December 14, 2025
1000598801.jpg

ಚಿತ್ರದುರ್ಗ ನ.13 ಚಿತ್ರದುರ್ಗ ಮೆದಿಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26 ನೇ ವರ್ಷದ ಅನ್ನದಾನದ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 16.-11 -20 25 ಶನಿವಾರ ಬೆಳಿಗ್ಗೆ 11 ಗಂಟೆಗೆ ಗಣ ಹೋಮ, ನವ ಗ್ರಹ ಹೋಮ ,ರುದ್ರ ಹೋಮ ಮಧ್ಯಾಹ್ನ 12:30 ಗಂಟೆಗೆ ಪೂರ್ಣಾವತಿ ಕಾರ್ಯಕ್ರಮವಿರುವುದು.

ಶ್ರೀ ಉಮೇಶ್ ಗೋವಿಂದ ಕಾರಜೋಳ ರಾಜ್ಯ ಬಿ .ಜೆ. ಪಿ ಎಸ್ ಸಿ ಮೋರ್ಚ ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರಣ್ ಕುಮಾರ್ ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ . ಉಪಸ್ಥಿತರಿರುವರು ಪ್ರತಿ ವರ್ಷದಂತೆ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿಗಳಿಗೆ ದಿನಾಂಕ 16 -11 -2025 ರಿಂದ 13 -1- 2026 ವರೆಗೆ 60 ದಿನಗಳ ಕಾಲ ಪ್ರತಿನಿತ್ಯ ಉಚಿತ ಅನ್ನದಾನ ಕಾರ್ಯಕ್ರಮವನ್ನು ನೆರವೇರಿಸಲಾಗುವುದು. 16-12-2025 ರಿಂದ 21-12-2025 ರವರೆಗೆ 26ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ. 20-.12- 2025 ಶನಿವಾರ ಸಂಜೆ 7: 00ಗೆ ಅಯ್ಯಪ್ಪ ಸ್ವಾಮಿ ಪಡಿಪೂಜೆ ಕಾರ್ಯಕ್ರಮ 28- 12- 2025 ಭಾನುವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಅನ್ನದಾನ ಕಾರ್ಯಕ್ರಮ 13-.01.-2026 ಮಂಗಳವಾರ ಸಂಜೆ 6 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ 14 -1-2026 ಬುಧವಾರ ಸಂಜೆ 6 ಗಂಟೆಗೆ ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ಇರುತ್ತದೆ . ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಸೇವಾರ್ತಿಗಳು ಹಾಗೂ ಭಕ್ತಾದಿಗಳು ಈ ಮೇಲ್ಕಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ. ಶರಣ್ ಕುಮಾರ್ ಅಧ್ಯಕ್ಷರು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ .ಕಾರ್ಯದರ್ಶಿಗಳಾದ ಎಂ ಪಿ ವೆಂಕಟೇಶ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್. ಹಾಗೂ ಬೆಟ್ಟದ ಮಲ್ಲಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು 9448664865 ಕಾರ್ಯದರ್ಶಿ 9342310469 ಸಂಪರ್ಕಿಸಬಹುದು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading