September 14, 2025
d14-tm1.jpg

.



ವರದಿ: ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ನಮ್ಮಲ್ಲಿರುವ ಮೌಲ್ಯಗಳು ಒಂದಾವರೆ ನಾವು ನಡೆದು ಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ, ನಾವುಗಳು ಇಂದು ಪ್ರಸ್ತುತವಾಗಿ ಮೌಲ್ಯಗಳ ನವೀಕರಣ ಮಾಡಬೇಕು, ಮೌಲ್ಯಗಳನ್ನ ಗಟ್ಟಿಯಾಗಿ ಹಿಡಿಯುವಂತಹ ಕೆಲಸಗಳನ್ನ ಕವಿತೆಗಳು ಮಾಡಬೇಕು ಎಂದು ತಾಲೂಕು ಕ.ಸಾ.ಪ ಮಾಜಿ ಅಧ್ಯಕ್ಷ ಪಿ.ಎಲ್.ಲೋಕೇಶ್ವರ್ ತಿಳಿಸಿದರು.
ನಾಡಗೀತೆಗೆ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾನುವಾರ ಕನ್ನಡ ಭವÀನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕವಿಗೋಷ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ವಿಧ್ಯಾಮಾನಗಳು ಬಹಳ ಮುಖ್ಯವಾಗಿವೆ, ಕವಿತೆಗಳ ರಚನೆಯಲ್ಲಿ ವಸ್ತುಗಳು ಕೂಡ ಬಹು ಮುಖ್ಯ, ನಾವುಗಳು ನವೋದಯ ಕಾಲದ ಚಿಂತೆನೆಗಳನ್ನು ಮಾಡುತ್ತಾ ಕುಳಿತುಕೊಂಡರೆ ಸಮಾಜಕ್ಕೆ ಅಷ್ಟೊಂದು ಪ್ರಯೋಜನಕಾರಿ ಆಗುವುದಿಲ್ಲ, ಸಮಾಜ ಮುಖಿಯಾದಂತಹ ಸಮಾಜದ ಬದಲಾವಣೆ ಪರಿವರ್ತನೆಯಾಗುವಂತಹ ಕೆಲಸಗಳನ್ನ ನಾವೆಲ್ಲರೂ ಸಹಾ ಸೇರಿ ಮಾಡಬೇಕಾಗಿದೆ.
ಕವಿತೆಗಳಲ್ಲಿ ಅನುಭವ ಇರಬೇಕು, ಅಂತಹ ಅನುಭವಗಳು ಬರಬೇಕಾದರೆ ಕವಿಗೋಷ್ಟಿಗಳಲ್ಲಿ ಭಾಗವಹಿಸಬೇಕು.ಎಲ್ಲಾ ಶೈಲಿಯ ಕವಿತೆಗಳನ್ನ ಕೇಳಬೇಕು ವಿಮರ್ಶೆ ಮಾಡಬೇಕು, ಕವಿತೆಗಳ ಸ್ವಾರಸ್ಯ ತಿಳಿಯಬೇಕು ಹೆಸರಾಂತ ಸಾಹಿತಿಗಳ ಕವಿಗಳ ಕೃತಿಗಳನ್ನ ಅಧ್ಯಾಯನ ಮಾಡಬೇಕು ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಕ.ಸಾ.