
ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿರುವ ರಂಗಯ್ಯನ ದುರ್ಗಾ ಜಲಾಶಯವು
ಅಂದಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜು ಅರಸು ರವರ ಅವಧಿಯಲ್ಲಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಪಟೇಲ್ ಜಿ ಪಾಪನಾಯಕ ರವರ ಅವಧಿಯಲ್ಲಿ ಹಾಗೂ ಅಂದಿನ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಎಚ್.ರಂಗನಾಥ್ ಸಾಹೇಬ ರವರ ಅವಧಿಯಲ್ಲಿ ಆದಂತಹ ಜಲಾಶಯ
ಇಂದು ಭರ್ತಿಯಾಗಿರುವ ಕಾರಣ ತಾಲೂಕಿನ ಎಲ್ಲಾ ಜನತೆ ಅತ್ಯಂತ ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.
ಆದ ಪ್ರಯುಕ್ತ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ನ ಅಧ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು ರವರು
ಇಂದು ಕ್ಷೇತ್ರದ ಅನೇಕ ಮುಖಂಡರುಗಳೊಂದಿಗೆ ರಂಗಯ್ಯನ ದುರ್ಗಾ ಜಲಾಶಯಕ್ಕೆ ತೆರಳಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನತೆಗೆ ಸುಖ-ಶಾಂತಿ ಸಮೃದ್ಧಿಯಿಂದ ಇರಲಿ ಒಳ್ಳೆಯ ಮಳೆ-ಬೆಳೆ ಆಗಲಿ ಎಂದು ಈ ಭಾಗದ ರೈತರಿಗೆ ಸಂತೋಷವನ್ನುಂಟುಮಾಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿ ಪೂಜೆಯನ್ನು ನೆರವೇರಿಸಿ ಬಾಗಿನವನ್ನು ಅರ್ಪಿಸಿದರು.
About The Author
Discover more from JANADHWANI NEWS
Subscribe to get the latest posts sent to your email.