
ವರದಿ : ಕೆ ಟಿ ಓಬಳೇಶ ನೆಲಗೇತನಹಟ್ಟಿ
ನಾಯಕನಹಟ್ಟಿ :
ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮಾದಯ್ಯನಹಟ್ಟಿ ಗ್ರಾಮದಲ್ಲಿ ನೆಲಸಿರುವ ಶ್ರೀ ಕಾವಲು ಬಸವೇಶ್ವರ ಉತ್ಸವ ಗುರುವಾರ ದಿನದಂದೂ ಊರಿನ ಗ್ರಾಮಸ್ಥರು ಸಮ್ಮುಖದಲ್ಲಿ ಬಸವಣ್ಣನ ಮೂರ್ತಿಗೆ 108 ಕುಂಭಗಳ ನೀರಿನ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ನೂರಾರು ಭಕ್ತಾರ ಸಮ್ಮುಖದಲ್ಲಿ ಸಂಭ್ರಮದಿಂದ ಮದ್ಯಾಹ್ನ 2 ಗಂಟೆಗೆ ಜರುಗಿತು.
ಇದೇ ವೇಳೆ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಮಾತಾನಾಡಿದರು ನಮ್ಮ ಮಾದಯ್ಯನಹಟ್ಟಿ ಗ್ರಾಮದಲ್ಲಿ ನೆಲಸಿರುವ ಶ್ರಿ ಕಾವಲು ಬಸವೇಶ್ವರಸ್ವಾಮಿಗೆ ಶ್ರಾವಣ ಮಾಸದ ಎರಡನೇ ಗುರುವಾರದಂದೂ ನಾಯಕನಹಟ್ಟಿ ಹಾಗೂ ಮಾದಯ್ಯನಹಟ್ಟಿ ಗ್ರಾಮಸ್ಥರು ಸೇರಿ ಶ್ರೀ ಕಾವಲು ಬಸವೇಶ್ವರ ಸ್ವಾಮಿಗೆ 108 ನೀರಿನ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ಪೂರ್ವಜ್ಜರ ಕಾಲದಿಂದೂ ನಡೆಸಿಕೊಂಡು ಬಂದಿದ್ದವೆ ಅದರಂತೆ ಈ ದಿನ ಶ್ರೀ ಕಾವಲು ಬಸವೇಶ್ವರ ಸ್ವಾಮಿಗೆ ವಿಶೇಷ ಕೈ ಕಾರ್ಯಗಳು ನೀರಿನ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಅದ್ಧೂರಿಯಾಗಿ ಮಾಡಲಾಗಿದೆ ಎಂದರು.












ಇದೇ ಸಂಧರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಪಿ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯ್ತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಪೂಜಾರಿ ತಿಪ್ಪಯ್ಯ, ಓಬಯ್ಯ, ಯರ್ರಯ್ಯ, ದಳಪತಿ ನಾಗರಾಜ, ಕಾಳಪ್ಪ, ಬಸವರಾಜ ಹೀರೆಮಠ, ಜಿ.ಬಿ ಮುದಿಯಪ್ಪ, ಎಸ್.ಟಿ ಬೋರಸ್ವಾಮಿ, ಆರ್ ಪಾಲಯ್ಯ, ಎ.ಟಿ ತಿಪ್ಪೇಸ್ವಾಮಿ, ಕೆ ತಿಪ್ಪೇಸ್ವಾಮಿ, ಕುಮಾರ ಸ್ವಾಮಿ, ಕೇಶವಪ್ಪ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್ ಸೇರಿದಂತೆ ನಾಯಕನಹಟ್ಟಿ, ಮಾದಯ್ಯನಹಟ್ಟಿ, ಜಾಗನೂರಹಟ್ಟಿ, ಕನ್ನಯ್ಯನಹಟ್ಟಿ, ಕಾವಲು ಬಸವೇಶ್ವರ ನಗರದ ಗ್ರಾಮಸ್ಥರು ಭಕ್ತಾಧಿಗಳು ಇದ್ದರು.