ಪ ಮಾಜಿ ಅಧ್ಯಕ್ಷ ಹೆಗ್ಗೆರೆರಂಗಪ್ಪ ಕವಿಗಳು ಕ್ರಿಯಾಶೀಲರಾಗಿರಬೇಕು, ಸೃಜನಶೀಲರಾಗಿರಬೇಕು, ಕವಿಗಳಿಗೆ ಕಲಿಕೆ ನಿರಂತರವಾಗಿರಬೇಕು, ಪ್ರಕೃತಿಯನ್ನ ವಿಜ್ಞಾನ ಗೆಲ್ಲಲು ಸಾಧ್ಯವಿಲ್ಲ, ನಿಸರ್ಗಕ್ಕಿಂತ ಯಾವುದೂ ಸಹಾ ದೊಡ್ಡದಲ್ಲ, ಸಾಹಿತ್ಯ ರಚನೆ ಎಂಬುದು ಸಂಮೃದ್ದವಾಗಿರಬೇಕು, ಓದುಗರ ಸಂಖ್ಯೆ ಹೆಚ್ಚಾಗಿರಬೇಕು ಆಗ ಮಾತ್ರ ಕವಿತೆಗಳಿಗೆ ಪ್ರೋತ್ಸಹ ಸಿಗುತ್ತದೆ ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕ.ಸಾ.ಪ ಅಧ್ಯಕ್ಷ ಎಂ.ಆರ್.ಶಾಂತಪ್ಪ ಕನ್ನಡ ಎಂಬ ವಿಷಯ ಬಂದಾಗ ಎಲ್ಲರೂ ಸಹಾ ಒಟ್ಟಾಗಿ ಸೇರಿ ಕನ್ನಡದ ಕೆಲಸ ಮಾಡುವುದರ ಜೋತೆಗೆ ಕನ್ನಡಾಂಬೆಯ ತೇರು ಎಳೆಯಬೇಕಿದೆ ಕನ್ನಡದ ರಥವನ್ನ ಸಮರ್ಥವಾಗಿ ಎಳೆದುಕೊಂದು ಹೋಗುವ ಕೆಲಸವಾಗಬೇಕಾಗಿದೆ ಕನ್ನಡದ ಕೆಲಸ ಮಾಡುವ ಕಟ್ಟಾಳುಗಳಾಗಬೇಕು, ನಾವು ನಮ್ಮ ಜವಾಬ್ದಾರಿಗಳನ್ನ ನಿಭಾಯಿಸಬೇಕಾಗಿದೆ, ಕನ್ನಡ ಕೆಲಸ ಕಾರ್ಯ ಕಲಾಪಗಳನ್ನು ಮಾಡುವಾಗಿ ಸರ್ವರನ್ನು ಸಮಾನವಾಗಿ ಕಾಣಬೇಕಾಗಿದೆ ಎಂದರು.
ಮುಖ್ಯ ಅತಿಧಿಗಳಾಗಿ ಕ.ಸಾ.ಪ ಮಾಜಿ ಅಧ್ಯಕ್ಷರುಗಳಾದ ಬಾ.ಮೈಲಾರಪ್ಪ, ಹೆಚ್.ಎಂ.ರಾಜಣ್ಣ, ಕೆ.ಎಸ್.ಕಲ್ಮಠ್, ಎಂ.ಬಿ.ತಿಪ್ಪೇಸ್ವಾಮಿ, ಬಿ.ಪಿ.ಓಂಕಾರಪ್ಪ, ಕ.ಸಾ.ಪ ಖಜಾಂಚಿ ಕೆ.ಎನ್.ಶಿವಣ್ಣ, ಸಹ ಕಾರ್ಯದರ್ಶಿಗಳಾದ ಶಿವಣ್ಣ ಕೊಂಡಾಪುರ, ಚಿಕ್ಕಮದ್ದು ಡಿ.ಅಂಬರೀಶ್, ಕಾರ್ಯಾಧ್ಯಕ್ಷ ಟಿ.ರಾಮಚಂದ್ರಪ್ಪ, ಹಿರಿಯ ಉಪಾಧ್ಯಕ್ಷರುಗಳಾದ ಕಾರೇಹಳ್ಳಿಬಸವರಾಜ್, ನಾಗತಿಹಳ್ಳಿಮಂಜುನಾಥ್, ಚಂದ್ರಯ್ಯ, ಸಂಘಟನಾ ಕಾರ್ಯದರ್ಶಿ ಗಿರೀಶ್‌ಎಂ.ತೋಣಚೇನಹಳ್ಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ: ಮುರುಗೇಶ್, ಶಿವಶಂಕರ್, ಉಮಾದೇವಿ, ಎಂ.ಎಸ್.ರಮೇಶ್, ಬಿ.ಕೆ.ಮಂಜುನಾಥ್, ಮಹಂತೇಶ್,
ಮಂಜುನಾಥ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕವಿಗೋಷ್ಟಿಯಲ್ಲಿ ನಿಸಾರ್‌ಅಹಮ್ಮದ್, ನಾಗತಿಹಳ್ಳಿಮಂಜುನಾಥ್, ಚಿತ್ರದುರ್ಗ ಲಕ್ಷ್ಮಿಸಾಗರ್, ಕಲಾವಿದಚಂದ್ರು, ಸದಾಶಿವಸಂಕಲ್ಪ ಸೇರಿದಂತೆ ಜಿಲ್ಲೆಯ ಒಟ್ಟು ೪೮ ಮಂದಿ ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading