February 15, 2026
IMG-20260215-WA0364.jpg

ಚಳ್ಳಕೆರೆ: ಶಾಸಕ ಟಿ. ರಘುಮೂರ್ತಿ ಅವರು ತಾಲೂಕಿನ ಚೌಳೂರು ಗ್ರಾಮದ ಜೆ.ಜೆ. ಕಾಲೋನಿಯಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್‌ನ ಅಂತಿಮ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ರಿವರ್ ಸೈಡ್ ಕ್ಲಬ್ ಮತ್ತು ಸಪ್ತಗಿರಿ ರಿಸಾರ್ಟ್ ಚೌಳೂರು ಇವರ ವತಿಯಿಂದ ಆಯೋಜಿಸಲಾದ ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ತಂಡಗಳು ಕ್ರೀಡಾಸ್ಪೂರ್ತಿಯಿಂದ ಪಂದ್ಯಗಳನ್ನು ಆಡಿದ್ದು, ಅಂತಿಮ ಪಂದ್ಯಾವಳಿ ಉತ್ಸಾಹಭರಿತವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಗ್ರಾಮೀಣ ಭಾಗಗಳಲ್ಲಿ ಇಂತಹ ಕ್ರೀಡಾಕೂಟಗಳು ಯುವಕರಲ್ಲಿ ಶಿಸ್ತು, ಒಗ್ಗಟ್ಟು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು. ಯುವಕರು ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ಶಶಿಧರ, ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಕೆ. ಜಯಣ್ಣ, ರಿವರ್ ಸೈಡ್ ಕ್ಲಬ್ ನಿರ್ದೇಶಕ ಜಿ.ಟಿ. ನಾಗರಾಜ್, ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ನಗರಸಭೆ ಸದಸ್ಯ ರಾಘವೇಂದ್ರ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯ ಬಸವರಾಜ್, ಜಿಲ್ಲಾ ಗ್ಯಾರೆಂಟಿ ಸಮಿತಿ ಸದಸ್ಯ ಪ್ರಕಾಶ್, ಯುವ ಕಾಂಗ್ರೆಸ್ ಘಟಕದ ಕ್ಷೇತ್ರಾಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ವೀರೇಶ್ ಸೇರಿದಂತೆ ಸಣ್ಣೀರಣ್ಣ, ದೇವರಾಜ್, ತಿಪ್ಪೇಸ್ವಾಮಿ ಹಾಗೂ ಇತರ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading