September 14, 2025
IMG-20250914-WA0147.jpg

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ:-ಹಟ್ಟಿ ಮಲ್ಲಪ್ಪ ನಾಯಕ ಸಮಾಧಿ ಹತ್ತಿರ ಅಕ್ಟೋಬರ್ 2ರ
ಆಯುಧ ಪೂಜೆ ದಿನದಂದು ಹಿರಿಯರ ಹಬ್ಬ ಮಾಡಲಾಗುವುದು ಎಂದು ಮುಖಂಡ ಎಸ್ .ಟಿ. ಬಸವರಾಜ್ ಹೇಳಿದರು.

ಭಾನುವಾರ ಪಟ್ಟಣದ ದೊಡ್ಲ ಮಾರಿಕಾಂಬ ದೇವಸ್ಥಾನ ಆವರಣದಲ್ಲಿ ಹೋಬಳಿಯ ನಾಯಕ ಸಮುದಾಯದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹಟ್ಟಿ ಮಲ್ಲಪ್ಪ ನಾಯಕರು ನಮ್ಮ ಸಮುದಾಯದ ಸಾಂಸ್ಕೃತಿಕ ನಾಯಕರಾಗಿದ್ದು, ಶ್ರೀಶೈಲದಿಂದ ಬಂದು ನಾಯಕನಹಟ್ಟಿಯಲ್ಲಿ ವಾಸವಾಗಿ ದೊರೆಗಳು ಆಗಿ ನಾಯಕನಹಟ್ಟಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತಿಪ್ಪೇರುದ್ರ ಸ್ವಾಮಿಗಳು ಹಟ್ಟಿ ದೊರೆಗಳ ಸಹಕಾರದಿಂದ ಕೆರೆಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಹಟ್ಟಿ ಮಲ್ಲಪ್ಪ ನಾಯಕನ ಸ್ಮಾರಕವನ್ನು ಉಳಿಸುವುದು ನಾಯಕ ಸಮುದಾಯದ ಆದ್ಯ ಕರ್ತವ್ಯವಾಗಿದೆ, ಹಟ್ಟಿ ಸ್ಮಾರಕಗಳನ್ನು ಉಳಿಸುವ ಸಲುವಾಗಿ ದೊರೆಗಳ ಸಮಾಧಿ ಬಳಿ ಸಮಾಜದ ಬಾಂಧವರೆಲ್ಲರೂ ಒಟ್ಟುಗೂಡಿ ಹಿರಿಯರ ಹಬ್ಬ ಆಚರಿಸೋಣ, ಅಂದಿನ ದಿನ ದೊರೆಗಳ ಮನೆಯಿಂದ ದಿಬ್ಬಣ ತೆಗೆದುಕೊಂಡು ಹೋಗೋಣ ಈ ಆಚರಣೆಗೆ ಪ್ರತಿಯೊಬ್ಬರೂ ಪಕ್ಷತೀತವಾಗಿ ಕೈಜೋಡಿಸಬೇಕು, ಹಿರಿಯರ ಹಬ್ಬ ಆಚರಣೆಗೆ ಬರುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಕಲ್ಪಿಸೋಣ, ಈ ವರ್ಷದಿಂದ ಇದು ಜಾರಿಯಾಗಲಿ ಪ್ರತಿ ವರ್ಷ ಸ್ಮಾರಕದ ಬಳಿ ಹಿರಿಯರ ಹಬ್ಬ ಆಚರಣೆಯಾಗಲಿ ಎಂದರು.ನಾಯಕನಹಟ್ಟಿ ಹತ್ತಿರದ ಐತಿಹಾಸಿಕ ಬಾವಿ ಅಭಿರುದ್ದಿ ಪಡಿಸಲು ಶ್ರಮಿಸೋಣ,
ಸ್ಮಾರಕ ಉಳಿಸಿಕೊಳ್ಳಲು ನಾವೆಲ್ಲರೂ ಹೋರಾಟ ಮಾಡಬೇಕಿದೆ.
ಅಂದಿನ ದಿನದಲ್ಲಿ 10 ಸಾವಿರ ಜನಸಂಖ್ಯೆ ಸೇರಿಸಿ ಊಟದ ವ್ಯವಸ್ಥೆ ಮಾಡೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇನ್ನೂ ಇದೆ ವೇಳೆ ದೊರೆ ತಿಪ್ಪೇಸ್ವಾಮಿ. ದಸರಾ ಮಹೋತ್ಸವದ ವಿಜಯ ದರ್ಶನ ದಿನ ದೊರೆಗಳ ಮಟ್ಟಿಯಲ್ಲಿ ಹಿರಿಯರ ಹಬ್ಬ ಆಚರಣೆಯಲ್ಲಿ ನಾಯಕ ಸಮುದಾಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.

ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಮಾತನಾಡಿದರು ವಿಜಯದಶಮಿ ದಿನದಂದು ಸಮಸ್ತ ನಾಯಕನಹಟ್ಟಿ ಹೋಬಳಿಯ ನಾಯಕ ಸಮುದಾಯ ದೊರೆಗಳ ಜೊತೆಗೂಡಿ ಭವ್ಯ ಮೆರವಣಿಗೆ ಮೂಲಕ ಹಟ್ಟಿ ಸ್ಮಾರಕಗಳಿಗೆ ತೆರಳಿಯಲ್ಲಿ ಸಂಭ್ರಮ ಸಡಗರದಿಂದ ಹಿರಿಯರ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಆದ್ದರಿಂದ ಹೋಬಳಿಯ ಸಮಸ್ತ ನಾಯಕ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣ ಹಾಗೂ ಹೋಬಳಿಯ ಎಲ್ಲಾ ಗ್ರಾಮಗಳ ನಾಯಕ ಸಮುದಾಯದ ಹಿರಿಯ ಮುಖಂಡರು ಗ್ರಾಮ ಪಂಚಾಯತಿ ಅಧ್ಯಕ್ಷರು ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಯುವಕರು ವಿದ್ಯಾರ್ಥಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading