ಹಿರಿಯೂರು :
ನಗರದಲ್ಲಿ ಸಾರ್ವಜನಿಕ ಶನಿವಾರದ ಸಂತೆ ಹೇಗಿರುತ್ತದೆ, ಅಲ್ಲಿ ರೈತರು, ಗ್ರಾಹಕರು, ಗೃಹಿಣಿಯರು ಹೋಗಿ ಸಂತೆಯಿಂದ ತರಕಾರಿ ಹಾಗೂ ಅಗತ್ಯ ದಿನನಿತ್ಯದ ವಸ್ತುಗಳನ್ನು, ದವಸಧಾನ್ಯಗಳನ್ನು ಹೇಗೆ ಕೊಳ್ಳುತ್ತಾರೆ, ವ್ಯಾಪಾರಸ್ಥರು ಹೇಗೆ ಮಾರಾಟ ಮಾಡುತ್ತಾರೆ ಎಂಬುದರ ಬಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಸಂತೆ ಮೇಳ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಹೇಳಿದರು.
ನಗರದ ಶ್ರೀ ವಾಗ್ದೇವಿ ವಿದ್ಯಾಸಂಸ್ಥೆ ಆವರಣದಲ್ಲಿ ಶ್ರೀ ವಾಸವಿ ವಿದ್ಯಾವರ್ಧಕ ಸಂಘ, ಶ್ರೀ ವಾಗ್ದೇವಿ ಎಜುಕೇಶಿನಲ್ ಅಯೋಸಿಯೇಷನ್ ಶ್ರೀ ವಾಗ್ದೇವಿ ಕನ್ನಡ ಮಾಧ್ಯಮ ಶಾಲೆ ಹಾಗೂ ಶ್ರೀ ವಾಸವಿ ಆಂಗ್ಲ ಮಾಧ್ಯಮ ಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತೆ ಮೇಳ ಮಕ್ಕಳಿಂದ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ವಾಗ್ದೇವಿ ವಿದ್ಯಾ ಸಂಸ್ಥೆ ಮಕ್ಕಳಿಂದ ನಡೆಸಲಾಗುತ್ತಿರುವ ಸಂತೆಮೇಳ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಸಂತೆಯಲ್ಲಿರುವ ವಸ್ತುಗಳನ್ನು ಖರೀದಿ ಮಾಡಿ ಮಕ್ಕಳಿಗೆ ಪ್ರೋತ್ಸಾಹಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂತೆಮೇಳ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜೊತೆ ಮಕ್ಕಳ ಪೋಷಕರೇ ಸಂತೆಯ ಗ್ರಾಹಕರಾಗಿ ಪಾಲ್ಗೊಂಡು ತರಕಾರಿ ಹಾಗೂ ದವಸಧಾನ್ಯ, ದಿನಬಳಕೆಯ ವಸ್ತುಗಳನ್ನು ಖರೀದಿಸುವ ಮೂಲಕ ಸಂಭ್ರಮಿಸಿದರು.



About The Author
Discover more from JANADHWANI NEWS
Subscribe to get the latest posts sent to your email.