September 16, 2025
IMG-20250414-WA0413.jpg

ಚಳ್ಳಕೆರೆ ಏ14 ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೊಂದಿದ್ದ ದೂರದೃಷ್ಟಿತ್ವ, ಚಿಂತನೆಗಳು, ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ . ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಸಮಾಜಮುಖಿ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರ ಸಾಧನೆ, ಹೋರಾಟ, ಆದರ್ಶಗಳು ಸ್ಮರಣೀಯ ಹಾಗೂ ಅನುಕರಣೀಯ. ಅಂಬೇಡ್ಕರ್ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗುವುದರ ಜೊತೆಗೆ ದಾರಿದೀಪವಾಗಲಿ. ಅಂಬೇಡ್ಕರ್ ಮಹಾನ್ ಪ್ರತಿಭಾಶಾಲಿ, ವಿಶ್ವಜ್ಞಾನಿಯಾಗಿದ್ದು ಅವರ ಬಗ್ಗೆ ಅರಿಯುವುದು ಬಹಳಷ್ಟಿದೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೂಂಡಾಗ ಮಾತ್ರ ಜಯಂತಿ ಕಾರ್ಯಕ್ರಮಕ್ಕೆ ಸಾರ್ಥಕವಾಗುತ್ತದೆ ಎಂದರು.
ತಹಸೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ‘ಅಕ್ಷರವಂಚಿತರಾಗಿದ್ದ, ಮನೆಕೆಲಸಕ್ಕೆ ಸೀಮಿತವಾಗಿದ್ದ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕು ನೀಡಿದವರು ಅಂಬೇಡ್ಕರ್. ಸಂವಿಧಾನ ಶಿಲ್ಪಿಯ ಆಶಯದಂತೆ ಮೌಢ್ಯಗಳನ್ನು ತೊರೆದು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದಾಗ ಮಾತ್ರ ಅಭಿವೃದ್ದಿ ಸಾದ್ಯ. ಅಂಬೇಡ್ಕರ್ ಹೇಳಿರುವಂತೆ ಪ್ರತಿಯೊಬ್ಬರ ಏಳಿಗೆ ಉನ್ನತಿ ಅವರವರ ಪರಿಶ್ರಮದಿಂದ ಮಾತ್ರ ಸಾದ್ಯ ಎಂಬುದನ್ನು ಅರಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮಂಜುಳಾ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ.ಉಪಾಧ್ಯಕ್ಷೆ ಸುಮಾ ಭರಮಯ್ಯ, ಸದಸ್ಯಾದ , ವೀರಭದ್ರಯ್ಯ, ವಕೀಲ ಶಶಿಧರ, ಮಾಜಿ ತಾಪಂ ಸ‌ದಸ್ಯ ಸಮಾರ್ಥರಾಯ್, ಡಿ.ಎಸ್.ಎಸ್. ವಿಜಯಕುಮಾರ್, ಮುಖಂಡರುಗಳಾದ ಮಾರಣ್ಣ, ಗುಜ್ಜಾರಪ್ಪ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ರುದ್ರಮುನಿ, ತಾಪಂ ಇಒ ಶಶಿಧರ್ .ಬಿಇಒ ಸುರೇಶ್.ಪೌರಾಯುಕ್ತಜಗರೆಡ್ಡಿ.ಸಮಾಜಕಲ್ಯಾಣಾಧಿಕಾರಿ ಜೇಮ್ಲನಾಯ್ಕ ಹೆದರಿದಂತೆ ನಗರಸಭೆ ಸದಸ್ಯರು.ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು.ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading