February 14, 2026
IMG-20260214-WA0124.jpg

ಚಳ್ಳಕೆರೆ: ತಂಬಾಕು ಬಳಕೆಯನ್ನು ತಡೆಯುವ ಹಾಗೂ ಯುವಜನರಲ್ಲಿ ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸುವ ಉದ್ದೇಶದಿಂದ “ತಂಬಾಕು ಮುಕ್ತ ಭಾರತ ಅಭಿಯಾನ (Tobacco-Free India)” ಕಾರ್ಯಕ್ರಮವನ್ನು ತಂಬಾಕು ನಿಯಂತ್ರ ಕೋಶ, ಚಿತ್ರದುರ್ಗ ಹಾಗೂ ಮಾರುತಿ ಪ್ಯಾರಾಮೆಡಿಕಲ್ ಮತ್ತು ಐ.ಟಿ.ಐ. ಕಾಲೇಜು, ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಕಾರ್ಯಕರ್ತರು ಹಾಗೂ ಜಿಲ್ಲಾ ತಂಬಾಕು ನಿಯಂತ್ರ ಕೋಶದ ಪ್ರತಿನಿಧಿ ತಿಪ್ಪೇಸ್ವಾಮಿವರು, 2047ರೊಳಗೆ ಭಾರತವನ್ನು ಆರೋಗ್ಯಕರ ಹಾಗೂ ತಂಬಾಕು ರಹಿತ ರಾಷ್ಟ್ರವನ್ನಾಗಿ ರೂಪಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಸರ್ಕಾರವು PIB ಹಾಗೂ MyBharat ಮುಂತಾದ ಉಪಕ್ರಮಗಳ ಮೂಲಕ ಯುವಕರಲ್ಲಿ ತಂಬಾಕು ಬಳಕೆಯನ್ನು ತಡೆಗಟ್ಟಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, COTPA 2003 ಕಾಯ್ದೆಯಡಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ತಂಬಾಕು ಮುಕ್ತ ಭಾರತದ ಪ್ರಮುಖ ಅಂಶಗಳ ಕುರಿತು ವಿವರಿಸಿದ ಅವರು, ‘ತಂಬಾಕು ಮುಕ್ತ ಯುವ ಅಭಿಯಾನ 3.0’ (TFYC) ಅಡಿಯಲ್ಲಿ 60 ದಿನಗಳ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಮಾರಾಟ ನಿಷೇಧ ಹಾಗೂ ಶಿಕ್ಷಣ ಸಂಸ್ಥೆಗಳ 100 ಗಜಗಳ ಒಳಗೆ ತಂಬಾಕು ಮಾರಾಟಕ್ಕೆ ನಿರ್ಬಂಧ ಸೇರಿದಂತೆ COTPA 2003 ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಗಳು ಮತ್ತು ಕಾಲೇಜುಗಳನ್ನು ತಂಬಾಕು ಮುಕ್ತ ಎಂದು ಘೋಷಿಸುವುದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕಾನೂನು ಉಲ್ಲಂಘಿಸುವವರಿಗೆ ₹5000 ವರೆಗೆ ದಂಡ ವಿಧಿಸುವುದು ಸೇರಿದಂತೆ ತಂಬಾಕು ಪ್ಯಾಕೇಜ್‌ಗಳ ಮೇಲೆ ಕಡ್ಡಾಯ ಎಚ್ಚರಿಕಾ ಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ ಎಂದು ಹೇಳಿದರು. ತಂಬಾಕು ತ್ಯಜಿಸಲು ಬಯಸುವವರಿಗೆ ವಿಶೇಷ ತ್ಯಜಿಸುವ ಕೇಂದ್ರಗಳು ಹಾಗೂ ಸಲಹಾ ಸೇವೆಗಳು ಲಭ್ಯವಿದ್ದು, ಯುವ ಪೀಳಿಗೆಯಲ್ಲಿ ತಂಬಾಕು ರಹಿತ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ‘ವಿಕಸಿತ ಭಾರತ್ @ 2047’ ದೃಷ್ಟಿಕೋನಕ್ಕೆ ಈ ಅಭಿಯಾನ ಮಹತ್ವದ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ತಂಬಾಕು ನಿಯಂತ್ರ ಸಮಿತಿಯನ್ನು ರಚಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರ ಕೋಶ, ಚಿತ್ರದುರ್ಗದ ತಿಪ್ಪೇಸ್ವಾಮಿ, ಮಾರುತಿ ಪ್ಯಾರಾಮೆಡಿಕಲ್ ಹಾಗೂ ಐ.ಟಿ.ಐ. ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರಾಘವೇಂದ್ರ ಎಂ., ಉಪನ್ಯಾಸಕರಾದ ಪ್ರೇಮ್, ಅನುಶ್ರೀ, ಸುಪ್ರೀತ, ಭಾಗ್ಯಶ್ರೀ, ಅಶ್ವಿನಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading