ಚಳ್ಳಕೆರೆ:
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆಹಾರ ಸಮತೋಲನ ಕಾಪಾಡಿಕೊಳ್ಳುವ ಜಾಗೃತಿ ಬೆಳೆಯಬೇಕು ಎಂದು ತಾಲೂಕಿನ ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ ಹೇಳಿದರು.
ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿನ ಐಐಎಂಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಶಾಲಾ ಮಕ್ಕಳಿಂದ ಆಯೋಜಿಸಿದ್ದ ಆಹಾರ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ದೃಷ್ಟಿಯಿಂದ
ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಆಹಾರ ಮೇಳಗಳು ನಡೆಯುತ್ತಿದ್ದವು. ಪ್ರಸ್ತುತ ಜಾಗತಿಕ ಬದಲಾವಣೆಯಿಂದ ಸಂಘಟಿತ ಚಟುವಟಿಕೆಗಳು ಸ್ಥಳೀಯವಾಗಿ ರೂಪಿವಾಗುತ್ತಿವೆ. ಇದರಿಂದ ಶಾಲಾ ಮಕ್ಕಳಿಗೆ ವೈಜ್ಞಾನಿಕ ಅನುಭವ ಮತ್ತು ಮಾರುಕಟ್ಟೆ ವ್ಯವಹಾರ ಪರಿಚಯವಾಗುತ್ತಿದೆ. ಮನೆಯಲ್ಲಿನ ತಯಾರಿಕ ಆಹಾರ ಮತ್ತು ಬೀದಿ ಬದಿಯ ಆಹಾರಕ್ಕೂ ಇರುವ ಪರಿಣಾಮ ಮಕ್ಕಳು ತಿಳಿಯಬೇಕು. ಒತ್ತಡ ಬದುಕಿನಲ್ಲಿ ಆಹಾರ ಬಳಕೆ ಜಾಗೃತಿ ಬಹಳ ಮುಖ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮಿತ ಆಹಾರ ಬಳಕೆ ಇರಬೇಕು. ಕುಟುಂಬ ಪ್ರೀತಿ ಬೆಸೆಯುವ ಮನೆಯಲ್ಲಿನ ಆಹಾರ ಮೌಲ್ಯತೆ ದೂರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾಸಂಸ್ಥೆ ಮುಖ್ಯಸ್ಥ ಎಂ.ಶೇಖ್ ಫೀರ್, ಮಾತೃಕೃಪಾ ವ್ಯವಸ್ಥಾಪಕ ಎಂ. ನಿರಂಜನ್ ಮೂರ್ತಿ, ಮುಖ್ಯ ಶಿಕ್ಷಕಿ ನಫೀಜ್ ಫಾನಿಮಾ,ದೈಹಿಕ ಶಿಕ್ಷಣ ಶಿಕ್ಷಕ ಉಜ್ಜೀನಪ್ಪ, ಕಾವೇರಿ, ಅನ್ನಪೂರ್ಣ, ಶ್ವೇತಾ, ತನುಜಾ, ರೋಹಿಣಿ ಇದ್ದರು.
ಪೋಟೋ: ಸಿಎಲ್ ಕೆ: ಡಿ.13(ಮೇಳ)
ಚಳ್ಳಕೆರೆ ನಗರದ ಐಐಎಂಇ ಶಾಲೆಯಲ್ಲಿ ಶನಿವಾರ ಶಾಲಾ ಮಕ್ಕಳಿಂದ ಆಯೋಜಿಸಿದ್ದ ಆಹಾರ ಮೇಳದಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ ಭಾಗವಹಿಸಿದ್ದರು. ನಿರಂಜನ ಮೂರ್ತಿ, ಶೇಖ್ ಫೀರ್, ಅನ್ನಪೂರ್ಣ, ಕಾವೇರಿ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.