ಕೊಪ್ಪಳ–ನರೇಗಾ ಕೂಲಿ ಕಾರ್ಮಿಕರ ಜೀವಕ್ಕಿದೆ ವಿಮೆ..! ವರ್ಷಕ್ಕೆ ಕೇವಲ 436 ರೂ. 20 ರೂ ಪ್ರೀಮಿಯಂ..!
ನರೇಗಾ ಯೋಜನೆಯ ಕೂಲಿಗಾರರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಸೌಲಭ್ಯವನ್ನು ಪಡೆಯಲು ಸದಸ್ಯನೊಬ್ಬ 18 ರಿಂದ 50 ವರ್ಷ ವಾರ್ಷಿಕ 436 ರೂ. ಕಂತನ್ನು ಪಾವತಿಸಿದರೆ 2 ಲಕ್ಷ ರೂ. ಜೀವ ವಿಮಾ ಸೌಲಭ್ಯ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಸದಸ್ಯನೊಬ್ಬ 18 ರಿಂದ 70 ವರ್ಷ ವಾರ್ಷಿಕ 20 ರೂ. ಕಂತನ್ನು ಪಾವತಿಸಿದರೆ 2 ಲಕ್ಷ ರೂ. ಅಪಘಾತ ಜೀವ ವಿಮಾ ಸೌಲಭ್ಯ ದೊರೆಯುತ್ತದೆ ಅದ್ದರಿಂದ ಪ್ರತಿಯೊಬ್ಬರೂ ಪ್ರೀಮಿಯಂ ಕಂತನ್ನು ಕಟ್ಟುವ ಮೂಲಕ ಈ ಸೌಲಭ್ಯಗಳನ್ನು ಪಡೆಯಬೇಕು ಎಂದು ಬ್ಯಾಂಕ್ ಆಪ್ ಬರೋಡ ವ್ಯವಸ್ಥಾಪಕರಾದ ನಾರಾಯಣ ಸ್ವಾಮಿ ತಿಳಿಸಿ ಸ್ಥಳದಲ್ಲೇ ವಿಮಾ ಮಾಡಿಕೊಟ್ಟರು.
ಇಂದು ಕ್ಯಾತನಹಳ್ಳಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ವಿಮಾ ಅಭಿಯಾನ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪಾರ್ಥಸಾರಥಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಈ ವಿಮಾಗಳನ್ನು ಕಡ್ಡಾಯವಾಗಿ ಮಾಡಿಸಬೇಕು ಮತ್ತು ವಿಮಾ ಸೌಲಭ್ಯಗಳನ್ನು ಪಡೆಯುವಂತೆ ತಿಳಿಸಿದರು.



ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ನೋಂದಾಯಿತ ಕೂಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಈಗ ಮುಂದಾಗಿದೆ ಹಾಗೂ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದ ಕೂಲಿ ಕಾರ್ಮಿಕರಿಗೆ ಅವರು ಇರುವ ಊರುಗಳಲ್ಲಿಯೇ ಕೆಲಸ ಕೊಡಲು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ನೆರವಾಗಿತ್ತು. ಇದರ ಜತೆಗೆ ಈಗ ನಾನಾ ವಿಮಾ ಸೌಲಭ್ಯಗಳಡಿ ಸವಲತ್ತು ಕಲ್ಪಿಸಲು ಮುಂದಾಗಿರುವುದು ಕೂಲಿಕಾರರ ಕುಟುಂಬಗಳಿಗೆ ಒಂದಿಷ್ಟು ಬಲ ಬಂದಂತಾಗಿದೆ ಎಂದರು.



ಇದೇ ವೇಳೆ ತಾಲ್ಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರಾದ ಸುನಿಲ್ ಕುಮಾರ್ ಮಾತನಾಡಿ ನರೇಗಾ ಯೋಜನೆಯಡಿ ಪುರುಷರು ಮತ್ತು ಮಹಿಳೆಯರಿಗೆ 349 ರೂಪಾಯಿ ದಿನಗೂಲಿ ಹಾಗೂ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗ ಅವಕಾಶವಿದೆ ಹಾಗೂ ಒಂದು ಕುಟುಂಬಕ್ಕೆ ಜೀವಿತಾವಧಿಗೆ 5 ಲಕ್ಷ ರೂ.ವರೆಗೆ ವೈಯಕ್ತಿಕ ಕಾಮಗಾರಿಯ ನೆರವು ಪಡೆಯಬಹುದು ಅಲ್ಲದೇ ಈ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ವಿಮೆ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದರಿಂದ ಕೂಲಿಕಾರರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಸಿನೆಸ್ ಕರಸ್ಪಂಡ್ ಗಳಾದ ಲಕ್ಷ್ಮಿ ಮತ್ತು ಮಹದೇವಸ್ವಾಮಿ, ಕೂಲಿಕಾರರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.