
ಚಿತ್ರದುರ್ಗ ನ.13
ಮನೆಯ ಕಾಂಪೌಂಡ್ ಒಳಗೆ ನುಗ್ಗಿ ಮಹಿಳೆಯಕೊರಳಲ್ಲಿದ್ದ ಚಿನ್ಬದ ಸರ ಕದ್ದು ಪರಾರಿ
ಚಿತ್ರದುರ್ಗದಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ . ಮನೆಯ ಕಂಪೌಂಡ್ ಒಳಗೆ ನುಗ್ಗಿ ಮಹಿಳೆಯ ಚಿನ್ನದ ಸರಗಳ್ಳತನ ಮಾಡಿದ ಆರೋಪಿ, ಅಲ್ಲಿಂದ ಓಡಿ ಹೋಗಿದ್ದಾನೆ. ಸೌಮ್ಯ ಮಂಜುನಾಥ್ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಕಾಲಿಗೆ ಬುದ್ದಿ ಹೇಳಿದ್ದಾನೆ.
ಸೌಮ್ಯ ಮಂಜುನಾಥ್ ತಮ್ಮ ಮನೆಯ ಅಂಗಳಕ್ಕೆ ನೀರು ಹಾಕಲೆಂದು ಹೊರಗೆ ಬಂದಿದ್ದರು. ಇದನ್ನು ಗಮನಿಸಿದ್ದ ಸರಗಳ್ಳ, ಮಾಸ್ಕ್ ಧರಿಸಿ ಬಂದಿದ್ದ. ಆ ಕಡೆ ಈ ಕಡೆ ನೋಡಿ, ಕಾಂಪೌಂಡ್ ಹಾರಿ, 2.50 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ.
ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.