ಚಳ್ಳಕೆರೆ ಡಿ.15.ವಾಹನ ಸವಾರರೇ ಎಚ್ಚರ ಇನ್ನುಮುಂದೆ ಪಾರ್ಕಿಂಗ್ ರೂಲ್ಸ್ ಪಾಲಿಸದಿದ್ದರೆ ಪೋಲಿಸರು ವೀಲ್ ಲಾಕ್ ಮಾಡಿ ದುಬಾರಿ ದಂಡ ಕಟ್ಟಲು ಸಿದ್ದರಾಗಿ.
ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಪಿ ಐ ದೇಸಾಯಿ ರಸ್ತೆಗಿಳಿದು ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಎಲ್ಲೆಂದೆರಲ್ಲಿ ನಿಲ್ಲಿಸಿದ ವಾಹನಗಳ ದಟ್ಟಣೆ
ನಿಯಂತ್ರಣಕ್ಕಾಗಿ ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ಪೊಲೀಸರು ವೀಲ್‌ಲಾಕ್ ಅಳವಡಿಸುವ ಮೂಲಕ ದಂಡವಿಧಿಸಲು ಮುಂದಾಗಿದ್ದಾರೆ.
ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ
ಟ್ರಾಫಿಕ್ ಸಮಸ್ಯೆ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಂಡರೂ
ಚಾಲಕರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ
ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳಿಗೆ
ವೀಲ್ ಲಾಕ್ ಮಾಡುವ ಮೂಲಕ ವಾಹನ
ಸವಾರರಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.
ಚಳ್ಳೆರೆ ಠಾಣೆಯ ಪಿಐ ದೇಸಾಯಿ ಆರ್.
ಎಸ್, ಮಾತನಾಡಿ ಸಂಚಾರಿ ನಿಯಮಗಳ
ಪಾಲನೆಯಿಂದ ಅಪಘಾತ ತಡೆಗಟ್ಟಲು ಸಾಧ್ಯ.
ಆದ್ದರಿಂದ ಪ್ರತಿಯೊಬ್ಬರೂ ನಿಯಮ ಪಾಲನೆಗೆ ಒತ್ತು
ನೀಡಬೇಕು ಹಾಗೂ ಪೊಲೀಸ್ ಇಲಾಖೆಯೊಂದಿಗೆ
ಸಹಕರಿಸುವಂತೆ
ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ
ವಾಹನಗಳ ದಟ್ಟಣೆ ಹಾಗೂ ದಿನ ನಿತ್ಯ ನಗರಕ್ಕೆ
ನೂರಾರು ಜನರು, ವೃದ್ಧರು, ಮಹಿಳೆಯರು,
ವಿದ್ಯಾರ್ಥಿಗಳು ಬರುವುದರಿಂದ ರಸ್ತೆಯಲ್ಲಿ
ಎಲ್ಲೆಂದರಲ್ಲಿ ವಾಹನ ನಿಲುಗಡೆ .ಅಡ್ಡದಿಡ್ಡಿ ಸಂಚಾರದಿಂದ ಟ್ರಾಫಿಕ್
ಕಿರಿಕಿರಿಯಾಗುತ್ತಿದೆ ಇದರಿಂದ ರಸ್ತೆ ಅಪಘಾತಗಳು
ಹೆಚ್ಚಾಗುತ್ತಿವೆ.
ನೆಹರು ವೃತ್ತದಿಂದ 200 ಮೀಟರ್ ಅಂತರದಲ್ಲಿ
ಯಾವುದೇ ಪುಟ್ ಪಾತ್ ನಲ್ಲಿ ಅಂಗಡಿಗಳನ್ನು
ಹಾಗೂ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂಬ ನಿಯವಿದೆ ಆದರೂ ಸಹ
ನಿಯಮಗಳನ್ನು ಗಾಳಿಗೆ ತೂರಿ ಇಡುವರಿಂದ
ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ .ಪಾವಗಡ ರಸ್ತೆ ಸೇರಿದಂತೆ ನೆಹರು ವೃತ್ತದಲ್ಲಿ ರಸ್ತೆ ಮೇಲೆ ಅಕ್ರಮ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ವರ್ತಕರನ್ನು ರಸ್ತೆ ಬಿಟ್ಟು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಜಗರೆಡ್ಡಿ. ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.














About The Author
Discover more from JANADHWANI NEWS
Subscribe to get the latest posts sent to your email.