
ಚಳ್ಳಕೆರೆ ನ.14
ನಗರದ ಎಸ್ ಆರ್ ಫಂಕ್ಷನ್ ಹಾಲಿನಲ್ಲಿ ಮಮತಾ ಮತ್ತು ರಾಘವೇಂದ್ರ ಗುಪ್ತ ಅವರ ಮಾಲೀಕತ್ವದ ಅಕ್ಷರ ಅಕಾಡೆಮಿಯ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ ಮತ್ತು ಅಬಾಕಸ್‌ನ ಎಲ್ಲಾ ಎಂಟು ಹಂತಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಸಮಾರಂಭ ಹಮ್ಮಿಕೊಂಡು ಪ್ರಮಾಣ ಪತ್ರ ಮತ್ತು ಮೆಮೆಂಟೊ ನೀಡಿ ಗೌರವಿಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ಟ್ರೋಪಿ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಐನ್ಸ್ಟೀನ್ ಎಂದೇ ಪ್ರಸಿದ್ಧರಾದ ನಾಗೇಶ್ ಕೆ.ಓ ಗಣಿತ ಶಿಕ್ಷಕ, ಯಶವಂತ್. ಎನ್, ಪ್ರಾಂಶುಪಾಲ, ಎಂ ಗೋವಿಂದರಾಜುಲು, ಹಿರಿಯ ಮಾರ್ಗದರ್ಶಕ ಅಕ್ಷರ ಅಕಾಡೆಮಿಯ ಮಮತಾ ರಾಘವೇಂದ್ರ.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರವಿ ನಿರೂಪಣೆ ನಡೆಸಿ, ಶ್ರೀಮತಿ ವಿದ್ಯಾರಣಜಿತ್ ಸ್ವಾಗತ ಕೋರಿದರು. ರಾಘವೇಂದ್ರ ಗುಪ್ತರವರು ಪ್ರಾಸ್ತಾವಿಕ ನುಡಿ ನುಡಿದರು. ರಣಜಿತ್ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಲಕ್ಷ್ಮಿ ವಂದನಾರ್ಪಣೆ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ಚಳ್ಳಕೆರೆ ತುಮಕೂರು, ಬೆಂಗಳೂರು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಹಾಗೂ ನೆರೆಯ ಆಂಧ್ರಪ್ರದೇಶದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಕ್ಷರ ಅಕಾಡೆಮಿಯ ಸಂಸ್ಥೆಯು ಕೇವಲ ಮೂವರು ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಪ್ರಸ್ತುತ 150 ವಿದ್ಯಾರ್ಥಿಗಳವರೆಗೆ ಬೆಳೆದಿದೆ ಎಂಬುದನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ಮಮತಾರವರು ಸಂತಸದಿಂದ ಹಂಚಿಕೊಂಡರು. ಅಬಾಕಸ್‌ನ ಶಿಕ್ಷಕರ ತರಬೇತಿಯನ್ನು ಕೂಡ ಈ ಸಂಸ್ಥೆ ಪ್ರಾರಂಭಿಸಿದ್ದು ಪ್ರಸ್ತುತ ಮೂರು ಪ್ರಾಂಚೈಸಿಗಳನ್ನು ಹೊಂದಿದೆ ಹಾಗೂ ಹೊಸ ಬ್ಯಾಚ್ಗಳನ್ನು ನವಂಬರ್ 16 ರಿಂದ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.




About The Author
Discover more from JANADHWANI NEWS
Subscribe to get the latest posts sent to your email.