ಚಳ್ಳಕೆರೆ: ನಗರದ 31 ವಾರ್ಡ್ಗಳಲ್ಲಿ ರಸ್ತೆ ಚರಂಡಿ ಕುಡಿಯುವ ನೀರು, ಬೀದಿ ದೀಪ ಸ್ಮಶಾನ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಬಗ್ಗೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನಗರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಜೈ ತುನ್ ಬೀ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 2025 26 ನೇ ಸಾಲಿನ ಎರಡನೇ ಆಯವ್ಯಯ ಪೂರ್ವಭಾವಿ ಸಭೆ ಹಾಗೂ ಸಾರ್ವಜನಿಕರ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.



ಈ ವೇಳೆ ಮಾತನಡಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಗೌರವಾಧ್ಯಕ್ಷ ಭೋಜರಾಜ ನಗರದಲ್ಲಿರುವ ಪಾವಗಡ ರಸ್ತೆ ರಹೀಮ್ ನಗರ ಸೇರಿದಂತೆ ಹಲವು ವಾರ್ಡ್ಗಳಲ್ಲಿನ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಅಲ್ಲದೆ ಬೀದಿ ನಾಯಿಗಳ ಹಾವಳಿ ಸುರಕ್ಷಿತ ರಸ್ತೆ ನಿರ್ಮಾಣ ಬೀದಿ ದೀಪ ನಿರ್ವಹಣೆ ಮಾಡುವಂತೆ ಒತ್ತಾಯಿಸಿದರು.
ಶರಾವತಿ ಪ್ರಿಂಟಿಂಗ್ ಪ್ರೆಸ್ ಮಾಲಿಕ ಮುರಳಿ ಮಾತನಾಡಿ ನಗರದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು ಸಂತೆ ಮೈದಾನ ಮಟನ್ ಮಾರ್ಕೆಟ್ ಕಸದ ರಾಶಿಯಿಂದಾಗಿ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿವೆ ವಾರಕ್ಕೆ ಒಮ್ಮೆಯಾದರೂ ನಗರಸಭೆ ಅಧ್ಯಕ್ಷರು ಪೌರಾಯುಕ್ತರು ಹಾಗೂ ಸದಸ್ಯರು ವಾರ್ಡ್ ಗಳಿಗೆ ಭೇಟಿ ನೀಡಿದರೆ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ನಗರದಲ್ಲಿ ಹಣ್ಣು ತರಕಾರಿ ಹಾಗೂ ಹೂವಿನ ಮಾರ್ಕೆಟ್ ಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಮಳಿಗೆಗಳನ್ನು ನಿರ್ಮಿಸುವಂತೆ ಸಲಹೆ ನೀಡಿದರು.
ನಗರ ಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯ ಪರಸಪ್ಪ ಮಾತನಾಡಿ ನಗರಸಭೆಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡುತ್ತಿಲ್ಲ ಎಂಬುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ನಗರದ ನಾಲ್ಕು ದಿಕ್ಕುಗಳಲ್ಲಿಯೂ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಎಲ್ಲಿಯೂ ಶೌಚಾಲಯ ನಿರ್ಮಿಸದೆ ಇರುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ವಾಲ್ಮೀಕಿ ನಗರದ ಎಲ್ಐಸಿ ಕಚೇರಿ ಮುಂಭಾಗದಿಂದ ರಾಘವೇಂದ್ರ ಮಠದ ವರೆಗೂ ರಸ್ತೆಗಳು ಹಾಳಾಗಿದ್ದು ಇಲ್ಲಿ ದಿನನಿತ್ಯ ಶಾಲಾ ಕಾಲೇಜಿನ ವಾಹನಗಳು ಓಡಾಡುತ್ತಿದ್ದು ಇದರಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಕೂಡಲೇ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೆ ಆರ್ ಎಸ್ ಪಕ್ಷದ ಮುಖಂಡ ಮಹೇಶ್ ಮಾತನಾಡಿ ನಗರದ ತ್ಯಾಜ್ಯ ನೀರು ತಾಲೂಕಿನ ನಗರಂಗೆರೆ ಕೆರೆಗೆ ಬಿಡುತ್ತಿರುವುದರಿಂದ ಹಾಳಾಗಿದ್ದು ಅಲ್ಲಿನ ಜನತೆಗೆ ಸಮಸ್ಯೆ ಉಂಟಾಗುತ್ತಿದೆ ಎಲ್ಲ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ತಾಲೂಕು ಸಮಸ್ಯೆಗಳು ಎಂಬ ಸಾಮಾಜಿಕ ಜಾಲತಾಣ ರೂಪಿಸಿದ್ದು ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹಾಕಿದರು ಯಾವುದೇ ಅಧಿಕಾರಿಗಳು ತ್ವರಿತ ಗತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಶಾಸಕರು ಸೇರಿದಂತೆ ಎಲ್ಲಾ ಅಧಿಕಾರಿಗಳು ಈ ಸಾಮಾಜಿಕ ಜಾಲತಾಣದ ಗ್ರೂಪಿನಲ್ಲಿ ಇದ್ದರು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ನಗರಸಭೆ ಕಚೇರಿ ನಿರ್ಮಾಣ ಆಗದೆ ಇರುವುದರಿಂದ ರಂಗಮಂದಿರದಲ್ಲಿ ಕಚೇರಿ ನಡೆಸುತ್ತಿದ್ದು ಇದರಿಂದಾಗಿ ತಾಲೂಕಿನ ಕಲಾವಿದರಿಗೆ ತೊಂದರೆ ಉಂಟಾಗುತ್ತಿದೆ ಕೂಡಲೇ ನಗರಸಭೆ ಕಟ್ಟಡವನ್ನು ನಿರ್ಮಿಸಲು ತಿಳಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಹಾಗೂ ನಗರಸಭೆ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದ್ದು ನಗರದ ಸರ್ವತೋಮುಖ ಬೆಳವಣಿಗೆಗೆ ಹಣ ಮೀಸಲಿಡಲಾಗುವುದು
ಜಗರೆಡ್ಡಿ
ಪೌರಾಯುಕ್ತ
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈ ತುನ್ ಬೀ ಉಪಾಧ್ಯಕ್ಷೆ ಸುಜಾತ ನಗರಸಭೆ ಸದಸ್ಯರಾದ ವೀರಭದ್ರಪ್ಪ ಜಯಲಕ್ಷ್ಮಿ ಬಡಗಿ ಪಾಪಣ್ಣ ವಿರೂಪಾಕ್ಷಪ್ಪ ಅನ್ವರ್ ಮಾಸ್ಟರ್ ಸಾಕಮ್ಮ ಪಾಲಮ್ಮ ಶಿವಕುಮಾರ್ ನಟರಾಜ್ ಪ್ರಕಾಶ್ ನೇತಾಜಿ ಆರ್ ಪ್ರಸನ್ನ ಪೌರಾಯುಕ್ತ ಜಗರೆಡ್ಡಿ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.