ಚಳ್ಳಕೆರೆ: ಚಳ್ಳಕೆರೆ ಪಟ್ಟಣದಲ್ಲಿ ಇಂದು ಲ್ಯಾಬ್ ತಂತ್ರಜ್ಞಾನ ದಿನ (Lab Technology Day) ಆಚರಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಲ್ಯಾಬ್ ತಂತ್ರಜ್ಞರ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 45 ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಲ್ಯಾಬ್ ಸೇವೆ ಸಲ್ಲಿಸಿದ ಶ್ರೀ ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರ ದೀರ್ಘಕಾಲದ ಸೇವೆಯನ್ನು ಉಪಸ್ಥಿತರು ಮೆಚ್ಚಿ ಅಭಿನಂದಿಸಿದರು.
ಈ ವೇಳೆ 29-03-2026 ಭಾನುವಾರ ನಡೆಯಲಿರುವ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನ ಕೂಡ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಲವು ಲ್ಯಾಬ್ ಪ್ರತಿನಿಧಿಗಳು ಭಾಗವಹಿಸಿದ್ದರು. ಸುರಕ್ಷ ಪಾಲಿ ಫರೀದ್ ಖಾನ್. ಸಂಜೀವಿನಿ ಲ್ಯಾಬ್‌ನ ಮುತ್ತು, ಗಂಗಾ ಲ್ಯಾಬ್‌ನ ಸಿದ್ದೇಶ್, ಬಾಲಾಜಿ ಬ್ಲಡ್ ಬ್ಯಾಂಕ್‌ನ ತಿಮ್ಮಪ್ಪ, ವಿನಾಯಕ ಲ್ಯಾಬ್‌ನ ರಮೇಶ್, ಮಹಾತ್ಮಾ ಗಾಂಧಿ ಲ್ಯಾಬ್‌ನ ಉಮೇಶ್, ಮೇಘಾಸಿರಿ ಲ್ಯಾಬ್‌ನ ಮುತ್ತು, ಸಿ.ಜಿ.ಎಸ್ ಲ್ಯಾಬ್‌ನ ಹರೀಶ್, ವಾಸವಿ ಲ್ಯಾಬ್‌ನ ತಿಪ್ಪೇಶ್, ಸರ್ಕಾರಿ ಲ್ಯಾಬ್‌ನ ಬೋರಯ್ಯ ಹಾಗೂ ಬಸವೇಶ್ವರ ಲ್ಯಾಬ್‌ನ ಶಿವಮೂರ್ತಿ ಉಪಸ್ಥಿತರಿದ್ದರು.
ಲ್ಯಾಬ್ ತಂತ್ರಜ್ಞರು ಆರೋಗ್ಯ ಸೇವೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದವರು ಅಭಿಪ್ರಾಯಪಟ್ಟರು.
About The Author
Discover more from JANADHWANI NEWS
Subscribe to get the latest posts sent to your email.