡುವ ಸಿ.ಸಿ.ಕ್ಯಾಮರ.
ನಗರದ ಪೋಲಿಸ್ ಠಾಣೆ ಕೂಗಳತೆಯ ಅಂಬೇಡ್ಕರ್ ವೃತ್ತದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರ ನೇತಾಡುತ್ತಿದ್ದು ಯಾವುದೇ ಸಂದರ್ಭದಲ್ಲಿ ನೆಲಕ್ಕೆ ಬೀಳುವ ಸಾಧ್ಯತೆ ಇದೆ.
ಇದೇ ರೀತಿ ನಗರದ ನೆಹರು ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮರಗಳ ಕಣ್ಣು ಮುಚ್ಚಿದ್ದು ಇವುಗಳಿಗೆ ಚಿಕಿತ್ಸೆ ಮಾಡಿಸದೆ ಇರುವುದೇ ಚಳ್ಳಕೆರೆ ನಗರದ ಕಳ್ಳರಿಗೆ ವರದಾನವಾಗಿದೆ ಎಂದು ಸಾರ್ವಜನಿಕರಿಂದ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಚಳ್ಳಕೆರೆ ನಗರದ ಸಾರ್ವಜನಿಕ ಸ್ಥಳಗಳಲ್ಲಿರುವ ಸಿ.ಸಿ.ಕ್ಯಾಮಗಳಿಗೆ ತುರ್ತು ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.




About The Author
Discover more from JANADHWANI NEWS
Subscribe to get the latest posts sent to your email.