ಸಂಭ್ರಮಕ್ಕೆ ಸಾಕ್ಷಿಯಾದ ಓಬಯ್ಯನಹಟ್ಟಿ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ.
ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ಕಲಾತಂಡಗಳೊಂದಿಗೆ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಜರುಗಿತು.





ನಾಯಕನಹಟ್ಟಿ -:ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಓಬಯ್ಯನಹಟ್ಟಿ
ಗ್ರಾಮದಲ್ಲಿ ನೆಲೆಸಿರುವ ಆರಾಧ್ಯದೈವ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ 1. ಗಂಟೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು.
ಸಂಜೆ ನಾಲ್ಕು ಗಂಟೆಗೆ ಶ್ರೀ ಅಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು.
ಆಂಜನೇಯಸ್ವಾಮಿ ರಥೋತ್ಸವಕ್ಕೆ ಗ್ರಾಮದ ಬಡ ಹುಚ್ಚೆಯ್ಯರ ಯಜಮಾನ್ ಮ್ಯಾಕಲು ಮಲ್ಲಯ್ಯ ಹಾಗೂ ಗೊಲ್ಲರಹಟ್ಟಿ ಯಾದವ ಸಮುದಾಯದ ಗೊಂಚಿಗರ್ ವಂಶಸ್ಥರ ಮನೆಯಿಂದ ಬಲಿ ಅನ್ನ ತರಲಾಯಿತು,
ಕಾಸು
ಮೀಸಲು ಮೊಸರು ತುಂಬಾ ಜಿಗಿ ಹಾಲು
ತಂದು ಶ್ರೀ ಆಂಜನೇಯಸ್ವಾಮಿ ರಥದ ಗಾಲಿಗಳಿಗೆ
ಎಡೆ ಹಾಕಲಾಯಿತು.
ಮಹಾಮಂಗಳಾರತಿ ನಂತರ ಗ್ರಾಮಸ್ಥರು ರಥಕ್ಕೆ ಚಾಲನೆ ನೀಡಿದರು.
ಇನ್ನೂ ರಥೋತ್ಸವ ಮುಂಚಿತವಾಗಿ ಮುಕ್ತಿ
ಬಾವುಟ ಆರಾಜು ಪ್ರಕ್ರಿಯೆ ನಡೆಯಿತು
ಓಬಯ್ಯನಹಟ್ಟಿ ಗ್ರಾಮದ ಅಂಗಡಿ ಮಾರಯ್ಯ 51,000 ರೂ.ಗೆ.
ಮುಕ್ತಿ ಬಾವುಟವನ್ನು ಪಡೆದುಕೊಂಡರು.
ಇನ್ನೂ ಗ್ರಾಮದ ಯುವಕರು ರಥೋತ್ಸವದ ವೇಳೆ ಆಂಜನೇಯಸ್ವಾಮಿ ಸರಿಸುವ ಮೂಲಕ ವ್ಯಕ್ತಿಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಪಿ.ಎಂ. ಮಹಾದೇವಣ್ಣ, ಕಾಕ ಸೂರಯ್ಯ, ಜಿ. ದಳವಾಯಪ್ಪ, ಬಿಜೆಪಿ ಮುಖಂಡ ಡಿ. ಎಚ್. ಪರಮೇಶ್ವರಪ್ಪ, ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಂಡೆ ಕಪಿಲೆ ಓಬಣ್ಣ, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ಗೀತಾ ಸಿ. ಕುಮಾರ್, ಲಕ್ಷ್ಮೀ ಮಹಾದೇವಣ್ಣ, ಹಾಗೂ ಗ್ರಾಮದ ಯುವ ಮುಖಂಡರಾದ ಡಿ ಟಿ ಕಾಮರಾಜ್, ಕುರುಬರ ಅಜ್ಜಣ್ಣ, ದೊಡ್ಡಜ್ಜಯ, ಪಾಟೀಲ್ ಮಹದೇವಣ್ಣ, ಬೋರಜ್ಜಯ್ಯ, ಗಿಡ್ಡಾಪುರ ಶ್ರೀನಿವಾಸ್, ಮಾಳಜ್ಜಯ್ಯ, ಸೇರಿದಂತೆ ಸಮಸ್ತ ಓಬಯ್ಯನಹಟ್ಟಿ ಗ್ರಾಮಸ್ಥರು ವಿವಿಧ ಹಳ್ಳಿಗಳ ಭಕ್ತಾದಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.