ಚಳ್ಳಕೆರೆ ನ.14
ನಗರಸಭೆ ಕಚೇರಿಗಾಗಿ ವಕ್ಛ್ ಬೋರ್ಡಿಗಾಗಲಿ ಚರ್ಮದ ಮಂಡಿ.ಸಮುದಾಯ ಭವನ ಸೇರಿದಂತೆ ಮಾದಿಗ ಸಮುದ ಆಸ್ತೆ ಖಾತೆ ಮಾಡುವಂತೆ ಮನವಿ ನೀಡಿಲ್ಲ ಎಂದು ಮುಸ್ಲಿಂ ಸಮುದಾಯದ ಮುಖಂಡರು ಹೇಳಿದ್ದಾರೆ.


ನಗರದ ಜಾಮೀಯಾ ಮಸೀದಿಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ನೀಡುತ್ತಾ ಸಾಮಾಜಿಕ ಜಾಲ ತಾಣದಲ್ಲಿ ವಕ್ಛ್ ಬೋರ್ಡ್ ಹಾಗೂ ನಗರಸಭೆಗೆ ಮುಸ್ಲಿಂ ಸಮುದಾಯವರು ಮನವಿ ನೀಡಿದ್ದಾರೆ ಎಂಬ ಮನವಿಯೊಂದು ಹರಿದಾಡುತ್ತಿರುವುದು ಕಂಡು ನಗರಸಭೆಗೆ ಮುಸ್ಲಿಂ ಸಮುದಾಯವರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದಾಗ ಆ ದಿನಾಂಕದಂದು ಯಾವುದೇ ಮನವಿ ಪತ್ರ ನಗರಸಭೆ ಕಚೇರಿಗೆ ಬಂದಿಲ್ಲ 14-11-2024
ಶ್ರೀ ರಹಮತುಲ್ಲಾರವರು ದಿನಾಂಕ: 06-11-2024 ರಂದು ಚಳ್ಳಕೆರೆ ಜಾಮಿಯ ಮಸೀದಿಯ ಆಡಳತ ಅಧಿಕಾರಿಯಾಗಿ ಅಧಿಕಾರದಲ್ಲಿ ಇರಲಿಲ್ಲ. ಅವರ ಅಧಿಕಾರ ಅವಧಿಯು ದಿ: 31-07-2023 ಕೈ ಮುಕ್ತಾಯವಾಗಿದ್ದರಿಂದ ಅವರು ತಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಪತ್ರದ ಮುಖೇನ ಕೋರಿಕೊಂಡ ಮೇರೆಗೆ ರಾಜ್ಯ ವಕ್ಸ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿ.ಇ.ಓ) ನೂರ್ ಬಾಷ ಎಂಬುವವರನ್ನು ಚಳ್ಳಕೆರೆ ಜಾಮಿಯಾ ಮಸೀದಿಗೆ ಕೇ ಟೇಕರ್ ಆಗಿ ನೇಮಕ ಮಾಡಿ ದಿ: 04-09-2023 ರಂದು ಆದೇಶ ಹೊರಡಿಸಿದರು. ಇದೇ ದಿನಾಂಕದಂದು ಅವರು ಅಧಿಕಾರ ವಹಿಸಿಕೊಂಡರು. 06-11-2023 ರಂದು ರಹಮತುಲ್ಲಾ ರವರು ಚಳ್ಳಕೆರೆ ನಗರ ಸಭೆಯ ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆಂದು ಮತ್ತು ಸದರಿ ಅರ್ಜಿಯಲ್ಲಿ ಖಬರಸ್ತಾನ್ ಗೆ ಚರ್ಮ ಕೈಗಾರಿಕೆ ಜಾಗ, ಜನತಾ ಕಾಲೋನಿಯಲ್ಲಿರುವ ಚರ್ಮದ ಮಂಡಿ ಜಾಗ ಹಾಗೂ ಜನತಾ ಕಾಲೋನಿ ಮಸೀದಿ
ಪಕ್ಕದಲ್ಲಿರುವ ಸಮುದಾಯ ಭವನವನ್ನು ವಕ್ಸ್ ಬೋರ್ಡಿಗೆ ಸೇರಿಸಬೇಕೆಂದು ಹಲವಾರು ಬಾರಿ ಅರ್ಜಿ ಸಹ ಮೀಟಿಂಗ್ ನಲ್ಲಿ ತಂದಿರುವುದಿಲ್ಲ. ನಮ್ಮಲ್ಲಿ ಗುಡಿ ಕೈಗಾರಿಕೆಗಳು ಇರುವುದಿಲ್ಲ. ನಮ್ಮಲ್ಲಿ ಬಡವರು ಹೆಚ್ಚಾಗಿ ಇರುವುದರಿಂದ ಕೂಡಲೇ ಈ ಜಾಗವನ್ನು ಅಭಿವೃದ್ಧಿಪಡಿಸಲು ನಮ್ಮ ವಕ್ಸ್
