ಚಳ್ಳಕೆರೆ ಡಿ.15 ಅಪ್ರಾಪ್ತ ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಟ್ರಾಕ್ಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇಸಾವು.
ಕೆಟಿ ಹಳ್ಳಿ ಗ್ರಾಮದ ಸೋಮನಾಥ (45) ಮೃತ ಬೈಕ್ ಸವಾರ.
ಚಳ್ಳಕೆರೆ ತಾಲೂಕಿನ ಬೆಳಗೆರೆ ಬಳಿ ಘಟನೆ ನಡೆದಿದೆ.
17 ವರ್ಷದ ಗುರುರಾಜ್ ಟ್ರಕ್ಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕ.
ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಿಂದ ನಾರಾಯಣಪುರ ಗ್ರಾಮವಾಗಿ ಟ್ರಾಕ್ಟರನ್ನು ಚಾಲಕನಾದ
ಅಪ್ರಾಪ್ತ ಬಾಲಕ ಗುರುರಾಜನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು
ಎದುರಿಗೆ ದ್ವಿಚಕ್ರವಾಹನ ಸವಾರ ಸೋಮನಾಥ(45)
ಎಕ್ಸ್.ಎಲ್’ ಬೈಕನ್ನು ನಾರಾಯಣಪುರ ಗ್ರಾಮದ ಕಡೆಯಿಂದ ಬೆಳಗೆರೆ ಕಡೆಗೆ ರಸ್ತೆಯ ಎಡಪಕ್ಕದಲ್ಲಿ ಚಾಲನೆ ಮಾಡಿಕೊಂಡು
ಬರುತ್ತಿದ್ದವನಿಗೆ ಡಿಕ್ಕಿ ಹೊಡೆಸಿದ್ದರಿಂದ ಸೋಮನಾಥನು ಬೈಕ್ ಸಮೇತ ಕೆಳಗಡೆ ಬಿದ್ದು ತೀವ್ರವಾದ ರಕ್ತಗಾಯಳಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ,
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೋಲಿಸರು ಭೇಟಿನೀಡಿ ಪರಿಶೀಲನೆ ನಡಿ 17 ವರ್ಷದ ಟ್ರಾಕ್ಟರ್ ಚಾಲಕನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈಗಾಗಲೆ ಹಲವು ಕಡೆ ಅಪ್ರಾಪ್ತ ಬಾಲಕರು ದ್ವಿಚಕ್ರ ಹಾಗೂ ಕಾರು ಚಾಲನೆ ಮಾಡಿ ಅಪಘಾತ ಮಾಡಿ ಜನರ ಜೀವದ ಜತೆ ಚಲ್ಲಾಟವಾಡಿ ಅಪಘಾತ ಮಾಡಿದ ಬಾಲಕರ ಪೋಷಕರ ಮೇಲೆ ಪ್ರಕರಣ ದಾಖಲಿಸಿ ಪೋಷಕರಿಗೆ ದಂಡ ಹಾಕಿದ ಪ್ರಕರಣಗಳ ಸಾಲಿಗೆ ಈಗ ಬೆಳಗೆರೆ ಗ್ರಾಮದ ಬಳಿಅಪ್ರಾಪ್ತ ಬಾಲಕನೊಬ್ಬ ಟ್ರಾಕ್ಟರ್ ಚಾಲನೆಗೆ ಒಬ್ವ ಬಲಿಯಾಗಿರುವ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
About The Author
Discover more from JANADHWANI NEWS
Subscribe to get the latest posts sent to your email.