December 15, 2025
1db6da47-2b76-425d-b92a-2ae9de7de553.jpg


ಚಿತ್ರದುರ್ಗ: ಮೈಲಾರಲಿಂಗೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಬಂಜಿಗೆರೆಯ ಬಿ.ಟಿ.ಮಲ್ಲಯ್ಯನವರ ತನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ಪಾಲುವಿಭಾಗ ಮಾಡದಿದ್ದಕ್ಕೆ ಇತನ ಮಕ್ಕಳಾದ ಶ್ರೀಮತಿ ಬಿ.ಎಂ.ರಶ್ಮಿ ಹಾಗೂ ಬಿ.ಎಂ.ರಾಘವೇಂದ್ರಸ್ವಾಮಿ, ಬಿ.ಎಂ.ಪವನ ಎಂಬುವರು ತಂದೆಯ ಮೇಲೆ ಹಲ್ಲೆ ಮಾಡಿ ಸಿ.ಕೆ.ಪುರದಲ್ಲಿರುವ ಮನೆಯಿಂದ ಅವರನ್ನು ಹೊರ ಹಾಕಿ ನಾಲ್ಕು ಮನೆಗಳನ್ನು ಆಕ್ರಮಿಸಿಕೊಂಡಿದ್ದು, ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಹಿರಿಯ ನಾಗರೀಕರಾದ ಜಿ.ಟಿ.ಮಲ್ಲಯ್ಯನವರಿಗೆ ಮನೆಯನ್ನು ವಶಕ್ಕೆ ನೀಡಿ ಸೂಕ್ತ ರಕ್ಷಣೆ ನೀಡಬೇಕೆಂದು ಕರುನಾಡು ವಿಜಯ ಸಂಘಟನೆಯ ಕಾರ್ಯಕರ್ತರ ನೇತೃತ್ವದಲ್ಲಿ ಸಂಘದ ಅಧ್ಯಕ್ಷರಾದ ಕೆ.ಟಿ.ಶಿವಕುಮಾರ್ ರವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಬಿ.ಟಿ.ಮಲ್ಲಯ್ಯನವರು ಸ್ವಂತ ಮನೆಗೆ ಹೋದರೆ ಮಕ್ಕಳು ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಆಸ್ತಿಗಳನ್ನು ನಮ್ಮ ಹೆಸರಿಗೆ ಬರೆದುಕೊಡದಿದ್ದರೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ. ಈಗ ಅವರಿಗೆ ಮನೆ ಇಲ್ಲದೆ ಚಳ್ಳಕೆರೆ ತಾಲ್ಲೂಕು, ಬಂಜಿಗೆರೆ ಗ್ರಾಮದಲ್ಲಿ ವಾಸವಾಗಿದ್ದು, ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅವರ ಹೆಸರಿಗಿರುವ ಮನೆಯನ್ನು ಬಿಡಿಸಿಕೊಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಾಗೂ ಬಡಾವಣೆ ಪೊಲೀಸ್ ಠಾಣೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ರಾಜಕೀಯ ಪ್ರಭಾವದಿಂದ ಮನೆಯನ್ನು ಕೊಡಿಸದೆ ನಿರ್ಲಕ್ಷ ಮಾಡಿದ್ದಾರೆ. ಕೂಡಲೆ ಈ ಬಗ್ಗೆ ನ್ಯಾಯ ಸಿಗದಿದ್ದರೆ ಹಿರಿಯ ನಾಗರೀಕ ವೇದಿಕೆ ಹಾಗೂ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಸತ್ಯಗ್ರಹ ನಡೆಸಲಾಗುವುದೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾಧಿಕಾರಿಗಳ ಭರವಸೆ:-
ತಂದೆ ತಾಯಿಗಳು, ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ನೀಡಿ ಹಾಗೂ ರಕ್ಷಣೆ ನೀಡಿ ಬೆಳವಣಿಗೆಗೆ ಕಾರಣರಾಗಿರುತ್ತಾರೆ ನಂತರ ತಂದೆ ತಾಯಿಗಳಿಗೆ, ಕಿರುಕುಳ ನೀಡುವುದು ಹಾಗೂ ಮನೆಯಿಂದ ಹೊರಹಾಕುವುದು ಇದೊಂದು ಅನಾಗರೀಕ ವರ್ತನೆಯಾಗಿದೆ. ಯಾರೇ ಆಗಲಿ ತಂದೆ ತಾಯಿಗಳಿಗೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದವರ ಮೇಲೆ ಕ್ರಮ ಕೈಗೊಂಡು ಆಕ್ರಮಿಸಿಕೊಂಡಿರುವ ಮನೆ ಹಾಗೂ ರಕ್ಷಣೆ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading