ಚಳ್ಳಕೆರೆ ಜ.14
ನಗರಸಭೆ ಅಧಿಕಾರಿಗಳೇ ಜನಪ್ರತಿನಿಧಿಗಳು ನೋಡಲೇ ಬೇಕಾದ ಸುದ್ದಿ ಇದು…
ಮುಂಚೆಯೇ ಎದ್ದು ನಗರದ ಸ್ವಚ್ಛತಾ ಕಾರ್ಯ ಆರಂಭಿಸುವ ಪೌರ ಕಾರ್ಮಿಕರು ಚಳಿ ಲೆಕ್ಕಿಸದೆ ಸ್ವಚ್ಚಾ ಕಾರ್ಯದಲ್ಲಿ ತೊಡಗುತ್ತಾರೆ ಇವರಿಗೆ ಸ್ವಚ್ಚತಾ ಸೈನಿಕರು ಎಂದು ಹೊಗಳುತ್ತಾರೆ.


ಹೌದು ಇದು ಚಳ್ಳಕೆರೆ
ಮುಂಜಾನೆಯ ನಡುಕ ಹುಟ್ಟಿಸುವ ಚಳಿಯಲ್ಲಿ ಯಾರಿಗೆ ತಾನೇ ಹಾಸಿಗೆಯಿಂದ ಏಳಲು ಮನಸ್ಸಾಗುತ್ತದೆ. ಆದರೆ, ನಗರದ ಪೌರಕಾರ್ಮಿಕರು ಇದಾವುದನ್ನು ಲೆಕ್ಕಿಸದೇ ನಿತ್ಯವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.
ಇವರಿಗೆ ಬೆಳಗಿನ ಉಪಹಾರ ಎಂದು ನಗರಸಭೆ ಅಧಿಕಾರಿಗಳು ಪೌರಕಾರಿರ್ಮಿಕರಿಗೆ ನಿಷೇಧಿತ ಪ್ಲಾಸ್ಟಿಕ್ ಕವರ್ ಹಾಕಿ ಪೇಪರ್ ನಲ್ಲಿ ಕಟ್ಟಿದ ಪೊಟ್ಟಣ ನೀಡುತ್ತಾರೆ .
ಅದು ರುಚಿಯಿಲ್ಲದೆ ಕುಳಿತುಕೊಳ್ಳಲು ಸರಿಯಾದ ಜಾಗವಿಲ್ಲದೆ ನಗರದ ಬೀದಿ .ಚರಂಡಿ ಸ್ವಚ್ಚತೆ ಮಾಡಿದ ಕಾರ್ಮಿಕರಿಗೆ ಯಾವ ರೀತಿ ಉಪಹಾರ ನೀಡುತ್ತಾರೆ . ನಗರಸಭೆ ಅಧಿಕಾರಿಗಳು ಯಾರೂ ಈ ತಿಂಡಿ ಸವಿಯುವುದಿಲ್ಲವಲ್ಲ ಇನ್ನು ತಿಂಡಿ ಸ್ಥಿತಿ ಈ ರೀತಿಯಾವರೆ ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅಗತ್ಯ ಮೂಲಭೂತ ಸೌಲಭ್ಯಗಳನ್ನೂ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ರೈತ ಹೋರಾಟಗಾರ್ತಿ ಜಯಲಕ್ಷ್ಮಿಯ ನಗರಸಭೆ ವಿರುದ್ದ ಅಕ್ರೋಶ ಹೊರಹಾಕಿದ್ದಾರೆ.

About The Author
Discover more from JANADHWANI NEWS
Subscribe to get the latest posts sent to your email.