ಬೋರ್ಡಿಗೆ ಸೇರಿಸಬೇಕೆಂದು ಕೇಳಕೊಳ್ಳುತ್ತೇವೆ. ಮಾದಿಗ ಸಮುದಾಯದವರು ಮುಸ್ಲಿಂ ಜನಾಂಗದ
ಜಾಗವನ್ನು ಕಬಳಸುವುದಕ್ಕೆ ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ಅದನ್ನು ತಡೆಹಿಡಿಯಬೇಕಾಗಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ವಕ್ಸ್ ಬೋರ್ಡಿಗೆ ಸೇರಿಸಬೇಕೆಂದು ಕೇಳಕೊಳ್ಳುತ್ತೇವೆ ಎಂಬ ಅಂಶಗಳು ಒಳಗೊಂಡಿರುವ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ನಮಗೂ ಸಹ ದಿ:28-10-2024 ರಂದು ಸದರಿ ವಿಷಯ ತಿಳಿಯಿತು. ಸಮಾಜದಲ್ಲಿ ಅಶಾಂತಿ ಉಂಟಾಗುವಂತಹ ಅಂಶಗಳು ಪತ್ರದಲ್ಲಿ ಇರುವುದನ್ನು ಗಮನಿಸಿದ
ಜಿಲ್ಲಾ ವಕ್ಸ್ ಮಂಡಳಿಯವರು, ಚಳ್ಳಕೆರೆ ಜಾಮಿಯಾ ಮಸೀದಿಯವರ ಮೂಲಕ ದಿ: 30-10-2024 ರಂದು ನಗರಸಭೆಯ ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದಿ: 05-11-2023 ರ ಮತ್ತು ದಿ: 06-11-2023 ರ ಸ್ವೀಕೃತಿ ಪತ್ರದ ದೃಢೀಕೃತ ಪ್ರತಿಯನ್ನು
ನೀಡಬೇಕೆಂದು ಕೋರಲಾಗಿತ್ತು.
ನಾವು ನೀಡಿದ ಪತ್ರಕ್ಕೆ ದಿ: 13-11-2024 ರಂದು ನಗರಸಭೆಯಿಂದ ಹಿಂಬರಹ ನೀಡಿದ್ದು, ಸದರಿ ಹಿಂಬರಹದಲ್ಲಿ ಕಛೇರಿಯ ದಾಖಲಾತಿಗಳನ್ನು ಪರಿಶೀಅಸಿದಾಗ ಮನವಿಯಲ್ಲಿ ಕೋರಿರುವಂತೆ ಜಾಮಿಯಾ ಮಸೀದಿ ಚಳ್ಳಕೆರೆ ಇವರ ವತಿಯಿಂದ ವಕ್ಸ್ ಬೋರ್ಡಿಗೆ ಸಂಬಂಧಿಸಿದ ಮನವಿ ದಿ:
05-11-2023 ಕಛೇರಿಯಲ್ಲಿ ಸ್ವೀಕೃತ ದಿನಾಂಕ ದಿ: 06-11-2023 ರ ಪತ್ರವು ಚಳ್ಳಕೆರೆ ನಗರಸಭೆಯಲ್ಲಿ ಸ್ವೀಕೃತವಾಗಿರುವುದಿಲ್ಲ. ಸದರಿ ಪತ್ರಕ್ಕೂ ಸಾಮಾಜಿಕ ಜಾಲತಾಣದಲ್ಲಿ
ಹರಿದಾಡುತ್ತಿರುವ ದಿ: 05-11-2023 ರ ಮತ್ತು 06-11-2023 ಪತ್ರಕ್ಕೂ ಚಳ್ಳಕೆರೆ ನಗರಸಭೆಗೂ ಸಂಬಂಧ ಇರುವುದಿಲ್ಲ
ಆದುದರಿಂದ ನಕಲಿ ಮನವಿ ಪತ್ರವನ್ನು ಜಾಮಾಜಿಕಜಾಲತಾಣದಲ್ಲಿ ಹರಿಬಿಟ್ಟವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡು ಕಾನೂನು ಕ್ರಮ
ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.




About The Author
Discover more from JANADHWANI NEWS
Subscribe to get the latest posts sent to your email.