September 15, 2025
FB_IMG_1731506221365.jpg


ಹಿರಿಯೂರು:
ತಳಸಮುದಾಯದವರು ಇನ್ನೂ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಪಡೆಯಲಾಗದ ಕಾರಣ ಸಾಮಾಜಿಕ ಅಸಮಾನತೆ ಜೀವಂತವಾಗಿದೆ. ಜನರು ಜೀತದ ಮನಃಸ್ಥಿತಿಯಿಂದ ಹೊರಬರಬೇಕಿದೆ ಎಂಬುದಾಗಿ ಅಮೇರಿಕದಲ್ಲಿ ನರರೋಗ ತಜ್ಞರಾಗಿರುವ ಜಿ. ರಂಗಯ್ಯ ತಿಳಿಸಿದರು.
ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರದ ಮಹತ್ವ ಅರಿತಿದ್ದ ಬೆರಳಣಿಕೆಯಷ್ಟು ಜನ ತಮ್ಮ ಮಕ್ಕಳಿಗೆ ಅಕ್ಷರ ಕಲಿಸಿದ್ದರಿಂದ ನನ್ನಂತವರು ಶಿಕ್ಷಣ ಪಡೆಯಲು ಸಾಧ್ಯವಾಯಿತು ಶಿಕ್ಷಣದಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ನಿರಂತರ ಓದು ನಮ್ಮನ್ನು ಮಹರ್ಷಿ ವಾಲ್ಮಿಕಿಯಂತೆ ಜ್ಞಾನಿಯನ್ನಾಗಿಸುತ್ತದೆ. ವಾಲ್ಮಿಕಿ ಜಯಂತಿಯಂತ ಕಾರ್ಯಕ್ರಮ ನಮ್ಮ ಮೌಢ್ಯದ ಕಣ್ಣು ತೆರೆಸಬೇಕು ಎಂಬುದಾಗಿ ಅವರು ಹೇಳಿದರು.
ರಜಪೂತ್ ಸಮಾಜದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಎನ್.ಎಸ್. ಜೋಧಾ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಕೇವಲ ಒಂದು ಗ್ರಾಮದವರು ಮಾತ್ರ ಆಚರಣೆ ಮಾಡದೇ ಸುತ್ತಮುತ್ತಲ ಗ್ರಾಮದ ಜನರನ್ನು ಒಗ್ಗೂಡಿಸಿ, ಅದ್ದೂರಿಯಾಗಿ ಆಚರಣೆ ಮಾಡಬೇಕು, ಇದಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂಬುದಾಗಿ ಹೇಳಿದರು.
ಈ ಮೆರವಣಿಗೆಯಲ್ಲಿ ವಾಲ್ಮಿಕಿ ಸಮಾಜದ ಗೌರವ ಅಧ್ಯಕ್ಷರಾದ ಶಿವಣ್ಣ, ರಜಪೂತ್ ಸಮಾಜದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಎನ್.ಎಸ್. ಜೋಧಾ , ಗ್ರಾಮಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಅಲ್ತಾಫ್, ಬಿ.ಜೆ.ಪಿ. ಮುಖಂಡರಾದ ಬಸವರಾಜನಾಯಕ, ಬಿ.ಆರ್.ಸಂದೇಶ್, ಬಿ.ಟಿ.ರಾಜಣ್ಣ, ಆರ್.ಕೃಷ್ಣಪ್ಪ, ಜೆ.ಜೆ.ಹಳ್ಳಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ನಟರಾಜ್, ಕೆ.ಸುನೀಲ್, ಲೋಕೇಶ್, ನಿರಂಜನಮೂರ್ತಿ, ರವಿ, ಜೆ.ಜೆ.ಹಳ್ಳಿ ಯುವ ಮೋರ್ಚಾ ಕೆ.ಎಸ್.ಆರ್.ಟಿ.ಸಿ. ಎಸ್.ಟಿ.ಮಂಜುನಾಥ್, ಕೆ.ಎಸ್.ಆರ್.ಟಿ.ಸಿ. ತಿಪ್ಪಣ್ಣ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading