March 18, 2026
1742000786816.jpg


ಹಿರಿಯೂರು:
ತಾಲ್ಲೂಕಿನ ವದ್ಧೀಕೆರೆ ಗ್ರಾಮದ ಸಿದ್ಧೇಶ್ವಸ್ವಾಮಿ ಜಾತ್ರಾ ಮಹೋತ್ಸವ ಏಪ್ರಿಲ್ 11ರಿಂದ 18ರವರೆಗೆ ನಡೆಯಲಿದೆ ಎಂಬುದಾಗಿ ತಹಶೀಲ್ದಾರ್ ರಾಜೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಿತ್ರದುರ್ಗದ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಹಾಗೂ ಸಿ.ರಾಜೇಶ್ ಕುಮಾರ್ ಸಮ್ಮುಖದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಏಪ್ರಿಲ್ 11ರಿಂದ ಕಂಕಣಧಾರಣೆ, 12ರಂದು ಅಗ್ನಿಕುಂಡ, 13ರಂದು ಚಿಕ್ಕರಥೋತ್ಸವ, 14ರಂದು ಬ್ರಹ್ಮರಥೋತ್ಸವ, 15ರಂದು ಜವಳ, ಸಿಧ್ಧಭುಕ್ತಿ, ಏಪ್ರಿಲ್ 16ರಂದು ಕಿರುಬಾನ, ವಸಂತೋತ್ಸವ ಹಾಗೂ ಸಂಜೆ 6ಕ್ಕೆ ಕಂಕಣ ವಿಸರ್ಜನೆ ಕಾರ್ಯಕ್ರಮ ನಡೆಸಲು ತೀರ್ಮನಿಸಲಾಗಿದೆ ಎಂಬುದಾಗಿ ಅವರು ಹೇಳಿದರು.
ಜಾತ್ರೆ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಸದಸ್ಯರು ಸಹಕಾರ ನೀಡಬೇಕು ಎಂಬುದಾಗಿ ಖುರೇಶಿಯವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭಾಗ್ಯಮ್ಮ, ಸದಸ್ಯರು, ಕಂದಾಯ ಇಲಾಖೆಯ ಮಂಜಪ್ಪ, ಚನ್ನಬಸವರಾಜು, ಕೆ.ವಿ.ವೀರಭದ್ರಪ್ಪ, ಸಿದ್ದೇಶ್ ವಿವಿಧ ಇಲಾಖೆಗಳ ಅಧಿಕಾರಿಗಳು, ವದ್ದೀಕೆರೆ ಗ್ರಾಮದ ಪ್ರಮುಖರು, ದೇವಸ್ಥಾನದ ಅರ್ಚಕರು, ಕೈವಾಡಸ್ಥರು, ಭಕ್ತರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading