ಚಳ್ಳಕೆರೆ ಡಿ.13
ಪವನ ಪುತ್ರ ಹನುಮ ಜಯಂತಿಯನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹನುಮ ಜಯಂತಿ ನಿಮಿತ್ತ ನಗರ ಸೇರಿದಂತೆ ತಾಲೂಕಿನಾದ್ಯಂತ ಮಾರುತಿ ಮಂದಿರಗಳಲ್ಲಿ ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಪೂಜೆ, ಪುನಸ್ಕಾರ ನೆರವೇರಿಸಲಾಯಿತು.
ನಗರದ ಪೇಟೆಆಂಜನೇಯ. ಕರೆಕಲ್ ಆಂಜನೇಯ. ಸೋಮಗುದ್ದು ರಸ್ತೆಯ ಆಂಜನೇಯ ಸೆಡರಿದಂತೆ ವಿವಿಧೆಡೆಯಿರುವ ಆಂಜನೇಯ ಸ್ವಾಮಿ ದೇವಸ್ಥಾನಗಳನ್ನು ಬಣ್ಣ ಬಣ್ಣದ ರಂಗೋಲಿ, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಧಾರ್ಮಿಕ ವಿವಿಧಾನಗಳೊಂದಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು.
ಶ್ರೀ ಆಂಜನೇಯಸ್ವಾಮಿಯ ದರ್ಶನ ಪಡೆಯಲು ನೂರಾರು ಸಂಖ್ಯೆಯಲ್ಲಿ ಮಾರುತಿ ದೇವಸ್ಥಾನಗಳತ್ತ ಬರುತ್ತಿರುವ ದೃಶ್ಯ ಕಂಡು ಬಂತು.














About The Author
Discover more from JANADHWANI NEWS
Subscribe to get the latest posts sent to your email.